For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ ಹೊಸ ಚಿತ್ರ 'ಡೈರೆಕ್ಟೆಡ್ ಬೈ ಉಪೇಂದ್ರ'

  By Rajendra
  |

  ರಿಯಲ್ ಸ್ಟಾರ್ ಉಪೇಂದ್ರ ಅವರ ಚಿತ್ರಗಳ ಶೀರ್ಷಿಕೆಗಳೇ ಹೀಗೆ, ಒಂದಕ್ಕಿಂತಲೂ ಒಂದು ವಿಚಿತ್ರ. ಈಗ ಮತ್ತೊಂದು ಚಿತ್ರಕ್ಕೆ ಅದೇ ರೀತಿಯ ವಿಚಿತ್ರ ಶೀರ್ಷಿಕೆಯನ್ನು ಇಡಲಾಗಿದೆ. ಚಿತ್ರದ ಶೀರ್ಷಿಕೆ ಏನು ಗೊತ್ತೇ 'ಡೈರೆಕ್ಟೆಡ್ ಬೈ ಉಪೇಂದ್ರ'.

  ಒಂಥರಾ ವಿಚಿತ್ರವಾಗಿದೆಯಲ್ಲವೇ? ಇನ್ನೂ ವಿಚಿತ್ರದ ಸಂಗತಿ ಎಂದರೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿರುವುದು ಮಾತ್ರ ಉಪ್ಪಿ ಅಲ್ಲ! ಈ ಹಿಂದೆ ಶಿವಸೈನ್ಯ ಚಿತ್ರವನ್ನು ನಿರ್ದೇಶಿಸಿದ್ದ ಶಿವಮಣಿ ಚಿತ್ರದ ನಿರ್ದೇಶಕರು. ಈಗಾಗಲೆ ಈ ಚಿತ್ರದ ಬಗ್ಗೆ ಉಪ್ಪಿ ಜೊತೆ ಮಾತುಕತೆಯೂ ಆಗಿದೆ.

  ಚಿತ್ರದಲ್ಲಿ ಬಣ್ಣ ಹಚ್ಚಲು ಉಪ್ಪಿ ಓಕೆ ಎಂದಿದ್ದಾರೆ ಎಂಬ ಸುದ್ದಿಯೂ ಇದೆ. ಆದರೆ ಅತ್ತ ಶಿವಮಣಿ ಇತ್ತ ಉಪೇಂದ್ರ ಕೆಲವು ಪ್ರಾಜೆಕ್ಟ್ ಗಳಿಗೆ ಕಮಿಟ್ ಆಗಿದ್ದಾರೆ. ಅವು ಮುಗಿದ ಮೇಲಷ್ಟೇ 'ಡೈರೆಕ್ಟೆಡ್ ಬೈ ಉಪೇಂದ್ರ' ಚಿತ್ರಕ್ಕೆ ಮುಹೂರ್ತ.

  ಈ ಹಿಂದೆ ಉಪೇಂದ್ರ ಜೊತೆ ಶಿವಮಣಿ ಎರಡು ಚಿತ್ರಗಳನ್ನು ಮಾಡಿದ್ದಾರೆ. ಒಂದು 'ಓಂಕಾರ' ಇನ್ನೊಂದು 'ಮಸ್ತಿ' (ಮೊದಲು 'ಮಾಸ್ತಿ' ಎಂದು ಹೆಸರಿಡಲಾಗಿತ್ತು). ಎರಡೂ ಚಿತ್ರಗಳು ನಿರೀಕ್ಷಿಸಿದಷ್ಟು ಮಟ್ಟದಲ್ಲಿ ಸದ್ದು ಮಾಡಲಿಲ್ಲ.

  ಡೈರೆಕ್ಟೆಡ್ ಬೈ ಉಪೇಂದ್ರ ಚಿತ್ರವನ್ನು ಓಂಕಾರ ಚಿತ್ರ ನಿರ್ಮಿಸಿದ ಕನಕಪುರ ಶ್ರೀನಿವಾಸ್ ಹಾಗೂ ಕೆ.ಪಿ. ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಈಗಷ್ಟೇ ಚಿತ್ರದ ಮೊಳಕೆಯೊಡೆದಿದೆ. ಇನ್ನೂ ಅದು ಗಿಡವಾಗಿ, ಮರವಾಗಿ ಹೂವು ಕಾಯಿ ಹಣ್ಣು ಬಿಡುವುದು ಬಹಳಷ್ಟು ದೂರದಲ್ಲಿದೆ. (ಏಜೆನ್ಸೀಸ್)

  English summary
  Real Star Upendra next film titled as 'Directed by Upendra', but Uppi is not directing it. Shivamani is all set to direct the movie. Kanakapura Srinivas and K P Srikanth will be producing the film, sources said.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X