For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ ಯೋಗಿಬಾಬು ಬೆಂಗಳೂರು ಭೇಟಿ ಹಿಂದಿದೆ ಎರಡು ಕಾರಣ!

  |

  ತಮಿಳಿನ ಖ್ಯಾತ ಹಾಸ್ಯನಟ ಯೋಗಿ ಬಾಬು ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ದುನಿಯಾ ವಿಜಯ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಅಪ್ಪು, ದುನಿಯಾ ವಿಜಯ್ ಹಾಗೂ ಶಿವಣ್ಣ ಭೇಟಿ ಮಾಡಿರುವ ಯೋಗಿಬಾಬು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಅನುಮಾನ ಬಲವಾಗಿ ಕಾಡುತ್ತಿದೆ. ಆ ಬಗ್ಗೆ ಎಲ್ಲಿಯೂ, ಯಾರೂ ಸಹ ಮಾಹಿತಿ ಬಿಟ್ಟುಕೊಟ್ಟಿಲ್ಲ.

  ಪುನೀತ್, ವಿಜಯ್ ಬಳಿಕ ಶಿವರಾಜ್ ಕುಮಾರ್ ಭೇಟಿಯಾದ ತಮಿಳು ಹಾಸ್ಯ ನಟ ಯೋಗಿ ಬಾಬುಪುನೀತ್, ವಿಜಯ್ ಬಳಿಕ ಶಿವರಾಜ್ ಕುಮಾರ್ ಭೇಟಿಯಾದ ತಮಿಳು ಹಾಸ್ಯ ನಟ ಯೋಗಿ ಬಾಬು

  ಆದ್ರೀಗ, ಯೋಗಿ ಬಾಬು ಅವರ ಬೆಂಗಳೂರು ಭೇಟಿ ಹಿಂದೆ ಎರಡು ಸುದ್ದಿಗಳು ಕೇಳಿ ಬರುತ್ತಿದೆ. ಇದು ಸ್ಯಾಂಡಲ್‌ವುಡ್ ಗೆ ಸರ್ಪ್ರೈಸ್ ಆದರೂ ಆಗಬಹುದು. ಏನದು? ಮುಂದೆ ಓದಿ....

  ಮೊದಲನೇ ಸುದ್ದಿ!

  ಮೊದಲನೇ ಸುದ್ದಿ!

  ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಭಜರಂಗಿ-2 ಚಿತ್ರದಲ್ಲಿ ಯೋಗಿ ಬಾಬು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಆ ಕಾರಣದಿಂದಲೇ ಅವರು ಬೆಂಗಳೂರಿಗೆ ಬಂದಿದ್ದಾರೆ. ಆಗಸ್ಟ್ 16ರಿಂದ ಚಿತ್ರೀಕರಣ ಪ್ರಾರಂಭವಾಗಿದ್ದು, 12 ದಿನಗಳ ಕಾಲ ಕಾಲ್‌ಶೀಟ್ ನೀಡಿದ್ದಾರೆ ಎನ್ನಲಾಗಿದೆ.

  ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಶೂಟಿಂಗ್

  ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಶೂಟಿಂಗ್

  ಜಯಣ್ಣ ಕಂಬೈನ್ಸ್‌ನಲ್ಲಿ ತಯಾರಾಗುತ್ತಿರುವ ಭಜರಂಗಿ 2 ಚಿತ್ರವನ್ನು ಹರ್ಷ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಹಲಸೂರಿನಿಂದ ಮೋಹನ್ ಬಿ ಕೆರೆ ಸ್ಟುಡಿಯೋಗೆ ಪ್ರತಿದಿನವೂ ಯೋಗಿಬಾಬು ಪ್ರಯಾಣ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದು ಅದೇ ಸ್ಥಳದಲ್ಲಿ ಎಂದು ತಿಳಿದು ಬಂದಿದೆ.

  ಪುನೀತ್ ಮನೆಗೆ ಭೇಟಿ ನೀಡಿದ ತಮಿಳು ಹಾಸ್ಯ ನಟ ಯೋಗಿಬಾಬುಪುನೀತ್ ಮನೆಗೆ ಭೇಟಿ ನೀಡಿದ ತಮಿಳು ಹಾಸ್ಯ ನಟ ಯೋಗಿಬಾಬು

  ಎರಡನೇಯ ಸುದ್ದಿ!

  ಎರಡನೇಯ ಸುದ್ದಿ!

  ತಮಿಳಿನಲ್ಲಿ ಯೋಗಿ ಬಾಬು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ 'ಕೋಲಮಾವು ಕೋಕಿಲಾ' ಸಿನಿಮಾ ಕನ್ನಡದಲ್ಲಿ ರೀಮೇಕ್ ಆಗುತ್ತಿದ್ದು, ಕನ್ನಡ ವರ್ಷನ್‌ನಲ್ಲಿ ಯೋಗಿ ಬಾಬು ಅವರೇ ನಟಿಸುತ್ತಿದ್ದಾರೆ ಎಂದು ಸುದ್ದಿಯೂ ಸದ್ದು ಮಾಡುತ್ತಿದೆ. ಹಾಗಾಗಿ, ಅವರು ಬೆಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗುತ್ತಿದೆ.

  ರಚಿತಾ ರಾಮ್ ಜೊತೆ ಯೋಗಿಬಾಬು!

  ರಚಿತಾ ರಾಮ್ ಜೊತೆ ಯೋಗಿಬಾಬು!

  ತಮಿಳಿನಲ್ಲಿ ನಯನತಾರ ನಟಿಸಿದ್ದ ಪಾತ್ರವನ್ನು ಕನ್ನಡದಲ್ಲಿ ರಚಿತಾ ರಾಮ್ ಮಾಡಲಿದ್ದಾರೆ ಎಂಬ ಸುದ್ದಿಯೂ ಹೊರಬಿದ್ದಿದೆ. ನಯನತಾರ ಜೊತೆಯಲ್ಲಿ ಯೋಗಿಬಾಬು ಮುಖ್ಯ ಪಾತ್ರ ನಿಭಾಯಿಸಿದ್ದರು. ಇವರಿಬ್ಬರ ಕಾಂಬಿನೇಷನ್ ಸೂಪರ್ ಹಿಟ್ ಅಗಿತ್ತು. ಹಾಗಾಗಿ, ಅದೇ ಯೋಗಿಬಾಬು ಅವರನ್ನು ಕನ್ನಡಕ್ಕೂ ಪರಿಚಯಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

  ಶೂಟಿಂಗ್ ಅಥವಾ ವಿಸಿಟಿಂಗ್!

  ಶೂಟಿಂಗ್ ಅಥವಾ ವಿಸಿಟಿಂಗ್!

  ಪ್ರಾರಂಭದಲ್ಲಿ ಕೆಲಸದ ನಿಮಿತ್ತ ಯೋಗಿಬಾಬು ಬೆಂಗಳೂರಿಗೆ ಬಂದಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡದ ಕೆಲವು ನಟರನ್ನು ಸ್ನೇಹಪೂರ್ವಕವಾಗಿ ಭೇಟಿಯಾಗುತ್ತಿದ್ದಾರೆ ಎಂದು ನಂಬಲಾಗಿತ್ತು. ಆದ್ರೀಗ, ಈ ಎರಡು ಚಿತ್ರಗಳ ಹಿನ್ನೆಲೆ ಗಮನಿಸಿದರೆ ಬಹುಶಃ ಯೋಗಿಗಾಗಿ ಶೂಟಿಂಗ್ ನಿಮಿತ್ತ ಸಿಲಿಕಾನ್ ಸಿಟಿಗೆ ಬಂದಿರಬಹುದು ಎಂಬ ಅನುಮಾನ ಮೂಡುತ್ತಿದೆ. ಆದರೆ, ಈ ಎರಡು ಸುದ್ದಿ ಅಧಿಕೃತವಾಗಿಲ್ಲ.

  ತಮಿಳು ನಟ ಯೋಗಿಬಾಬು ಸರಳತೆಗೆ ದುನಿಯಾ ವಿಜಯ್ ಫಿದಾತಮಿಳು ನಟ ಯೋಗಿಬಾಬು ಸರಳತೆಗೆ ದುನಿಯಾ ವಿಜಯ್ ಫಿದಾ

  English summary
  Tamil comedy actor Yogi Babu has visit to bengaluru and he met shivarajkumar, puneeth rajkumar and duniya vijay. what is the reason behind his bengaluru visit?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X