»   » ನಟಿ ಲಕ್ಷ್ಮಿ ರೈ ಬಾಳಿಗೆ ಮಗ್ಗುಲಮುಳ್ಳಾದರೆ ಧೋನಿ?

ನಟಿ ಲಕ್ಷ್ಮಿ ರೈ ಬಾಳಿಗೆ ಮಗ್ಗುಲಮುಳ್ಳಾದರೆ ಧೋನಿ?

By: ಉದಯರವಿ
Subscribe to Filmibeat Kannada

ಬೆಳಗಾವಿಯ ಚೆಲುವೆ ನಟಿ ಲಕ್ಷ್ಮಿ ರೈ (ಈಗ ರಾಯ್ ಲಕ್ಷ್ಮಿ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದಾರೆ) ಕಡೆಗೂ ಧೋನಿ ಬಗ್ಗೆ ಮೌನ ಮುರಿದಿದ್ದಾರೆ. ಅವರು ತಾನೇ ಎಷ್ಟು ದಿನ ಎಂದು ಸಹಿಸಿಕೊಳ್ಳಲು ಸಾಧ್ಯ? ಕಡೆಗೂ ಅವರ ಚದುರಿದ ಚಿತ್ರ ಅವರ ಮನಸ್ಸಿನಿಂದ ಅನಾವರಣಗೊಂಡಿದೆ.

ಭಾರತ ಕ್ರಿಕೆಟ್ ತಂಡದ ಶಾಂತ ಸ್ವಭಾವದ ನಾಯಕ ಎನ್ನಿಸಿಕೊಂಡಿರುವ ಧೋನಿ ಹೆಸರು ನಟಿ ಲಕ್ಷ್ಮಿ ರೈ ಅವರೊಂದಿಗೆ ಥಳುಕು ಹಾಕಿಕೊಂಡಿತ್ತು. ಈಗಲೂ ಇವರಿಬ್ಬರ ಸಂಬಂಧದ ಬಗ್ಗೆ ಪ್ರಸ್ತಾಪಿಸದೆ ಮಾತು ಮುಂದಕ್ಕೇ ಹೋಗದಂತಹ ಪರಿಸ್ಥಿತಿ ಇದೆ. ಈ ಬಗ್ಗೆ ರೈ ಲಕ್ಷ್ಮಿಗೆ ನಖಶಿಖಾಂತ ಬೇಸರವೂ ಇದೆ. ['ಶೃಂಗಾರ' ತಾರೆ ಲಕ್ಷ್ಮಿ ರೈ ಕುರಿತ ಕೆಲವು ಸಂಗತಿಗಳು]

ಈ ಬಗ್ಗೆ ಮಾತನಾಡಿರುವ ಅವರು, "ತಮ್ಮಿಬ್ಬರ ಸಂಬಂಧದ ಬಗ್ಗೆ ಈಗಲೂ ಜನ ಮಾತನಾಡುತ್ತಲೇ ಇದ್ದಾರೆ. ಇದು ನನಗೆ ತೀರಾ ಕಸಿವಿಸಿ ವಿಚಾರ. ಅವರ ಜೊತೆಗಿನ ಸಂಬಂಧ ನನ್ನ ಬಾಳಿನಲ್ಲಿ ಅಚ್ಚಳಿಯದ ಕಲೆಯಾಗಿ, ಗಾಯವಾಗಿ, ಮುಳ್ಳಾಗಿ ಉಳಿದುಬಿಟ್ಟಿದೆ" ಎಂದಿದ್ದಾರೆ.

Relationship with Dhoni like a stain says Raai Lakshmi

ಒಮ್ಮೊಮ್ಮೆ ನನಗೆ ನಿಜಕ್ಕೂ ಅಚ್ಚರಿಯೂ ಆಗುತ್ತದೆ. ನಮ್ಮಿಬ್ಬರ ಬಗ್ಗೆ ಮಾತನಾಡಲು ಜನಕ್ಕೆ ಇಷ್ಟೆಲ್ಲಾ ಎನರ್ಜಿ, ತಾಳ್ಮೆ ಇದೆಯಲ್ಲಾ ಎಂದು. ಟಿವಿ ವಾಹಿನಿಗಳಂತೂ ಧೋನಿ ಇತಿಹಾಸ ಪುಟಗಳನ್ನು ಕೆದಕುತ್ತಾ ನಮ್ಮಿಬ್ಬರ ಸಂಬಂಧಕ್ಕೆ ಉಪ್ಪು ಹುಳಿ ಖಾರ ಹಾಕಿದೆ ಇದ್ದರೆ ಅವರಿಗೆ ತಿಂದ ಅನ್ನ ಜೀರ್ಣವಾಗಲ್ಲ ಎಂದು ತಮ್ಮ ಮನಸ್ಸಿನ ಬೇಗುದಿಯನ್ನು ಹೊರಹಾಕಿದ್ದಾರೆ.

ಮುಂದೊಮ್ಮೆ ನನಗೆ ಮದುವೆಯಾಗಿ, ಮಕ್ಕಳಾಗಿ ಅವರು ಈ ರೀತಿಯ ಕಾರ್ಯಕ್ರಮ ನೋಡಿ ನನ್ನನ್ನೇ ಕೇಳುತ್ತಾರೋ ಏನೋ! ಧೋನಿ ಜೊತೆಗಿನ ಸಂಬಂಧ ಕಳೆದುಕೊಂಡ ಬಳಿಕ ನಾನು ಮೂರು ಅಥವಾ ನಾಲ್ಕು ಮಂದಿ ಜೊತೆಗೆ ರಿಲೇಷನ್ ಶಿಪ್ ಇಟ್ಟುಕೊಂಡಿದ್ದೇನೆ. ಆದರೆ ಅದನ್ನು ಮಾತ್ರ ಯಾರೂ ಗಮನಿಸುತ್ತಿಲ್ಲ ಎಂದಿದ್ದಾರೆ.

ಈಗಲೂ ಧೋನಿ ಮತ್ತು ನನ್ನ ನಡುವೆ ಒಳ್ಳೆಯ ಒಡನಾಡವಿದೆ. ಅವರಿಗೂ ಮದುವೆಯಾಗಿ ಹೆಂಡತಿ ಜೊತೆಗೆ ಹಾಯಾಗಿದ್ದಾರೆ. ಇದೆಲ್ಲವೂ ಮುಗಿದ ಅಧ್ಯಾಯ. ಆದರೆ ಮಾಧ್ಯಮಗಳು ಮಾತ್ರ ನಮ್ಮಿಬ್ಬರ ಬಗ್ಗೆ ಬರೆಯುವುದನ್ನು ನಿಲ್ಲಿಸಿಲ್ಲ. ಇನ್ನಾದರೂ ನಿಲ್ಲಿಸಿ ಪುಣ್ಯ ಕಟ್ಟಿಕೊಳ್ಳಿ ಎಂಬರ್ಥದಲ್ಲಿ ರೈ ಲಕ್ಷ್ಮಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

English summary
It's been a good five years since actor Raai Laxmi broke up with cricketer MS Dhoni, but she says she still keeps stumbling upon reports that talk about their affair and she hates it.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada