Don't Miss!
- Lifestyle
Horoscope Today 25 Jan 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
Breaking; ಪ್ರೀತಿ ಗೆಹ್ಲೋತ್ ಸೇರಿ 3 ಐಎಎಸ್ ಅಧಿಕಾರಿಗಳ ವರ್ಗಾವಣೆ
- Sports
IND vs NZ T20 Series: ಟಿ20 ಸರಣಿಯಿಂದ ಹೊರಬಿದ್ದ ಟೀಂ ಇಂಡಿಯಾ ಆರಂಭಿಕ ಬ್ಯಾಟರ್
- Automobiles
ಈ ವರ್ಷವೇ ಖರೀದಿಗೆ ಸಿಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳು
- Finance
Union Budget 2023: ತೆರಿಗೆದಾರರಿಗೆ ದೀರ್ಘಾವಧಿ ತೆರಿಗೆ ವಿನಾಯಿತಿ ಘೋಷಿಸಿ: KPMG
- Technology
ಮೆಸೆಂಜರ್ಗಾಗಿ ಕೆಲವು ಫೀಚರ್ಸ್ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪಠಾಣ್' ಸಿನಿಮಾಕ್ಕೆ ಬೆಟ್ಟದಷ್ಟು ಸಂಭಾವನೆ ಪಡೆದ ದೀಪಿಕಾ, ಶಾರುಖ್, ಜಾನ್ ಅಬ್ರಹಾಂ!
ಫ್ಲಾಪ್‌ಗಳ ಮೇಲೆ ಫ್ಲಾಪ್‌ಗಳನ್ನು ನೀಡಿ ಬಸವಳಿದಿರುವ ಬಾಲಿವುಡ್ ತನ್ನೆಲ್ಲ ನಿರೀಕ್ಷೆಯನ್ನು ಶಾರುಖ್ ಖಾನ್ ಮೇಲಿರಿಸಿದೆ.
ಬಾಲಿವುಡ್ ಸ್ಟಾರ್‌ಗಳಾಗಿರುವ ಸಲ್ಮಾನ್ ಖಾನ್, ಆಮಿರ್ ಖಾನ್, ಅಕ್ಷಯ್ ಕುಮಾರ್ ಎಲ್ಲರೂ ಒಬ್ಬರ ಹಿಂದೊಬ್ಬರು ಸೋತ ಬಳಿಕ ಇದೀಗ ಶಾರುಕ್ ಖಾನ್ ಸಿನಿಮಾ 'ಪಠಾಣ್' ಬಿಡುಗಡೆಗೆ ತಯಾರಾಗಿದ್ದು, ಈ ಸಿನಿಮಾ ಆದರೂ ಬಾಲಿವುಡ್‌ಗೆ ಮರುಜೀವ ಕೊಡುತ್ತದೆಯೇ ಎಂದು ನಿರೀಕ್ಷೆ ಮಾಡಲಾಗುತ್ತಿದೆ.
ಕಾರ್ತಿಕ್
ಆರ್ಯನ್
ಜೊತೆ
ತಳುಕು
ಹಾಕಿಕೊಂಡ
ಬಾಲಿವುಡ್
4
ಮಂದಿ
ನಟಿಯರು
ಇವರೇ!
'ಪಠಾಣ್' ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಬಿಡುಗಡೆ ಆಗಿರುವ ಲುಕ್‌ಗಳು, ಹಾಡುಗಳು ಇದನ್ನು ಸಾರಿ ಹೇಳುತ್ತಿವೆ. ಅದ್ಧೂರಿ ನಿರ್ಮಾಣ ಮಾತ್ರವಲ್ಲ, ಸಿನಿಮಾದಲ್ಲಿ ನಟಿಸಿರುವ ನಟರೂ ಸಹ ಭಾರಿ ದೊಡ್ಡ ಸಂಭಾವನೆಯನ್ನೇ ಪಡೆದುಕೊಂಡಿದ್ದಾರೆ.
'ಪಠಾಣ್' ಸಿನಿಮಾದಲ್ಲಿ ಶಾರುಖ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಅವರ ಜೊತೆಗೆ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಸಹ ಇದ್ದಾರೆ. ಇದೊಂದು ಸ್ಪೈ ಥ್ರಿಲ್ಲರ್ ಸಿನಿಮಾ ಆಗಿದ್ದು, ಹಲವು ದೇಶಗಳಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಸಿನಿಮಾವನ್ನು ಯಶ್ ರಾಜ್ ಫಿಲಮ್ಸ್‌ನ ಆದಿತ್ಯ ಚೋಪ್ರಾ ನಿರ್ಮಿಸುತ್ತಿದ್ದು, ಶಾರುಖ್ ಖಾನ್ ಸೇರಿದಂತೆ ಸಿನಿಮಾದ ಇತರ ನಟರಿಗೆ ದುಬಾರಿ ಸಂಭಾವನೆಯನ್ನೇ ನೀಡಿದ್ದಾರೆ.

ಶಾರುಖ್ ಖಾನ್‌ಗೆ ನೀಡುತ್ತಿರುವ ಸಂಭಾವನೆ ಎಷ್ಟು?
'ಪಠಾಣ್' ಸಿನಿಮಾಕ್ಕಾಗಿ ಶಾರುಖ್ ಖಾನ್‌ಗೆ ಬರೋಬ್ಬರಿ 100 ಕೋಟಿ ಹಣವನ್ನು ಆದಿತ್ಯ ಚೋಪ್ರಾ ನೀಡುತ್ತಿದ್ದಾರಂತೆ. ವಿಶೇಷವೆಂದರೆ ಈಗಾಗಲೇ ಕೆಲವು ನಟರು ಈಗ ಸಿನಿಮಾಕ್ಕೆ 100 ಕೋಟಿ ಪಡೆಯುತ್ತಿದ್ದಾರೆ. ಆದರೆ ಶಾರುಖ್ ಖಾನ್ ಇದೇ ಮೊದಲ ಬಾರಿಗೆ ತಮ್ಮ ಸಿನಿಮಾಕ್ಕೆ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಈ ಮುನ್ನ ತಮ್ಮ ಯಾವ ಸಿನಿಮಾಕ್ಕೂ ಶಾರುಖ್ ಖಾನ್ ಇಷ್ಟು ದೊಡ್ಡ ಸಂಭಾವನೆಯನ್ನು ಪಡೆದಿರಲಿಲ್ಲ.

ದೀಪಿಕಾ ಪಡುಕೋಣೆ ಪಡೆದ ಸಂಭಾವನೆ ಎಷ್ಟು?
ಇನ್ನು ನಟಿ ದೀಪಿಕಾ ಪಡುಕೋಣೆ ಸಹ ಭಾರಿ ಸಂಭಾವನೆಯನ್ನೇ ಸಿನಿಮಾಕ್ಕಾಗಿ ಪಡೆದಿದ್ದಾರೆ. ಈ ಸಿನಿಮಾಕ್ಕಾಗಿ ಅವರಿಗೆ 15 ಕೋಟಿ ಸಂಭಾವನೆ ನೀಡಲಾಗುತ್ತಿದೆಯಂತೆ. ದೀಪಿಕಾ ಪಡುಕೋಣೆ ಈ ಸಿನಿಮಾದಲ್ಲಿ ಸಾಕಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿರುವ 'ಬೇಷರಮ್' ಹಾಡಿನಲ್ಲಂತೂ ಹಲವು ಬಣ್ಣ-ಬಣ್ಣದ ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಕೆಲವು ಆಕ್ಷನ್ ದೃಶ್ಯಗಳಲ್ಲಿಯೂ ದೀಪಿಕಾ ನಟಿಸಿದ್ದಾರಂತೆ.

ಜಾನ್ ಅಬ್ರಹಾಂಗೆ ಎಷ್ಟು ಸಂಭಾವನೆ?
ಇನ್ನು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಾನ್ ಅಬ್ರಹಾಂ ಸಹ ದೊಡ್ಡ ಮೊತ್ತದ ಸಂಭಾವನೆಯನ್ನೇ ಕೊಂಡೊಯ್ಯುತ್ತಿದ್ದಾರೆ. ಜಾನ್ ಅಬ್ರಹಾಂಗೆ ದೀಪಿಕಾ ಪಡುಕೋಣೆಗಿಂತಲೂ ಹೆಚ್ಚು ಅಂದರೆ 20 ಕೋಟಿ ಸಂಭಾವನೆಯನ್ನು ಆದಿತ್ಯ ಚೋಪ್ರಾ ನೀಡಿದ್ದಾರೆ. ಜಾನ್ ಅಬ್ರಹಾಂ 'ಪಠಾಣ್' ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರಂತೆ. ದೀಪಿಕಾ ಪಡುಕೋಣೆಗಿಂತಲೂ ಹೆಚ್ಚು ದಿನ ಚಿತ್ರೀಕರಣದಲ್ಲಿ ಭಾಗವಹಿಸಿರುವುದು ಮಾತ್ರವೇ ಅಲ್ಲದೆ ಹಲವು ಕಠಿಣ ಆಕ್ಷನ್ ದೃಶ್ಯಗಳಲ್ಲಿಯೂ ಪಾಲ್ಗೊಂಡಿದ್ದಾರಂತೆ.

ಸಲ್ಮಾನ್ ಖಾನ್-ಹೃತಿಕ್ ಅತಿಥಿ ಪಾತ್ರದಲ್ಲಿ
ಇನ್ನು ಈ ಸಿನಿಮಾದಲ್ಲಿ ಎರಡು ವಿಶೇಷ ಎಂಟ್ರಿಗಳಿವೆ. ನಟ ಸಲ್ಮಾನ್ ಖಾನ್ ಹಾಗೂ ನಟ ಹೃತಿಕ್ ರೋಷನ್ ಅವರುಗಳು ಅತಿಥಿ ಪಾತ್ರದಲ್ಲಿ 'ಪಠಾಣ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಶಾರುಖ್ ಖಾನ್‌ರ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಸಲ್ಮಾನ್ ಖಾನ್ ಹಣ ಪಡೆದಿಲ್ಲವಂತೆ. ಹಾಗೆಯೇ ಹೃತಿಕ್ ರೋಷನ್ ಸಹ ಈ ಸಿನಿಮಾದಲ್ಲಿ ನಟಿಸಲು ಹಣ ಪಡೆದಿಲ್ಲ ಎನ್ನಲಾಗುತ್ತಿದೆ. ಸಲ್ಮಾನ್ ಖಾನ್ ಹಾಗೂ ಹೃತಿಕ್ ರೋಷನ್ ಸಹ ಬೇರೆ ಸಿನಿಮಾಗಳಲ್ಲಿ ಸ್ಪೈ ಪಾತ್ರದಲ್ಲಿ ನಟಿಸಿರುವ ಕಾರಣ ಈ ಸಿನಿಮಾದಲ್ಲಿ ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.