For Quick Alerts
  ALLOW NOTIFICATIONS  
  For Daily Alerts

  ರಾಜಕುಮಾರಿ ಡಯಾನಾ ನಿಲುವಂಗಿಯಲ್ಲಿ ಹಾಟ್ ಎಮಿಲಿ

  By Mahesh
  |

  ನಯೋಮಿ ವಾಟ್ಸ್ ಹಾದಿಯನ್ನೇ ತುಳಿಯುತ್ತಾ ಜಗದೇಕ ಸುಂದರಿ ಎನಿಸಿದ್ದ ರಾಜಕುಮಾರಿ ಡಯನಾಳಾ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಲು ನಟಿ ಎಮಿಲಿ ಬ್ಲಂಟ್ ಸಿದ್ಧಳಾಗುತ್ತಿದ್ದಾಳೆ.

  ವೇಲ್ಸ್ ನ ರಾಜಕುವರಿ ಡಯಾನಾ ರೋಲ್ ನಲ್ಲಿ ವಾಟ್ಸ್ ಕಾಣಿಸಿಕೊಳ್ಳುವುದು ಖಾತ್ರಿಯಾಗಿದೆ. ಡಯಾನಾಳ ವರ್ಣಮಯ ಜೀವನದ ಕೊನೆಯ ಎರಡು ವರ್ಷಗಳ ಜೀವತಾವಧಿಯ ಕಥೆ ಜೊತೆಗೆ ಪ್ಯಾರೀಸ್ ನಲ್ಲಿ 1997ರಲ್ಲಿ ಕಾರು ಅಪಘಾತದಲ್ಲಿ ದುರಂತ ಸಾವನ್ನಪ್ಪಿದ ರೀತಿಯನ್ನು ಪ್ರೇಕ್ಷಕರ ಮುಂದಿಡಲು ಚಿತ್ರ ತಂಡ ಸಿದ್ಧತೆ ನಡೆಸಿದೆ.

  ಮೊದಲು ಡಯಾನಾ ರೋಲ್ ಬೇಡ ಎಂದಿದ್ದ ಎಮಿಲಿಗೆ ಈಗ ಬುದ್ಧಿ ಬಂದಿದೆ. ರಾಯಲ್ ಸೊಸೆ ರೋಲ್ ಪಡೆಯಲು ಮತ್ತೊಂದು ಯತ್ನ ನಡೆಸಿದ್ದಾಳೆ. ಡಯಾನಾಳ ಬಾಡಿಗಾರ್ಡ್ ಕೆನ್ ವಾರ್ಫ್ ಬರೆದಿರುವ Diana: Closely Guarded Secret ಕೃತಿ ಆಧಾರದ ಮೇಲೆ ಚಿತ್ರ ನಿರ್ಮಿಸಲು ಸ್ಟೀಫನ್ ಎವನ್ಸ್ ಮುಂದೆ ಬಂದಿದ್ದಾರೆ.

  ಎಮಿಲಿ ಡಯಾನಾ ರೋಲ್ ಗೆ ಸರಿಯಾಗಿ ಹೊಂದುತ್ತಾಳಾ ಎಂಬ ಸಂಶಯದ ಜೊತೆಜೊತೆಗೆ ಡ್ರೀಲ್ ರೋಲ್ ಪಡೆಯುವ ಉತ್ಸಾಹದಲ್ಲಿರುವ ಎಮಿಲಿ ಬ್ಲಂಟ್ ಯಾರು? ಆಕೆ ಚಿತ್ರ ಜೀವನದ ಕಥೆ ಏನು?ಎಮಿಲಿ ಎಂಬ ಹಾಟ್ ತಾರೆ ಬಗ್ಗೆ ಮುಂದಿನ ಸ್ಲೈಡ್ ಗಳಲ್ಲಿ

  ಎಮಿಲಿ ಬ್ಲಂಟ್

  ಎಮಿಲಿ ಬ್ಲಂಟ್

  ನೈಋತ್ಯ ಲಂಡನ್ನಿನ Roehampton ನಲ್ಲಿ ಎಮಿಲಿ ಫೆ. 23, 1983ರಲ್ಲಿ ಜನಿಸಿದಳು. ಮಾಜಿ ನಟಿ, ಶಿಕ್ಷಕಿ ಜೊಹಾನ್ನಾ ಅವರ ನಾಲ್ವರು ಮಕ್ಕಳಲ್ಲಿ ಎಮಿಲಿ ಎರಡನೆಯವಳು. ವಾರ್ಷಿಕವಾಗಿ ಸುಮಾರು 1 ಮಿಲಿಯನ್ ಪೌಂಡ್ ಗೂ ಅಧಿಕ ಆದಾಯ ವಿರುವ ಬ್ಯಾರಿಸ್ಟರ್ ಓಲಿವರ್ ಸೈಮನ್ ಬ್ಲಂಟ್ ಎಮಿಲಿಯ ತಂದೆ

  ಎಮಿಲಿ ಬ್ಲಂಟ್

  ಎಮಿಲಿ ಬ್ಲಂಟ್

  ಇಬಿಸ್ಟಾಕ್ ಪ್ಲೇಸ್ ಸ್ಕೂಲ್ ಸೇರಿದ ಬ್ಲಂಟ್, ಕಲೆ ಅಧ್ಯಯನಕ್ಕಾಗಿ ಹರ್ಟ್ ವುಡ್ ಹೌಸ್ ನಲ್ಲಿ ಕಲಿಕೆಯಲ್ಲಿದ್ದಾಗ ಮಧ್ಯವರ್ತಿಯೊಬ್ಬನಿಂದ ಚಿತ್ರರಂಗಕ್ಕೆ ಪ್ರವೇಶ ದೊರೆಯಿತು.

  ಎಮಿಲಿ ಬ್ಲಂಟ್

  ಎಮಿಲಿ ಬ್ಲಂಟ್

  ಸರ್ ಪೀಟರ್ ಹಾಲ್ ಪ್ರೊಡಕ್ಷನ್ ನಲ್ಲಿ ಜೂಡಿ ಡೆಂಚ್ ಜೋಡಿಯಾಗಿ ದಿ ರಾಯಲ್ ಫ್ಯಾಮಿಲಿ ನಾಟಕದಲ್ಲಿ ಮೊದಲಿಗೆ ಬ್ಲಂಟ್ ಕಾಣಿಸಿಕೊಂಡಳು. ದಿ ಇವನಿಂಗ್ ಸ್ಟ್ಯಾಡರ್ಟ್ ಆಕೆಯನ್ನು 'Best Newcomer'ಎಂದು ಹೊಗಳಿತು

  ಎಮಿಲಿ ಬ್ಲಂಟ್

  ಎಮಿಲಿ ಬ್ಲಂಟ್

  2002ರಲ್ಲಿ ಚಿಚೆಸ್ಟರ್ ನಾಟಕೋತ್ಸವದಲ್ಲಿ ಇಂದು ರುಬಾಸಿಂಗ್ ಅವರ ರೋಮಿಯೋ ಜ್ಯೂಲಿಯೆಟ್ ನಾಟಕದಲ್ಲಿ ಜ್ಯೂಲಿಯೆಟ್ ಪಾತ್ರದಲ್ಲಿ ಕಾಣಿಸಿಕೊಂಡಳು. ಬ್ರಿಕ್ಸ್ ಟನ್ ನಲ್ಲಿನಿಕೋಲೆಸ್ ರೈಟ್ ಅವರ ನಾಟಕದಲ್ಲಿ ಈಗ್ವೆನ್ ಆದಳು.

  ಎಮಿಲಿ ಬ್ಲಂಟ್

  ಎಮಿಲಿ ಬ್ಲಂಟ್

  ಚಿಕ್ಕಂದಿನಲ್ಲಿ 7 ರಿಂದ 14 ವರ್ಷ ತನಕ ಉಗ್ಗು ಅಥವಾ ತೊದಲುವಿಕೆಯಿಂದ ಬಳಲುತ್ತಿದ್ದ ಎಮಿಲಿ ನಂತರ ಉದ್ದುದ್ದಾ ಡೈಲಾಗ್ ಒಂದೇ ಉಸಿರಿನಲ್ಲಿ ಹೇಳಬಲ್ಲ ನಟಿಯಾದಳು. ತನ್ನ ಯಶಸ್ಸಿಗೆ ಶಾಲಾ ಶಿಕ್ಷಕಿಯೇ ಕಾರಣ ಎಂದು ಎಮಿಲಿ ಸ್ಮರಿಸುತ್ತಾರೆ.ತೊದಲುವಿಕೆ ಉಳ್ಳವರಿಗೆ ಮಾರ್ಗದರ್ಶನ ನೀಡುವಲ್ಲಿ ಕೂಡಾ ಎಮಿಲಿ ಕೈಜೋಡಿಸಿದ್ದಾಳೆ

  English summary
  Actress Emily Blunt has been tipped to follow in the footsteps of Naomi Watts by playing late Princess Of Wales Diana in a new film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X