For Quick Alerts
  ALLOW NOTIFICATIONS  
  For Daily Alerts

  ಮೆಗಾಸ್ಟಾರ್ ಹೊಸ ಚಿತ್ರಕ್ಕೆ ಬಾಲಿವುಡ್ ನಟಿ: ಭಾರಿ ಸಂಭಾವನೆಗಾಗಿ ಬೇಡಿಕೆ!

  |

  ಮೆಗಾಸ್ಟಾರ್ ಚಿರಂಜೀವಿ ಎರಡನೇ ಇನ್ನಿಂಗ್ಸ್‌ನಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಿದ್ದು, ನಿರೀಕ್ಷೆ ಮೂಡಿಸುತ್ತಿದ್ದಾರೆ. ಸೈರಾ ನರಸಿಂಹ ರೆಡ್ಡಿ ಚಿತ್ರದ ಯಶಸ್ಸಿನ ಬಳಿಕ ಕೊರಟಾಲ ಶಿವ ನಿರ್ದೇಶನದಲ್ಲಿ ಆಚಾರ್ಯ ಸಿನಿಮಾ ಆರಂಭಿಸಿದ್ದರು. ಕೊರೊನಾ ವೈರಸ್ ಕಾಟ, ಲಾಕ್‌ಡೌನ್ ಸಂಕಷ್ಟಗಳನ್ನು ದಾಟಿ ಸಿನಿಮಾ ಚಿತ್ರೀಕರಣ ಮಾಡ್ತಿದೆ. ಸುಮಾರು ಎರಡು ವರ್ಷದಿಂದ ಈ ಚಿತ್ರದ ಕೆಲಸ ಸಾಗ್ತಿದೆ.

  ಇತ್ತೀಚಿಗಷ್ಟೆ ಆಚಾರ್ಯ ಸಿನಿಮಾದ ಟಾಕಿ ಪೋಷನ್ ಸಂಪೂರ್ಣವಾಗಿ ಮುಗಿದಿದ್ದು, ಎರಡು ಹಾಡುಗಳ ಮಾತ್ರ ಬಾಕಿ ಉಳಿದುಕೊಂಡಿದೆ ಎಂದು ವರದಿಯಾಗಿತ್ತು. ಮತ್ತೊಂದೆಡೆ ಪೋಸ್ಟ್ ಪ್ರೊಡಕ್ಷನ್ ಕೆಲಸವೂ ಸದ್ದಿಲ್ಲದೇ ನಡೆಯುತ್ತಿದ್ದು, ಶೀಘ್ರದಲ್ಲಿ ತೆರೆಗೆ ತರಲು ಯೋಜಿಸಿದ್ದಾರೆ.

  ಶೂಟಿಂಗ್ ಮುಗಿಸಿದ ಆಚಾರ್ಯ: ಮೆಗಾಸ್ಟಾರ್ ಎಂಟ್ರಿಗೆ ಯಾವ ದಿನ ಟಾರ್ಗೆಟ್?ಶೂಟಿಂಗ್ ಮುಗಿಸಿದ ಆಚಾರ್ಯ: ಮೆಗಾಸ್ಟಾರ್ ಎಂಟ್ರಿಗೆ ಯಾವ ದಿನ ಟಾರ್ಗೆಟ್?

  ಈ ಸಿನಿಮಾ ಮುಗಿಯುತ್ತಿದ್ದಂತೆ ಮಲಯಾಳಂ ಹಿಟ್ ಸಿನಿಮಾ ಲೂಸಿಫರ್ ಹಾಗೂ ವೇದಲಂ ಚಿತ್ರಗಳ ರಿಮೇಕ್ ಸಜ್ಜಾಗಿದೆ. ಇವುಗಳ ನಡುವೆ ಕೆಎಸ್ ರವೀಂದ್ರ (ಬಾಬಿ) ನಿರ್ದೇಶನದ ಚಿತ್ರದಲ್ಲಿ ಮೆಗಾಸ್ಟಾರ್ ಅಭಿನಯಿಸುತ್ತಿದ್ದಾರೆ ಎನ್ನುವ ವಿಚಾರ ಥ್ರಿಲ್ ಹೆಚ್ಚಿಸಿದೆ.

  ಬಾಬಿ ಮತ್ತು ಚಿರು ಕಾಂಬಿನೇಷನ್ ಚಿತ್ರದಲ್ಲಿ ನಾಯಕಿ ಪಾತ್ರಕ್ಕಾಗಿ ಬಾಲಿವುಡ್ ಚೆಲುವೆ ಸೋನಾಕ್ಷಿ ಸಿನ್ಹಾ ಅವರನ್ನು ಕರೆತರುವ ಯೋಜನೆಯಾಗಿದೆಯಂತೆ. ಈ ಸಂಬಂಧ ಸೋನಾಕ್ಷಿ ಜೊತೆ ಮಾತುಕತೆ ಮಾಡಿದ್ದು, ತೆಲುಗು ಡೆಬ್ಯೂಗಾಗಿ ಭಾರಿ ಮೊತ್ತವನ್ನು ಸಂಭಾವನೆಯಾಗಿ ಕೇಳಿದ್ದಾರೆ ಎನ್ನಲಾಗಿದೆ. ಈ ಕುರಿತು ತೆಲುಗು ವೆಬ್‌ಸೈಟ್ ವರದಿ ಮಾಡಿದ್ದು, ಮೆಗಾಸ್ಟಾರ್‌ ಎದುರು ನಾಯಕಿಯಾಗಿ ಸೋನಾಕ್ಷಿ ಸಿನ್ಹಾ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದಿದೆ. ಮುಂದೆ ಓದಿ...

  ಸೋನಾಕ್ಷಿ ಕೇಳಿದ ಸಂಭಾವನೆ ಎಷ್ಟು?

  ಸೋನಾಕ್ಷಿ ಕೇಳಿದ ಸಂಭಾವನೆ ಎಷ್ಟು?

  ಚಿರಂಜೀವಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕು ಅಂದ್ರೆ 3.5 ಕೋಟಿ ಸಂಭಾವನೆ ಕೊಡಿ ಎಂದು ನಿರ್ಮಾಪಕರ ಬಳಿ ಸೋನಾಕ್ಷಿ ಸಿನ್ಹಾ ಬೇಡಿಕೆಯಿಟ್ಟಿದ್ದಾರೆ ಎಂಬ ಸುದ್ದಿ ಟಾಲಿವುಡ್ ಮಾಯಾನಗರಿಯಲ್ಲಿ ಬಿಸಿಬಿಸಿ ಸುದ್ದಿಯಾಗಿದೆ. ಸೋನಾಕ್ಷಿ ಅವರ ಸಂಭಾವನೆ ಕೇಳಿ ಅಚ್ಚರಿಯಾದ ನಿರ್ಮಾಪಕರು ಅಚ್ಚರಿಯಿಂದ ವಾಪಸ್ ಆಗಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಸೋನಾಕ್ಷಿ ಖಚಿತವಾಗಿಲ್ಲ. ಆದರೆ, ಅವರ ಸಂಭಾವನೆ ಮಾತ್ರ ಟಾಕ್ ಆಫ್ ಟೌನ್ ಆಗಿದೆ.

  'ದಬಾಂಗ್' ಖ್ಯಾತಿ ಹೆಚ್ಚಿದೆ

  'ದಬಾಂಗ್' ಖ್ಯಾತಿ ಹೆಚ್ಚಿದೆ

  2010ರಲ್ಲಿ ಸಲ್ಮಾನ್ ಖಾನ್ ಜೊತೆ ದಬಾಂಗ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಸೋನಾಕ್ಷಿ ಸಿನ್ಹಾ ಹಲವು ಸಿನಿಮಾ ಮಾಡಿದರು. ರೌಡಿ ರಾಥೋರ್, ಹಿಮ್ಮತ್‌ವಾಲಾ, ಆರ್ ರಾಜ್ ಕುಮಾರ್, ಆಕ್ಷನ್ ಜಾಕ್ಸನ್, ರಜನಿಕಾಂತ್ ಜೊತೆ ಲಿಂಗಾ, ಮಿಷನ್ ಮಂಗಲ್, ದಬಾಂಗ್ 2, ದಬಾಂಗ್ 3 ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು. ಸೋನಾಕ್ಷಿಗೆ ದಬಾಂಗ್ ಸರಣಿ ಬ್ರ್ಯಾಂಡ್ ಆಗಿದೆ. ಒಂದು ವೇಳೆ ಚಿರಂಜೀವಿ ಸಿನಿಮಾ ಒಪ್ಪಿಕೊಂಡರೆ ಇದು ತೆಲುಗಿನಲ್ಲಿ ಮೊದಲ ಸಿನಿಮಾ ಆಗಲಿದೆ. ಪ್ರಸ್ತುತ, ಅಜಯ್ ದೇವಗನ್ ಜೊತೆ ನಟಿಸಿರುವ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಸಿನಿಮಾ ತೆರೆಗೆ ಬರಬೇಕಿದೆ.

  ಚಿರಂಜೀವಿ ಚಿತ್ರದಲ್ಲಿ ನಟಿಸಲು ಕೀರ್ತಿ ಸುರೇಶ್‌ಗೆ ಇಷ್ಟೊಂದು ಸಂಭಾವನೆನಾ?ಚಿರಂಜೀವಿ ಚಿತ್ರದಲ್ಲಿ ನಟಿಸಲು ಕೀರ್ತಿ ಸುರೇಶ್‌ಗೆ ಇಷ್ಟೊಂದು ಸಂಭಾವನೆನಾ?

  'ಲೂಸಿಫರ್' ರಿಮೇಕ್

  'ಲೂಸಿಫರ್' ರಿಮೇಕ್

  ಆಚಾರ್ಯ ಸಿನಿಮಾ ಮುಗಿಯುತ್ತಿದ್ದಂತೆ ಚಿರಂಜೀವಿ 'ಲೂಸಿಫರ್' ರಿಮೇಕ್‌ನಲ್ಲಿ ನಟಿಸಲಿದ್ದಾರೆ. ಮಲಯಾಳಂ ಇಂಡಸ್ಟ್ರಿಯಲ್ಲಿ ದಾಖಲೆ ಬರೆದಿದ್ದ 'ಲೂಸಿಫರ್' ಚಿತ್ರಕ್ಕೆ ಚಿರು ಅಸ್ತು ಎಂದಿದ್ದು, ಪೂರ್ವ ತಯಾರಿ ನಡೆದಿದೆ. ಮೋಹನ್ ರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ವಿದ್ಯಾ ಬಾಲನ್ ಅಥವಾ ತ್ರಿಷಾ ನಾಯಕಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆಯಂತೆ. ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದ ಚಿತ್ರ 'ಲೂಸಿಫರ್'ನಲ್ಲಿ ಖ್ಯಾತ ನಟ ಮೋಹನ್ ಲಾಲ್ ನಾಯಕರಾಗಿ ನಟಿಸಿದ್ದರು.

  ವೇದಲಂ ರಿಮೇಕ್?

  ವೇದಲಂ ರಿಮೇಕ್?

  ತಮಿಳಿನಲ್ಲಿ ಅಜಿತ್ ಕುಮಾರ್ ನಟಿಸಿದ್ದ 'ವೇದಲಂ' ಚಿತ್ರವನ್ನು ತೆಲುಗಿಗೆ ರಿಮೇಕ್ ಮಾಡಲು ನಿರ್ಧರಿಸಿದ್ದು, ಈ ಸಿನಿಮಾದಲ್ಲಿ ಮೆಗಸ್ಟಾರ್ ನಾಯಕನಾಗಿ ನಟಿಸಲಿದ್ದಾರೆ. 'ವೇದಲಂ' ಚಿತ್ರದಲ್ಲಿ ಅಜಿತ್‌ಗೆ ತಂಗಿಯಾಗಿ ಲಕ್ಷ್ಮಿ ಮೆನನ್ ಅಭಿನಯಿಸಿದ್ದರು. ತೆಲುಗು ರಿಮೇಕ್‌ನಲ್ಲಿ ಚಿರಂಜೀವಿಗೆ ತಂಗಿಯಾಗಲು ಕೀರ್ತಿ ಅವರನ್ನು ಸಂಪರ್ಕಿಸಲಾಗಿದೆ. ಆದರೆ, ಅಧಿಕೃತವಾಗಿ ಈ ಸಿನಿಮಾನೂ ಸೆಟ್ಟೇರಿಲ್ಲ.

  English summary
  Bollywood Beauty Sonakshi Sinha has been approached for Chiranjeevi and KS Ravindra's next film. report says that she demanding huge remuneration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X