»   » ಪ್ರಭಾಸ್ ಇಟ್ಟ 'ಶಾಕಿಂಗ್' ಬೇಡಿಕೆ ಕೇಳಿ ನಿರ್ಮಾಪಕರ ತಲೆ ಗಿರ್ರೆಂದಿತು.!

ಪ್ರಭಾಸ್ ಇಟ್ಟ 'ಶಾಕಿಂಗ್' ಬೇಡಿಕೆ ಕೇಳಿ ನಿರ್ಮಾಪಕರ ತಲೆ ಗಿರ್ರೆಂದಿತು.!

Posted By:
Subscribe to Filmibeat Kannada

''ಬಾಹುಬಲಿ-2' ಸಿನಿಮಾ ಸೂಪರ್ ಸಕ್ಸಸ್ ಆದ್ಮೇಲೆ ನಟ ಪ್ರಭಾಸ್ ತಲೆಗೆ ಯಶಸ್ಸಿನ ಅಮಲೇರಿದ್ಯಾ.?'' - ಹೀಗೊಂದು ಅನುಮಾನ ಬಾಲಿವುಡ್ ಅಂಗಳದಲ್ಲಿ ಮೂಡಿದೆ. ಅದಕ್ಕೆ ನಟ ಪ್ರಭಾಸ್ ಬಗ್ಗೆ ಹಬ್ಬಿರುವ ಲೇಟೆಸ್ಟ್ ಗಾಸಿಪ್ ಕಾರಣ.!

ಅಷ್ಟಕ್ಕೂ ಆ ಗಾಸಿಪ್ ಏನಪ್ಪಾ ಅಂದ್ರೆ, 'ಬಾಹುಬಲಿ-2' ಸಿನಿಮಾ ಹಿಟ್ ಆದ ಬಳಿಕ ಸಹಜವಾಗಿ ಪ್ರಭಾಸ್ ರವರಿಗೆ ಡಿಮ್ಯಾಂಡ್ ಕೂಡ ಹೈಕ್ ಅಗಿದೆ. ಬಾಲಿವುಡ್ ನಲ್ಲಿ ನಟಿಸುವಂತೆ ಪ್ರಭಾಸ್ ರವರಿಗೆ ಸಾಲು ಸಾಲು ಆಫರ್ ಗಳು ಹುಡುಕ್ಕೊಂಡು ಬರುತ್ತಿದೆ. ಹೀಗಿರುವಾಗಲೇ, ಪ್ರಭಾಸ್ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರಂತೆ. ಪ್ರಭಾಸ್ ರವರ ಸಂಭಾವನೆ ಮೊತ್ತ ಕೇಳಿ ನಿರ್ಮಾಪಕರ ತಲೆ ಗಿರ್ ಎಂದಿದ್ಯಂತೆ. ಮುಂದೆ ಓದಿ...

ಪ್ರಭಾಸ್ ಡಿಮ್ಯಾಂಡ್ ಮಾಡಿದ ಸಂಭಾವನೆ ಎಷ್ಟು.?

ಬರೋಬ್ಬರಿ 80 ಕೋಟಿ ರೂಪಾಯಿಯಷ್ಟು ಸಂಭಾವನೆ ನೀಡುವಂತೆ ಬಾಲಿವುಡ್ ನಿರ್ಮಾಪಕರ ಮುಂದೆ ಪ್ರಭಾಸ್ ಬೇಡಿಕೆ ಇಟ್ಟಿದ್ದಾರಂತೆ.

ಈತ ಜಗತ್ತಿನ ಜನಮನ ಗೆದ್ದ ನಟ, ಗುರುತಿಸಿ ನೋಡೋಣ?

ಶಾಕ್ ಆದ ನಿರ್ಮಾಪಕರು.!

ಪ್ರಭಾಸ್ ರವರ ಸಂಭಾವನೆ ಕೇಳಿದ ಬಾಲಿವುಡ್ ನಿರ್ಮಾಪಕರು ಶಾಕ್ ಆಗಿದ್ದಾರಂತೆ. ಯಾಕಂದ್ರೆ...

ಬಾಲಿವುಡ್ 'ಖಾನ್'ಗಳು ಇಷ್ಟೊಂದು ಸಂಭಾವನೆ ಕೇಳಿಲ್ಲ.!

ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್ ಹಾಗೂ ಆಮೀರ್ ಖಾನ್ ಕೂಡ ಇಷ್ಟು ದೊಡ್ಡ ಮೊತ್ತವನ್ನು ಡಿಮ್ಯಾಂಡ್ ಮಾಡಿಲ್ಲವಂತೆ.

ಕಡೆಗೂ 'ಹ್ಞೂಂ' ಎಂದು ಕುತ್ತಿಗೆ ಆಡಿಸಿದ 'ಬಾಹುಬಲಿ' ಹೀರೋ ಪ್ರಭಾಸ್.!

ಹಾಗಾದ್ರೆ, ಸಲ್ಮಾನ್ ಖಾನ್ ಸಂಭಾವನೆ ಎಷ್ಟು.?

ಕೆಲ ವರದಿಗಳ ಪ್ರಕಾರ, ಇಡೀ ಬಾಲಿವುಡ್ ನಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಸಲ್ಮಾನ್ ಖಾನ್. ಚಿತ್ರವೊಂದಕ್ಕೆ 60 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ ಸಲ್ಮಾನ್ ಖಾನ್.

ಬರೋಬ್ಬರಿ 18 ಕೋಟಿ ಗಿಟ್ಟಿಸುವ ಅವಕಾಶವನ್ನ ಎಡಗಾಲಿನಲ್ಲಿ ಒದ್ದ ಪ್ರಭಾಸ್.!

ಆಮೀರ್ ಖಾನ್ ಪಡೆಯುವ ಮೊತ್ತ.?

ಮೂಲಗಳ ಪ್ರಕಾರ, ಚಿತ್ರವೊಂದಕ್ಕೆ ನಟ ಆಮೀರ್ ಖಾನ್ 50 ಕೋಟಿ ರೂಪಾಯಿ ಪಡೆಯುತ್ತಾರೆ.

ಶಾರುಖ್ ಖಾನ್ ಸಂಭಾವನೆ ಎಷ್ಟು.?

40-45 ಕೋಟಿಯಷ್ಟು ಮೊತ್ತವನ್ನ ಸಂಭಾವನೆ ರೂಪದಲ್ಲಿ ಪಡೆಯುತ್ತಾರಂತೆ ಕಿಂಗ್ ಖಾನ್ ಶಾರೂಖ್.

'ಬಾಹುಬಲಿ' ಆಗಲು ಪ್ರಭಾಸ್ ಪಡೆದ ಹಣ ಎಷ್ಟು.?

'ಬಾಹುಬಲಿ' ಚಿತ್ರಕ್ಕಾಗಿ ನಟ ಪ್ರಭಾಸ್, 20 ಕೋಟಿ ರೂಪಾಯಿ ಪಡೆದಿದ್ದರಂತೆ. 'ಬಾಹುಬಲಿ-2' ಚಿತ್ರಕ್ಕೆ 25 ಕೋಟಿ ರೂಪಾಯಿ ಪಡೆದಿದ್ದರಂತೆ ಪ್ರಭಾಸ್. ಈಗ ಏಕ್ದಂ 80 ಕೋಟಿ ಸಂಭಾವನೆಯನ್ನ ಹೈಕ್ ಮಾಡಿಕೊಂಡಿದ್ದಾರಾ ಪ್ರಭಾಸ್.?

'ಸಾಹೋ' ಚಿತ್ರದಲ್ಲಿ ಪ್ರಭಾಸ್ ಬಿಜಿ

ಸದ್ಯ 'ಸಾಹೋ' ಚಿತ್ರಕ್ಕೆ ಪ್ರಭಾಸ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಜೊತೆಗೆ ಇನ್ನೆರಡು ಚಿತ್ರಗಳ ಬಗ್ಗೆ ಮಾತುಕತೆ ಕೂಡ ಫೈನಲ್ ಆಗಿದ್ಯಂತೆ.

Read in English:
English summary
According to the Grapevine, Tollywood Actor Prabhas has increased his fee and now wants Rs.80 Crore for his next.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada