»   » ಆ ಚಿತ್ರದಲ್ಲಿ ಏನುಂಟೋ? ಒಲ್ಲೆ ಎಂದರು ಸನ್ನಿ ಲಿಯೋನ್

ಆ ಚಿತ್ರದಲ್ಲಿ ಏನುಂಟೋ? ಒಲ್ಲೆ ಎಂದರು ಸನ್ನಿ ಲಿಯೋನ್

By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ನ ಹಾಟ್ ತಾರೆ ಸನ್ನಿ ಲಿಯೋನ್ ಎಂದರೆ ಬಿಸಿಬಿಸಿ ದೃಶ್ಯಗಳು, ಹಸಿಹಸಿ ಸನ್ನಿವೇಶಗಳನ್ನು ಪ್ರೇಕ್ಷಕ ಮಹಾಪ್ರಭುಗಳು ನಿರೀಕ್ಷಿಸುತ್ತಾರೆ. ಆದರೆ ಇತ್ತೀಚೆಗೆ ಚಿತ್ರವೊಂದರಲ್ಲಿ ಅಶ್ಲೀಲತೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಒಲ್ಲೆ ಎಂದಿದ್ದಾರೆ ಸನ್ನಿ ಲಿಯೋನ್.

ಆ ಚಿತ್ರವನ್ನು ಸನ್ನಿ ಲಿಯೋನ್ ಅವರೇ ರಿಜೆಕ್ಟ್ ಮಾಡಿದ್ದಾರೆ ಎಂದರೆ ಇನ್ಯಾವ ಪರಿ ಸನ್ನಿವೇಶಗಳು ಇರಬಹುದು ಎಂದು ಊಹಿಸಿಯೇ ಚಿತ್ರರಸಿಕರು ಕುಳಿತಲ್ಲೇ ಥ್ರಿಲ್ಲಾಗಿದ್ದಾರೆ. ಇದು ಏಕ್ತಾ ಕಪೂರ್ ನಿರ್ಮಿಸುತ್ತಿರುವ ಚಿತ್ರ ಎಂಬುದು ಇನ್ನೊಂದು ವಿಶೇಷ.

ಏಕ್ತಾ ಕಪೂರ್ ನಿರ್ಮಿಸುತ್ತಿರುವ ಪ್ರತಿಷ್ಠಿತ ಚಿತ್ರ 'XXX' ಚಿತ್ರದ ಕಥೆ ಕೇಳಿದ ಕೂಡಲೆ ಹಿಂದೆಮುಂದೆ ಆಲೋಚಿಸದೆ ಒಲ್ಲೆ ಎಂದರಂತೆ ಸನ್ನಿ ಲಿಯೋನ್. ಚಿತ್ರದಲ್ಲಿ ಬಹಳಷ್ಟು ಅಶ್ಲೀಲ ಸನ್ನಿವೇಶಗಳಿರುವುದೇ ಇದಕ್ಕೆ ಕಾರಣ ಎನ್ನುತ್ತಿವೆ ಬಾಲಿವುಡ್ ಮೂಲಗಳು. ಇಷ್ಟಕ್ಕೂ ಏನುಂಟು ಆ ಚಿತ್ರದಲ್ಲಿ...?

ರು.5 ಕೋಟಿ ಡಿಮಾಂಡ್ ಮಾಡಿದ ಸನ್ನಿ ಲಿಯೋನ್

ಆದರೆ ಇನ್ನೊಂದು ಮೂಲ ಹೇಳುವ ಕಥೆ ಕೊಂಚ ಡಿಫರೆಂಟ್ ಆಗಿದೆ. ಈ ಚಿತ್ರಕ್ಕಾಗಿ ಸನ್ನಿ ಲಿಯೋನ್ ರು.5 ಕೋಟಿ ಡಿಮಾಂಡ್ ಮಾಡಿದರಂತೆ. ಏಕ್ತಾ ಕಪೂರ್ ಅಷ್ಟೆಲ್ಲಾ ಆಗಲ್ಲ ಎಂದು ಗೋಣು ಅಲ್ಲಾಡಿಸಿದ್ದಾರೆ. ಅಲ್ಲಿಗೆ ಸನ್ನಿ ಮತ್ತು ಏಕ್ತಾ ನಡುವಿನ ಒಪ್ಪಂದ ಮುರಿದುಬಿದ್ದಿದೆ ಎನ್ನಲಾಗಿದೆ.

ಅದುವೇ ಸೆಕ್ಸ್ ಪ್ರಧಾನ ಚಿತ್ರ 'XXX'

ಬಾಲಿವುಡ್ ಯಂಗ್ ಲೇಡಿ ಏಕ್ತಾ ಕಪೂರ್ ನಿರ್ಮಿಸುತ್ತಿರುವ ಸೆಕ್ಸ್ ಪ್ರಧಾನ ಚಿತ್ರ 'XXX'. ಈಗಾಗಲೆ ಬಿಡುಗಡೆಯಾಗಿರುವ ಈ ಚಿತ್ರದ ಫಸ್ಟ್ ಲುಕ್ ನೋಡಿಯೇ ಚಿತ್ರರಸಿಕರ ಬಾಯಿಗೆ ಹೃದಯ ಬಂದಂತಾಗಿದೆ. ಕಾಮಸೂತ್ರ ಆಧಾರವಾಗಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಸನ್ನಿ ಒಲ್ಲೆ ಎಂದ ಕಾರಣ ಹೊಸ ಹೀರೋಯಿನ್ ಗೆ ಮಣೆ ಹಾಕಲಿದ್ದಾರೆ ಏಕ್ತಾ.

ಹೊಸ ಮುಖಕ್ಕಾಗಿ ಏಕ್ತಾ ಹುಡುಕಾಟ

ಈ ಚಿತ್ರದ ಕಥೆ, ಸನ್ನಿವೇಶಗಳನ್ನು ನೋಡಿದರೆ ಬಾಲಿವುಡ್ ನ ಯಾವ ಹೀರೋಯಿನ್ ಸಹ ಒಪ್ಪಿಕೊಳ್ಳುವುದು ಕನಸಿನ ಮಾತು. ಹಾಗಾಗಿ ಹೊಸ ಮುಖಕ್ಕಾಗಿ ಹುಡುಕಾಟ ನಡೆಸಲಾಗಿದೆ. ಆದರೆ ಇದುವರೆಗೂ ಸೂಕ್ತ ಮುಖ ಸಿಕ್ಕಿಲ್ಲ. ಒಂದು ವೇಳೆ ಸಿಕ್ಕಿದರೂ ಅವರು ಸಿನಿಮಾಗೆ ಹೇಳಿ ಮಾಡಿಸಿದಂತೆ ಇಲ್ಲವಂತೆ.

ಏಕ್ತಾ ಕಪೂರ್ ಚಿತ್ರಗಳೆಂದರೆ ಹೀಗೇನೆ

ಕೆನ್ ಘೋಷ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದ್ದು, ಬಾಲಾಜಿ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ತೆರೆಗೆ ತರಲಾಗುತ್ತಿದೆ. ಈ ರೀತಿಯ ಚಿತ್ರಗಳನ್ನು ನಿರ್ಮಿಸಿ ನದಿಗೆ ವಿರುದ್ಧವಾಗಿ ಈಜುವ ಕಲೆ ಏಕ್ತಾ ಕಪೂರ್ ಅವರಿಗೆ ಹೊಸದಲ್ಲ.

ನೋ ಹಾರ್ಡ್ ಫೀಲಿಂಗ್ಸ್ ಎಂಬುದು ಚಿತ್ರದ ಅಡಿಬರಹ

ಈ ಚಿತ್ರದ ತಾರಾಗಣದಲ್ಲಿ ಬಹುತೇಕರು ಹೊಸಬರೇ ಇರುತ್ತಾರಂತೆ. ನೋ ಹಾರ್ಡ್ ಫೀಲಿಂಗ್ಸ್ ಎಂಬುದು ಚಿತ್ರದ ಅಡಿಬರಹ. ಬಿಡುಗಡೆಗೆ ಮುನ್ನವೇ ಇಷ್ಟೆಲ್ಲಾ ರಾದ್ಧಾಂತ ಮಾಡಿರುವ ಚಿತ್ರ ಬಿಡುಗಡೆ ಬಳಿಕ ಇನ್ನೇನು ರಂಪಾಟ ಮಾಡುತ್ತದೋ ಎಂದು ಬಾಲಿವುಡ್ ನಿರೀಕ್ಷಿಸುತ್ತಿದೆ.

English summary
Indo Canadian porn star Sunny Leone sometime back shocked everyone by rejecting to star in Ekta Kapoor's upcoming erotic entertainer XXX. The movie directed by Ken Ghosh.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada