For Quick Alerts
  ALLOW NOTIFICATIONS  
  For Daily Alerts

  'ನೀಲಿ ತಾರೆ' ಮಿಯಾ ಖಲಿಫಾ ಇನ್ನಿಲ್ಲ ಎಂದ ಫೇಸ್‌ಬುಕ್!

  |

  ನೀಲಿ ಸಿನಿಮಾಗಳ ಗ್ಲೋಬಲ್ ತಾರೆ ಮಿಯಾ ಖಲಿಫಾ ನಿಧನರಾಗಿದ್ದಾರೆ ಎಂದು ಸ್ವತಃ ಫೇಸ್‌ಬುಕ್ ಪ್ರಕಟಿಸಿದೆ. ಆದರೆ ಮಿಯಾ ಖಲೀಫಾಗೆ ಏನೂ ಆಗಿಲ್ಲ ಅವರಿನ್ನೂ ಜೀವಂತವಿದ್ದಾರೆ.

  ಸೆಲೆಬ್ರಿಟಿಗಳು ನಿಧನವಾದಾಗ ಅವರ ಫೇಸ್‌ಬುಕ್‌ ಪುಟವನ್ನು ಮೆಮೋರಿಯಲ್ ಮಾಡುತ್ತದೆ ಫೇಸ್‌ಬುಕ್. ಅಂತೆಯೇ ಮಿಯಾ ಖಲೀಫಾರ ಫೇಸ್‌ಬುಕ್ ಪುಟವನ್ನು ಮೆಮೋರಿಯಲ್ ಮಾಡಿದ ಫೇಸ್‌ಬುಕ್, 'ಮಿಯಾ ಖಲೀಫಾರನ್ನು ಪ್ರೀತಿಸುವ ಅಭಿಮಾನಿಗಳು ಈ ಪುಟಕ್ಕೆ ಭೇಟಿ ನೀಡಿ ಅವರ ಜೀವನವನ್ನು ಸೆಲೆಬ್ರೇಟ್ ಮಾಡುತ್ತಾರೆ. ಮಿಯಾ ಖಲೀಫಾರನ್ನು ನೆನಪಿಸಿಕೊಳ್ಳುತ್ತಾರೆ ಎಂಬುದು ನಮ್ಮ ನಂಬಿಕೆ'' ಎಂದು ಸಂದೇಶವನ್ನು ಪ್ರಕಟಿಸಿದೆ.

  ಸ್ವತಃ ಫೇಸ್‌ಬುಕ್, ಮಿಯಾ ಖಲೀಫಾರ ಫೇಸ್‌ಬುಕ್ ಪುಟವನ್ನು ಮೆಮೋರಿಯಲ್ ಮಾಡಿದ ಕಾರಣ ಹಲವು ಅಭಿಮಾನಿಗಳು ಮಿಯಾ ಖಲೀಫಾರ ಸಾವಿನ ಸುದ್ದಿಯನ್ನು ನಂಬಿಬಿಟ್ಟಿದ್ದರು. ಶೋಕ ಸಂದೇಶಗಳನ್ನು ಸಹ ಬರೆದಿದ್ದರು.

  ಆದರೆ ಬಳಿಕ ಮಿಯಾ ಖಲೀಫ, ಟ್ವಿಟ್ಟರ್‌ನಲ್ಲಿ ಮೀಮ್ ಒಂದನ್ನು ಹಂಚಿಕೊಳ್ಳುವ ಮೂಲಕ ತಾವಿನ್ನೂ ಜೀವಂತ ಇರುವುದಾಗಿ ಹೇಳಿದರು. ನಂತರ ಅಭಿಮಾನಿಗಳು ಫೇಸ್‌ಬುಕ್‌ ಅನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.

  ಮಿಯಾ ಖಲೀಫಾರ ಸಾವಿನ ಸುಳ್ಳು ಸುದ್ದಿ ಹರಡಿರುವುದು ಇದು ಮೊದಲೇನಲ್ಲ. 2020ರ ಜೂನ್ ತಿಂಗಳಲ್ಲಿ ಮಿಯಾ ಖಲೀಫ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುದ್ದಿಗಳು ಹರಿದಾಡಿದ್ದವು, ಆಗಲೂ ತಮಾಷೆಯಾಗೆಯೇ ತಾವು ಬದುಕಿರುವುದಾಗಿ ಹೇಳಿದ್ದ ಮಿಯಾ, ''ಯಾರು ಯಾರು ನನ್ನ ನಿಧನಕ್ಕೆ ಸಂತಾಪದ ಸಂದೇಶಗಳನ್ನು, ಸಂತಾಪ ಸೂಚಕ ಹೂಗುಚ್ಛವನ್ನು ಕಳುಹಿಸುತ್ತಿದ್ದರೆಂದು ಲೆಕ್ಕ ಇಡುತ್ತಿದ್ದೀನಿ'' ಎಂದಿದ್ದರು.

  ಸನ್ನಿ ಲಿಯೋನ್ ನಂತರ ಭಾರತದಲ್ಲಿ ಅತ್ಯಂತ ಜನಪ್ರಿಯ ಪೋರ್ನ್ ಸ್ಟಾರ್ ಮಿಯಾ ಖಲೀಫಾ. ಕೇವಲ ಮೂರು ತಿಂಗಳ ಕಾಲವಷ್ಟೆ ಪೋರ್ನ್ ಉದ್ಯಮದಲ್ಲಿ ಕೆಲಸ ಮಾಡಿದ ಮಿಯಾ ನಂತರ ಪೋರ್ನ್ ಉದ್ಯಮದಿಂದ ಹೊರಗೆ ಬಂದರು.

  ಪೋರ್ನ್ ಉದ್ಯಮ ಬಿಟ್ಟ ಬಳಿಕ ಬುಕ್ ಕೀಪರ್ ಆಗಿ ಕೆಲಸ ಮಾಡಿದ್ದ ಮಿಯಾ ಬಳಿಕ ಕ್ರೀಡೆಗಳ ಕಮೆಂಟೇಟರ್ ಆಗಿ, ಸಾಮಾಜಿಕ ಜಾಲತಾಣದಲ್ಲಿ ಇನ್‌ಫ್ಲುಯೆನ್ಸರ್ ಆಗಿ, ಮಾಡೆಲ್ ಆಗಿ ಉದ್ಯೋಗ ಆರಂಭಿಸಿದರು. ಯೂಟ್ಯೂಬ್ ಚಾನೆಲ್ ಅನ್ನು ಸಹ ಹೊಂದಿರುವ ಮಿಯಾ ಖಲೀಫಾ, ತನ್ನ ಅಭಿಮಾನಿಗಳಿಗಾಗಿ ಖಾಸಗಿ ಕಂಟೆಂಟ್ ಅನ್ನು ಪೇಟರಾನ್ ಹಾಗೂ ಟ್ವಿಚ್ ಮೂಲಕ ನೀಡುತ್ತಾರೆ.

  ಕೆಲ ತಿಂಗಳ ಹಿಂದಷ್ಟೆ ಮಿಯಾ ಖಲೀಫಾ ಮಾಡಿದ್ದ ಟ್ವೀಟ್ ಭಾರಿ ಸದ್ದು ಮಾಡಿತ್ತು. ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ಮಾಡುತ್ತಿದ್ದ ಬೃಹತ್ ಪ್ರತಿಭಟನೆಗೆ ಬೆಂಬಲ ನೀಡಿ ಮಿಯಾ ಖಲೀಫಾ ಟ್ವೀಟ್ ಮಾಡಿದ್ದರು.

  English summary
  Fcebook announce Mia Khalifa is passed away by converting her Facebook page into memorial. Mia said she is alive with a meme.
  Monday, January 31, 2022, 18:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X