For Quick Alerts
  ALLOW NOTIFICATIONS  
  For Daily Alerts

  ನಟಿ ತುಟಿಯಲ್ಲಿ ರಕ್ತ ಜಿನುಗುವಂತೆ ಚುಂಬನ

  By ರವಿಕಿಶೋರ್
  |

  ರಾಮ್ ಗೋಪಾಲ್ ವರ್ಮಾ ಅವರ 'ರಕ್ತ ಚರಿತ್ರೆ'ಯಲ್ಲ ಇದು ರಕ್ತ ಚುಂಬನ ಕಥೆ. ಚುಂಬನ ಸನ್ನಿವೇಶ ಆದಷ್ಟು ರೋಚಕವಾಗಿ ಮೂಡಿಬರಬೇಕು ಎಂದು ತಾರೆಗಳು ಸಾಕಷ್ಟು ಕಸರತ್ತು ಮಾಡುತ್ತಾರೆ. ಕೆಲವರು ಒಂದೇ ಟೇಕ್ ಗೆ ಓಕೆ ಆದರೆ ಕೆಲವರಿಗೆ ಎಷ್ಟೇ ಟೇಕ್ ತೆಗೆದರೂ ಅಷ್ಟೇ.

  ಇನ್ನು ಹಾಲಿವುಡ್ ಸಿನಿಮಾಗಳಲ್ಲಿ ಚುಂಬನ ದೃಶ್ಯಗಳಿಗೆ ಸಾಕಷ್ಟು ಪ್ರಾಮುಖ್ಯತೆ ಇರುತ್ತದೆ. ಪ್ರತಿ ಅರ್ಧ ಗಂಟೆಗೋ ಕಾಲು ಗಂಟೆಗೋ ಒಮ್ಮೆ ಕಿಸ್ಸಿಂಗ್ ಸೀನ್ ಬರಲಿಲ್ಲ ಅಂದರೆ ಅದು ಹಾಲಿವುಡ್ ಸಿನಿಮಾನೇ ಅಲ್ಲ ಎಂಬ ಗುರುತರ ಆರೋಪಗಳೂ ಇವೆ. [ಸ್ಟೀವನ್ ಸ್ಪೀಲ್ ಬರ್ಗ್ ಚಿತ್ರದಲ್ಲಿ ಕನ್ನಡಿಗ ಪ್ರಕಾಶ್ ರೈ]

  ಬ್ರಿಟೀಷ್ ತಾರೆ ಎಮ್ಮಾ ವಾಟ್ಸನ್ ಇತ್ತೀಚೆಗೆ ಚುಂಬನ ಸೀನ್ ಗಾಗಿ ರಕ್ತವನ್ನೇ ಹರಿಸಿದ್ದಾರೆ. ಚಿತ್ರದ ನಾಯಕ ನಟ ಡಗ್ಲಾಸ್ ಬೂತ್ ಜೊತೆಗಿನ ಈ ಪ್ರಣಯಭರಿತ ಸನ್ನಿವೇಶವನ್ನು ಅದ್ಭುತವಾಗಿ ತರಲು ಸಾಕಷ್ಟು ಬಾರಿ ಪ್ರಯತ್ನಿಸಿ ಕಡೆಗೆ ಎಮ್ಮಾ ತುಟಿಯಲ್ಲಿ ರಕ್ತ ಬರುವಂತಾಗಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

  'ನೋಹ್' ಚಿತ್ರದಲ್ಲಿ ಡಗ್ಲಾಸ್ ಬೂತ್ ಗೆ ಪತ್ನಿಯಾಗಿ ಎಮ್ಮಾ ವಾಟ್ಸನ್ ಕಾಣಿಸಲಿದ್ದಾರೆ. ಇಬ್ಬರೂ ಇಬ್ಬರೂ ಪರಸ್ಪರ ಓಡಿ ಬಂದು ಅಪ್ಪಿ ಚುಂಬಿಸಿಕೊಳ್ಳುವ ಸನ್ನಿವೇಶವದು. ಆ ಸನ್ನಿವೇಶವನ್ನು ಬಹಳಷ್ಟು ಸಲ ಚಿತ್ರೀಕರಿಸಿಕೊಳ್ಳಲಾಗಿದೆ. ಇಷ್ಟೆಲ್ಲಾ ಸಾಹಸ ಪಟ್ಟಿದ್ದಕ್ಕಾಗಿ ಎಮ್ಮಾ ತುಟಿಯಲ್ಲಿ ರಕ್ತ ಕಾರಿದರೆ ಬೂತ್ ಮೂಗು ಕೆಂಪಾಗಿ ತುಟಿಗಳಲ್ಲಿ ಊತ ಕಾಣಿಸಿಕೊಂಡಿದೆ.

  ಇಬ್ಬರೂ ಓಡಿ ಬಂದು ಅಪ್ಪಿಕೊಂಡು ಚುಂಬಿಸಿಕೊಳ್ಳುವ ಸನ್ನಿವೇಶ ಅದು. ಮೊದಲ ನಾಲ್ಕೈದು ಟೇಕ್ ಗಳು ಸಖತ್ ಎಂಜಾಯ್ ಮಾಡಿದೆವು. ಆದರೆ ಆರನೇ ಟೇಕ್ ವೇಳೆಗೆ ನಮ್ಮಿಬ್ಬರ ಪರಿಸ್ಥಿತಿ ಶೋಚನೀಯವಾಗಿತ್ತು. ನನಗೆ ತುಟಿಯಲ್ಲಿ ರಕ್ತ ವಸರಿದರೆ ಬೂತ್ ಮೂಗನ್ನು ಗಾಯಗೊಳಿಸಿದ್ದೆ. ಕಡೆಗೆ ಇಬ್ಬರೂ ಸುಸ್ತಾಗಿ ಹೋದೆವು ಅಯ್ಯೋ ಅಮ್ಮಾ ಎಂದಿದ್ದಾಗಿ ಹೇಳಿದ್ದಾರೆ ಎಮ್ಮಾ.

  English summary
  British actress Emma Watson was left with bleeding lips after filming repeated takes of a passionate scene with Douglas Booth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X