»   » ಫಾರಿನ್‌ನಲ್ಲೇ ಸೆಟ್ಲ್ ಆಗ್ತಾರಾ ರಮ್ಯಾ ಮೇಡಂ?

ಫಾರಿನ್‌ನಲ್ಲೇ ಸೆಟ್ಲ್ ಆಗ್ತಾರಾ ರಮ್ಯಾ ಮೇಡಂ?

By: ಹರ್ಷಿತಾ
Subscribe to Filmibeat Kannada

‘ನಟನೆ ಬಿಟ್ಟು ಸಮಾಜಸೇವೆ ಮಾಡ್ತೀನಿ..! ಮಂಡ್ಯ ಜಿಲ್ಲೆಯನ್ನ ಹೈಟೆಕ್ ಮಾಡ್ತೀನಿ..!' ಅಂತೆಲ್ಲಾ ಹೇಳ್ತಿದ್ದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ಎಲೆಕ್ಷನ್‌ನಲ್ಲಿ ಸೋತಮೇಲೆ ಮಂಡ್ಯ ಕಡೆ ತಿರುಗಿ ಕೂಡ ನೋಡಿಲ್ಲ. ‘ಎಲೆಕ್ಷನ್‌ನಲ್ಲಿ ಸೋತರೇನಂತೆ? ಮತ್ತೆ ಸಿನಿಮಾ ಮಾಡಬಹುದಲ್ಲಾ!' ಅಂತ ಒಮ್ಮೆ ಟ್ವೀಟ್ ಮಾಡಿ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್ ಕೊಟ್ಟಿದ್ದ ರಮ್ಯಾ, ‘ಆರ್ಯನ್' ನಂತರ ಗಾಂಧಿನಗರಕ್ಕೆ ಕಾಲಿಟ್ಟಿದ್ದೇ ಇಲ್ಲ.

ದಿನಕ್ಕೊಂದು ಟ್ವೀಟ್ ಮಾಡ್ತಾ, ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಅಪ್ಡೇಟ್ ಮಾಡ್ತಾ ಎಲ್ಲರ ಕಣ್ಣುಕುಕ್ತಿದ್ದ ರಮ್ಯಾ ಮೇಡಂ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲೂ ಯಾರ ಕೈಗೂ ಸಿಗ್ತಿಲ್ಲ. ಅಷ್ಟಕ್ಕೂ ರಮ್ಯಾ ಕೊನೆಯ ಟ್ವೀಟ್ ಮಾಡಿದ್ದು ಯಾವಾಗ ಗೊತ್ತಾ? ಬರೋಬ್ಬರಿ ಎರಡುವರೆ ತಿಂಗಳ ಹಿಂದೆ...ಅಂದ್ರೆ ಆಗಸ್ಟ್ 2ನೇ ತಾರೀಖು! ಇದಕ್ಕಿದ್ದಂತೆ ಕಣ್ಮರೆಯಾಗಿರೋ ರಮ್ಯಾ ಈಗ ಎಲ್ಲಿದ್ದಾರೆ ಅಂದ್ರೆ, ಮೂಲಗಳು ಹೇಳೋ ಪ್ರಕಾರ ರಮ್ಯಾ ಲಂಡನ್‌ನಲ್ಲಿದ್ದಾರೆ.


ಲಂಡನ್‌ನಲ್ಲಿ ರಮ್ಯಾ ಏನ್ ಮಾಡ್ತಿದ್ದಾರೆ?
ನಟನೆನೂ ಸಾಕು, ರಾಜಕೀಯನೂ ಸಾಕು ಅಂತ ಸೀದಾ ಲಂಡನ್ ಫ್ಲೈಟ್ ಹತ್ತಿರೋ ರಮ್ಯಾ, ಲಂಡನ್‌ನಲ್ಲಿ ವ್ಯಾಸಂಗ ಮಾಡ್ತಿದ್ದಾರಂತೆ. ಹಿಂದೆ ಮುಂದೆ ನೋಡದೆ ರಾಜಕೀಯಕ್ಕೆ ಧುಮುಕಿ ಸೋಲು ಅನುಭವಿಸಿರೋ ರಮ್ಯಾ, ರಾಜಕೀಯ ಮತ್ತು ಸಂವಿಧಾನದ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳೋಕೆ ಲಂಡನ್‌ನಲ್ಲಿ ರಾಜ್ಯಶಾಸ್ತ್ರ ವ್ಯಾಸಂಗ ಮಾಡ್ತಿದ್ದಾರಂತೆ. [ದಿವ್ಯಾ ಸ್ಪಂದನಾ ಚಿತ್ರಪಟ]

ಚುನಾವಣೆ ಸೋಲಿನ ಪರಾಮರ್ಶೆನಾ?
ಎಲೆಕ್ಷನ್‌ನಲ್ಲಿ ಸೋತಮೇಲೆ ಕೊಂಚ ಡಲ್ ಆಗಿದ್ದ ರಮ್ಯಾ, ಕೆಲಕಾಲ ಮುಂಬೈನಲ್ಲಿದ್ರು. ತಮ್ಮ ಸೋಲಿನ ಪರಾಮರ್ಶೆ ಹಾಗೂ ಆದ ಕಹಿಯ ಅನುಭವವನ್ನ ಮರೆಯೋಕೆ ಮುಂಬೈಯಲ್ಲಿನ ಮೆಡಿಟೇಷನ್ ಸೆಂಟರ್‌ನಲ್ಲಿ ಕೆಲದಿನಗಳ ಕಾಲ ಧ್ಯಾನದಲ್ಲಿ ಪಾಲ್ಗೊಂಡಿದ್ರು. ನಂತ್ರ ಆಪ್ತೇಷ್ಟರ ಸಲಹೆಯ ಮೇರೆಗೆ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳಿದ್ರಂತೆ. [ರಾಜಕೀಯಕ್ಕೆ ರಮ್ಯಾ ಗುಡ್ ಬೈ]

ತಾಜ್ ವೆಸ್ಟ್ ಎಂಡ್ ಮನೆಗೆ ಬೀಗ..!
ಸದ್ಯಕ್ಕೆ ಓದೋಕೆ ಅಂತ ಲಂಡನ್‌ಗೆ ತೆರಳಿರೋ ರಮ್ಯಾ, ತಮ್ಮ ತಾಜ್ ವೆಸ್ಟ್ ಎಂಡ್ ಮನೆಯನ್ನ ಖಾಲಿ ಮಾಡಿದ್ದಾರೆ. ಅಲ್ಲಿದ್ದ ಬಟ್ಟೆ-ಬರೆಯನ್ನೆಲ್ಲಾ ಲಂಡನ್‌ಗೆ ಪಾರ್ಸೆಲ್ ಮಾಡಿಸಿಕೊಂಡಿದ್ದಾರಂತೆ. ಇನ್ನೂ ರಮ್ಯಾ ಜೊತೆಯಲ್ಲೇ ಇರ್ತಾಯಿದ್ದ ಅವ್ರ ಮುದ್ದಿನ ನಾಯಿ ಮರಿ ಕೂಡ ಲಂಡನ್‌ಗೆ ಹಾರಿದ್ಯಂತೆ.

ಮರಳಿ ಬಣ್ಣ ಹಚ್ಚುತ್ತಾರಾ ರಮ್ಯಾ?
ಈ ಪ್ರಶ್ನೆಗೆ ಉತ್ತರ ಕೊಡೋಕೆ ಖುದ್ದು ರಮ್ಯಾ ಕೂಡ ಸಂಪರ್ಕಕ್ಕೆ ಸಿಗ್ತಾಯಿಲ್ಲ. ರಮ್ಯಾ ಕಾಲ್‌ಶೀಟ್‌ಗಾಗಿ ವರ್ಷದಿಂದ ಕಾದುಕುಳಿತಿರೋ ನಿರ್ಮಾಪಕರ ಗೋಳನ್ನ ಕೇಳೋರೂ ಇಲ್ಲ. ಲಂಡನ್‌ಗೆ ಹೋದಮೇಲೆ ಫೋನ್ ನಂಬರ್ ಕೂಡ ಚೇಂಜ್ ಮಾಡ್ಕೊಂಡಿರೋ ರಮ್ಯಾ, ತನ್ನ ಆಪ್ತ ಕಾರ್ಯದರ್ಶಿಯ ಸಂಪರ್ಕಕ್ಕೂ ಸಿಗ್ತಾಯಿಲ್ಲ. ಈ ನಡುವೆ ಯಾವ್ದೇ ಆಫರ್‌ಗಳನ್ನೂ ಒಪ್ಪಿಕೊಳ್ಳದ ರಮ್ಯಾ ಮತ್ತೆ ಬಣ್ಣ ಹಚ್ತಾರಾ ಅನ್ನೋದೇ ಅಭಿಮಾನಿಗಳಲ್ಲಿ ಕಾಡ್ತಿರೋ ಡೌಟು.

ಸೀದು ಹೋದ ನೀರ್‌ದೋಸೆ...!
ವರ್ಷಗಳ ಹಿಂದೇಯೇ ಮುಹೂರ್ತ ಮುಗಿಸಿದ್ರೂ, ‘ರಮ್ಯಾ ಕೃಪೆ'ಯಿಂದ ನೀರ್ ದೋಸೆ ಚಿತ್ರತಂಡ ಇನ್ನೂ ಕುಂಬಳಕಾಯಿ ಒಡೆದಿಲ್ಲ. ಎಲೆಕ್ಷನ್ ಮುಗಿದ್ಮೇಲೆ ಕಾಲ್‌ಶೀಟ್ ಕೊಡ್ತೀನಿ ಅಂತ್ಹೇಳಿ ಇದೀಗ ಲಂಡನ್‌ನಲ್ಲಿ ಸೆಟ್ಲ್ ಆಗಿರೋ ರಮ್ಯಾ ನೀರ್ ದೋಸೆ ನಿರ್ಮಾಪಕರ ಕೈಗೆ ಸಿಗ್ತಾನೇ ಇಲ್ಲ. ವರ್ಷದಿಂದ ರಮ್ಯಾ ಕಾಲ್‌ಶೀಟ್‌ಗಾಗಿ ಕಾಯ್ತಿರೋ ನಿರ್ಮಾಪಕರು ಸಾಲದ ಶೂಲದಲ್ಲಿ ಸಿಲುಕಿದ್ದಾರೆ. [ರಮ್ಯಾ ಅಭಿಮಾನಿಗಳಿಗೆ ಜಗ್ಗೇಶ್ ಟ್ವೀಟ್ ಏಟು]

ಒಪ್ಪಿಕೊಂಡಿರುವ ಇತರೆ ಸಿನಿಮಾಗಳ ಗತಿಯೇನು?
ಪ್ರಜ್ವಲ್ ದೇವರಾಜ್ ಮತ್ತು ರಮ್ಯಾ ಅಭಿನಯದ ದಿಲ್ ಕಾ ರಾಜಾ ಮತ್ತು ಕೋಡಿ ರಾಮಕೃಷ್ಣ ನಿರ್ದೇಶನದ ಚಿತ್ರ ಕೂಡ ರಮ್ಯಾ ಇಲ್ಲದೇ ಅರ್ಧಕ್ಕೆ ನಿಂತಿದೆ. [ಸೋಲಿನ ಸೇಡು ತೀರಿಸಿಕೊಂಡ ಮಂಡ್ಯದ ಪುಟ್ಟ]
Where is Ramya aka Divya Spandana?

ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಮ್ಯಾ ಮೌನಕ್ಕೆ ಶರಣಾಗಿದ್ದಾರೆ. ರಮ್ಯಾ ಇಲ್ಲದ ಸ್ಯಾಂಡಲ್‌ವುಡ್ ಕೂಡ ಮಂಕಾಗಿದೆ. ರಮ್ಯಾಗಾಗೇ ಎದುರು ನೋಡ್ತಾಯಿರೋ ನಿರ್ಮಾಪಕರಿಗೆ ‘ರಮ್ಯಾ'ಚೈತ್ರಕಾಲ ಎಂದು ಶುರುವಾಗುವುದೋ?!
English summary
Where is Ramya aka Divya Spandana? After her loss in Lok Sabha election in Mandya Ramya is conspicuous by her absence. According to sources Ramya has shifted to London to study Political Science. Let's wish her all the best.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada