»   » 'ಬಿಗ್ ಬಾಸ್' ಕನ್ನಡ ಸೀಸನ್ 3 ಆಗುತ್ತಾ ಫ್ಲಾಪ್ ಶೋ?

'ಬಿಗ್ ಬಾಸ್' ಕನ್ನಡ ಸೀಸನ್ 3 ಆಗುತ್ತಾ ಫ್ಲಾಪ್ ಶೋ?

Posted By: ಹರಾ
Subscribe to Filmibeat Kannada

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಶುರುವಾಗುವುದಕ್ಕೆ ಇನ್ನು ಕೆಲವೇ ದಿನಗಳು ಬಾಕಿ. ಕಾರ್ಯಕ್ರಮದ ಪ್ರೋಮೋ ಶೂಟ್ ನಲ್ಲಿ ಕಿಚ್ಚ ಸುದೀಪ್ ಭಾಗವಹಿಸಿ ಸ್ಮಾಲ್ ಸ್ಕ್ರೀನ್ ನಲ್ಲಿ ಕಿಚ್ಚು ಹಚ್ಚಿದ್ದಾಗಿದೆ.

ಈಗ ಎಲ್ಲರ ಗಮನ ಇರುವುದು ಹೊರಗಡೆಯಿಂದ ಅರಮನೆಯಂತೆ ಕಾಣುವ 'ಬಿಗ್ ಬಾಸ್' ಮನೆಯಲ್ಲಿ ಸೆರೆಯಾಗುವು ಸ್ಪರ್ಧಿಗಳ ಬಗ್ಗೆ. 'ಬಿಗ್ ಬಾಸ್-3'ನಲ್ಲಿ ಯಾರೆಲ್ಲಾ ಇರಲಿದ್ದಾರೆ ಅನ್ನುವ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯ ಮೂಲಗಳಿಂದ ಸ್ಪರ್ಧಿಗಳ ಪಟ್ಟಿ ಲೀಕ್ ಆಗಿತ್ತು. [ಎಕ್ಸ್ ಕ್ಲೂಸಿವ್ : 'ಬಿಗ್ ಬಾಸ್-3'ನಲ್ಲಿ 'ಇವರೆಲ್ಲಾ' ಇರ್ತಾರೆ ಸ್ವಾಮಿ.!]

ಆ ಪಟ್ಟಿ ನೋಡಿದ ರಿಯಾಲಿಟಿ ಶೋ ಪ್ರಿಯರಿಗೆ ತುಪ್ಪದ ಹೋಳಿಗೆ ತಿಂದಷ್ಟೆ ಖುಷಿಯಾಗಿತ್ತು. ಯಾಕಂದ್ರೆ, ಖ್ಯಾತ, ಕುಖ್ಯಾತ ಮತ್ತು ವಿವಾದಗಳ ಕೇಂದ್ರಬಿಂದುವಾಗಿದ್ದವರು ಆ ಪಟ್ಟಿಯಲ್ಲಿದ್ದರು. ಹೀಗಾಗಿ, 'ಬಿಗ್ ಬಾಸ್-3' ಮನರಂಜನೆಗೆ ಮೋಸ ಇಲ್ಲ ಅಂತ ಎಲ್ರು ಲೆಕ್ಕ ಹಾಕಿದ್ದರು.

ಆದ್ರೀಗ, ಒಬ್ಬೊಬ್ಬರೇ ಆ ಪಟ್ಟಿಯಿಂದ ಹೊರನಡೆಯುತ್ತಿದ್ದಾರೆ. 'ಸೆನ್ಸೇಷನಲ್' ಅಂತ ನೀವು ಭಾವಿಸಿದ್ದವರೆಲ್ಲಾ 'ಬಿಗ್ ಬಾಸ್'ಗೆ ಬರಲ್ಲ ಅಂತಾವ್ರೆ. ಮುಂದೆ ಓದಿ......

'ದೊಡ್ಡ ದೊಡ್ಡ' ಮಂದಿ ಯಾರು ಇಲ್ಲ.!

ಕಲರ್ಸ್ ಕನ್ನಡ ವಾಹಿನಿಯ ಮೂಲಗಳಿಂದ ಹೊರಬಿದ್ದ ಪಟ್ಟಿ ಪ್ರಕಾರ, 'ಬಿಗ್ ಬಾಸ್-3'ನಲ್ಲಿ ಹುಚ್ಚ ವೆಂಕಟ್, ದಿಗಂತ್, ಐಂದ್ರಿತಾ ರೇ, ಚಿಕ್ಕಣ್ಣ, ಪ್ರಿಯಾಂಕಾ ಉಪೇಂದ್ರ, ನಯನ ಕೃಷ್ಣ, ಮೈತ್ರಿಯಾ ಗೌಡ, ರ್ಯಾಪಿಡ್ ರಶ್ಮಿ, ಸೂಪರ್ ಸ್ಟಾರ್ ಜೆ.ಕೆ, ಚಂದನ್, ರಕ್ಷಿತ್ ಶೆಟ್ಟಿ, ನೀನಾಸಂ ಸತೀಶ್, ರವಿಶಂಕರ್ ಗುರೂಜಿ, ಶೀತಲ್ ಶೆಟ್ಟಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು. ಆದ್ರೀಗ, ಇವರಲ್ಲಿ ಅರ್ಧದಷ್ಟು ಮಂದಿ 'ಬಿಗ್ ಬಾಸ್' ಕಡೆ ಮುಖ ಮಾಡಲ್ಲ ಅಂತ ಹೇಳಿದ್ದಾರೆ. ಯಾರೆಲ್ಲಾ ಅಂತ ತಿಳಿದುಕೊಳ್ಳೋಕೆ ಮುಂದೆ ಸ್ಲೈಡ್ ಕ್ಲಿಕ್ ಮಾಡಿ....

ರಕ್ಷಿತ್ ಶೆಟ್ಟಿ

ಆಕ್ಟಿಂಗ್ ಜೊತೆ ನಿರ್ದೇಶನದಲ್ಲಿ ಬಿಜಿಯಿರುವ 'ಸಿಂಪಲ್ಲಾಗೊಂದ್ ಲವ್ ಸ್ಟೋರಿ' ಖ್ಯಾತಿಯ ರಕ್ಷಿತ್ ಶೆಟ್ಟಿ 'ಬಿಗ್ ಬಾಸ್'ಗೆ ಹೋಗ್ತಿಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ.

ನೀನಾಸಂ ಸತೀಶ್

ನಟನೆ ಜೊತೆಗೆ ನಿರ್ಮಾಣಕ್ಕೂ ಇಳಿದಿರುವ ನೀನಾಸಂ ಸತೀಶ್, 'ಬಿಗ್ ಬಾಸ್' ಮನೆ ಕದ ತಟ್ಟೋದಿಲ್ಲ ಅಂತ ಹೇಳಿದ್ದಾರೆ. [ಬಿಗ್ ಬಾಸ್ ರಿಯಾಲಿಟಿ ಶೋಗೆ 'ನೋ' ಎಂದ ಕ್ವಾಟ್ಲೆ ಸತೀಶ]

ಸೂಪರ್ ಸ್ಟಾರ್ ಜೆ.ಕೆ

ಕಿಚ್ಚ ಸುದೀಪ್ ಆಪ್ತ, 'ಅಶ್ವಿನಿ ನಕ್ಷತ್ರ' ಧಾರಾವಾಹಿ ಖ್ಯಾತಿಯ ಸೂಪರ್ ಸ್ಟಾರ್ ಜೆ.ಕೆ. ಕೂಡ 'ಬಿಗ್ ಬಾಸ್'ಗೆ ಹೋಗ್ತಿಲ್ಲ. ['ಬಿಗ್ ಬಾಸ್-3'ಗೆ ಹೋಗೋದಿಲ್ವಂತೆ ಸುದೀಪ್ ಆಪ್ತ ಜೆ.ಕೆ]

ಹುಚ್ಚ ವೆಂಕಟ್ ಸಹವಾಸ ಯಾಕೆ?

ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿರುವ ಹುಚ್ಚ ವೆಂಕಟ್ ಸ್ಕ್ರೀನ್ ಮೇಲೆ ನೋಡೋಕೆ ಮಜಾ. ಆದ್ರೆ, 'ಬಿಗ್ ಬಾಸ್' ಮನೆಯಲ್ಲಿ ಅವರನ್ನ ನಿಭಾಯಿಸುವುದು ಹೇಗೆ ಅನ್ನೋದು ಕಾರ್ಯಕ್ರಮದ ನಿರ್ಮಾಪಕರ ತಲೆನೋವಿಗೆ ಕಾರಣವಾಗಿದೆ. ಒಮ್ಮೆ 'ಬಿಗ್ ಬಾಸ್'ಗೆ ಹೋಗ್ತೀನಿ ಅಂತ ಹೇಳುವ ಹುಚ್ಚ ವೆಂಕಟ್, ಇನ್ನೊಮ್ಮೆ ತಮ್ಮ ಎಕ್ಕಡದ ಕಡೆ ಬೆಟ್ಟು ಮಾಡುತ್ತಾರೆ. ಹೀಗಾಗಿ ಅವರ ಸಹವಾಸ ಯಾಕೆ ಅಂತ ಕಾರ್ಯಕ್ರಮದ ನಿರ್ಮಾಪಕರು ಸುಮ್ಮನಾಗಿದ್ದಾರಂತೆ.

ರಾಗಿಣಿ ದ್ವಿವೇದಿ

'ಬಿಗ್ ಬಾಸ್-3'ನಲ್ಲಿ ತುಪ್ಪದ ಬೆಡಗಿ ರಾಗಿಣಿ ಘಮ ಬಹುತೇಕ ಡೌಟ್ ಅನ್ನುತ್ತಿವೆ ಮೂಲಗಳು. [ಬಿಗ್ ಬಾಸ್ ಮನೆಯ ಸ್ಪರ್ಧಿ ಬಗ್ಗೆ ಬಿಸಿಬಿಸಿ ಸುದ್ದಿ!]

ಮೈತ್ರಿಯಾ ಗೌಡ ಇರ್ತಾರಾ?

'ಬಿಗ್ ಬಾಸ್' ಈಸ್ ಎ ಬ್ಲಡಿ ಫಿಕ್ಸಿಂಗ್ ಗೇಮ್ ಅಂತ ಹಿಂದೊಮ್ಮೆ ಮೈತ್ರಿಯಾ ಗೌಡ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಈಗ ಅದೇ 'ಫಿಕ್ಸಿಂಗ್' ಶೋಗೆ ಮೈತ್ರಿಯಾ ಬರ್ತಾರಾ ಅನ್ನೋದು ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ. [ಮೈತ್ರಿಯಾ ಪ್ರಕಾರ ಬಿಗ್ ಬಾಸ್ 3 ಬ್ಲಡಿ ಫಿಕ್ಸಿಂಗ್ ಶೋ!]

ಚಿಕ್ಕಣ್ಣನ ಕಾಮಿಡಿ ಝಲಕ್?

ಕಾಮಿಡಿಯನ್ ನಿಂದ ಈಗ ಹೀರೋ ಪಟ್ಟಕ್ಕೆ ಏರಿರುವ ಚಿಕ್ಕಣ್ಣಗೆ ಈಗ ಪುರುಸೊತ್ತೇ ಇಲ್ಲ. ಇನ್ನು 'ಬಿಗ್ ಬಾಸ್'ಗೆ ಬರುವುದಾದರೂ ಹೇಗೆ ಅನ್ನೋದು ಗಾಂಧಿನಗರದ ಪಂಡಿತರ ಅಭಿಪ್ರಾಯ.

ದಿಗಂತ್-ಐಂದ್ರಿತಾ ಜೋಡಿ?

ಕುತೂಹಲ ಕೆರಳಿಸಿರುವ ದಿಗಂತ್-ಐಂದ್ರಿತಾ ಜೋಡಿ, 'ಬಿಗ್ ಬಾಸ್-3'ನಲ್ಲಿ ಇರ್ತಾರಾ? ಇಲ್ವಾ? ಅನ್ನೋದಿನ್ನೂ ಕನ್ಫರ್ಮ್ ಆಗಿಲ್ಲ.

ಅವ್ರ್ ಬಿಟ್, ಇವ್ರ್ ಬಿಟ್, ಇನ್ಯಾರ್?

ಇದುವರೆಗೂ ಜನಸಾಮಾನ್ಯರ ಫೇವರಿಟ್ ಆಗಿದ್ದ ಹುಚ್ಚ ವೆಂಕಟ್, ಚಿಕ್ಕಣ್ಣ, ರಾಗಿಣಿ ದ್ವಿವೇದಿ, ಮೈತ್ರಿಯಾ ಗೌಡ, ಜೆ.ಕೆ, ರಕ್ಷಿತ್ ಶೆಟ್ಟಿ, ನೀನಾಸಂ ಸತೀಶ್ ಇಲ್ಲ ಅಂದ್ಮೇಲೆ ಶೋನಲ್ಲಿ ಇನ್ಯಾರ್ಯಾರು ಇರಲಿದ್ದಾರೋ..??

'ಬಿಗ್ ಬಾಸ್'ನಲ್ಲಿ ಸ್ಪರ್ಧಿಗಳ ಆಯ್ಕೆ ಮುಖ್ಯ

'ಬಿಗ್ ಬಾಸ್-1' ಹಿಟ್ ಆಗಿದ್ದು ಅದರ ಸ್ಪರ್ಧಿಗಳಿಂದ. ಹಾಗೇ, 'ಬಿಗ್ ಬಾಸ್-2' ಫ್ಲಾಪ್ ಆಗಿದ್ದು ಅದೇ ಸ್ಪರ್ಧಿಗಳಿಂದ. ಹೀಗಾಗಿ, ಕಾರ್ಯಕ್ರಮದ ಪಾಪ್ಯುಲಾರಿಟಿ ಡಿಪೆಂಡ್ ಆಗುವುದು ಸ್ಪರ್ಧಿಗಳ ಆಯ್ಕೆಯಿಂದಲೇ. ಖ್ಯಾತ ನಾಮರು ಕಾರ್ಯಕ್ರಮದಲ್ಲಿದ್ದರೆ, ಶೋಗೆ ಒಂದು ಕಳೆ. ಅದು ಬಿಟ್ಟು, ಸಣ್ಣಸಣ್ಣವರಿದ್ದರೆ ಸೆನ್ಸೇಷನ್ ಕ್ರಿಯೇಟ್ ಆಗೋದಾದ್ರೂ ಹೇಗೆ?

'ಬಿಗ್ ಬಾಸ್-3' ಆಗುತ್ತಾ ಫ್ಲಾಪ್ ಶೋ?

ಜನಸಾಮಾನ್ಯರ ದಿ ಮೋಸ್ಟ್ ಡಿಮ್ಯಾಂಡೆಡ್ ಸ್ಪರ್ಧಿಗಳೇ ಇಲ್ಲಾ ಅಂದ್ಮೇಲೆ, 'ಬಿಗ್ ಬಾಸ್-3' ಕ್ಲಿಕ್ ಆಗುತ್ತಾ, ಇಲ್ಲ ಫ್ಲಾಪ್ ಆಗುತ್ತಾ? ಅನ್ನೋದೇ ಈಗ ಎಲ್ಲರಿಗೂ ಕಾಡುತ್ತಿರುವ 'ಬಿಗ್' ಡೌಟ್.

Source - BTV News Kannada

English summary
Kannada Actors Rakshit Shetty, Neenasam Sathish, Karthik Jayaram have backed out from 'Bigg Boss Kannada Season-3'. The most expected contestants Huccha Venkat, Mythriya Gowda, Ragini Dwivedi are still doubt. Due to the lack of 'Expected' contestants, 'Bigg Boss-3' will be a flop show? is a question as of now.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada