twitter
    For Quick Alerts
    ALLOW NOTIFICATIONS  
    For Daily Alerts

    ಪತ್ನಿ ಮೇಲೆ ಹಲ್ಲೆ: ಪತ್ರಿಕೆ ವಿರುದ್ಧ ಪ್ರಕರಣದಲ್ಲಿ ಸೋತ ಜಾನಿ ಡೆಪ್‌

    |

    ಹಾಲಿವುಡ್‌ನ ಖ್ಯಾತ ನಟ ಜಾನಿ ಡೆಪ್ ಬ್ರಿಟನ್‌ ನ್ಯಾಯಾಲಯದಲ್ಲಿ ಭಾರಿ ಹಿನ್ನಡೆಯಾಗಿದೆ. ಜಾನಿ ಡೆಪ್ ಪತ್ರಿಕೆಯೊಂದರ ಮೇಲೆ ಹೂಡಿದ್ದ ಪ್ರಕರಣದಲ್ಲಿ ಸೋಲು ಕಂಡಿದ್ದಾರೆ.

    'ಜಾನಿ ಡೆಪ್, ತಮ್ಮ ಪತ್ನಿಯ ಮೇಲೆ ನಿರ್ದಿಷ್ಟ ದಿನದಂದು 14 ಬಾರಿ ಹಲ್ಲೆ ನಡೆಸಿದ್ದರು' ಎಂದು ಎನ್‌ಜಿಎನ್‌ ಪತ್ರಿಕೆ 2018 ರಂದು ವರದಿ ಮಾಡಿತ್ತು. ಇದನ್ನು ಪ್ರಶ್ನಿಸಿ ಜಾನಿ ಡೆಪ್ ಬ್ರಿಟನ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.

    ಕನಸುಗಳ ಬಗ್ಗೆ ಕುತೂಹಲ ಹುಟ್ಟಿಸುವ 'ಕನಸಿನ ಸಿನಿಮಾ'ಕನಸುಗಳ ಬಗ್ಗೆ ಕುತೂಹಲ ಹುಟ್ಟಿಸುವ 'ಕನಸಿನ ಸಿನಿಮಾ'

    ಪ್ರಕರಣದ ವಿಚಾರಣೆ ನಡೆಸಿದ ಬ್ರಿಟನ್ ನ್ಯಾಯಾಲಯ, ಪತ್ರಿಕೆಯು ತಾನು ಬರೆದಿದ್ದು 'ಬಹುಪಾಲು ಸತ್ಯ' (ಸಬ್‌ಸೀಂಕ್ವೆಂಟ್ಲಿ ಟ್ರೂ) ಎಂದು ನಿರೂಪಿಸಿದೆ ಎಂದು ತೀರ್ಪು ಪ್ರಕಟಿಸಿದೆ. ಈ ಮೂಲಕ ಜಾನಿ ಡೆಪ್ ಮತ್ತೊಂದು ಪ್ರಕರಣವನ್ನು ಸೋತಂತಾಗಿದೆ.

    ಮಾದಕ ವಸ್ತು ಸೇವಿಸಿದ್ದಾಗಿ ಒಪ್ಪಿಕೊಂಡ ಜಾನಿ ಡೆಪ್

    ಮಾದಕ ವಸ್ತು ಸೇವಿಸಿದ್ದಾಗಿ ಒಪ್ಪಿಕೊಂಡ ಜಾನಿ ಡೆಪ್

    ಪೈರೇಟ್ಸ್ ಆಫ್ ಕೆರೆಬಿಯನ್ ನಟ ಜಾನಿ ಡೆಪ್, ನ್ಯಾಯಾಲಯದ ವಿಚಾರಣೆ ವೇಳೆ , ಪತ್ರಿಕೆ ವರದಿ ಮಾಡಿರುವ ನಿರ್ದಿಷ್ಟ ದಿನ ಕೊಕೇನ್ ಸೇವಿಸಿದ್ದಾಗಿ, ಸಾಮಾನ್ಯಕ್ಕಿಂತಲೂ ಹೆಚ್ಚು ಕುಡಿದಿದ್ದಾಗಿ ಒಪ್ಪಿಕೊಂಡಿದ್ದರು. ಅಲ್ಲದೆ, ಜಾನಿ ಡೆಪ್ ಮಾಜಿ ಪತ್ನಿ ಸಹ ತಮ್ಮ ಮೇಲೆ ಹಲ್ಲೆ ಆಗಿರುವುದಾಗಿ ಹೇಳಿದ್ದರು.

    2016 ರಲ್ಲಿ ವಿಚ್ಛೇಧನಕ್ಕೆ ಅರ್ಜಿ

    2016 ರಲ್ಲಿ ವಿಚ್ಛೇಧನಕ್ಕೆ ಅರ್ಜಿ

    ಜಾನಿ ಡೆಪ್ ಹಾಗೂ ಆಂಬರ್ ಹೆರಾಡ್ 2009 ರಿಂದಲೂ ಒಟ್ಟಿಗಿದ್ದರು, 2015 ರಲ್ಲಿ ವಿವಾಹವಾಗಿ, 2016 ರಲ್ಲಿ ಜಾನಿ ಡೆಪ್ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲಿಂದ ಇವರಿಬ್ಬರ ಮಧ್ಯೆ ದೊಡ್ಡ ನ್ಯಾಯಾಲಯ ಹೋರಾಟ ಪ್ರಾರಂಭವಾಗಿದೆ.

    ರಹಸ್ಯವಾಗಿ ಮೂರನೇ ಮದುವೆಯಾದ 'ಕಪ್ಪು ವಿಧವೆ' ಸ್ಕಾರ್ಲೆಟ್ರಹಸ್ಯವಾಗಿ ಮೂರನೇ ಮದುವೆಯಾದ 'ಕಪ್ಪು ವಿಧವೆ' ಸ್ಕಾರ್ಲೆಟ್

    ಇಲಾನ್ ಮಸ್ಕ್ ಜೊತೆ ಅಕ್ರಮ ಸಂಬಂಧ ಆರೋಪ

    ಇಲಾನ್ ಮಸ್ಕ್ ಜೊತೆ ಅಕ್ರಮ ಸಂಬಂಧ ಆರೋಪ

    ಆಂಬರ್ ಹೆರಾಡ್ ಮೇಲೆ ಹಲವು ಆರೋಪಗಳನ್ನು ಜಾನಿ ಡೆಪ್ ಹೊರಿಸಿದ್ದಾರೆ, ಹೆರಾಡ್‌ ಗೆ ಕೋಟ್ಯಾಧಿಪತಿ ಇಲಾನ್ ಮಸ್ಕ್ ಜೊತೆ ಅಕ್ರಮ ಸಂಬಂಧವಿದೆ ಎಂದು ಜಾನಿ ಡೆಪ್ ನ್ಯಾಯಾಲಯದಲ್ಲಿ ಆರೋಪಿಸಿದ್ದರು. ಹೆರಾಡ್, ತಾನು ಗೃಹ ದೌರ್ಜನ್ಯ ಸಂತ್ರಸ್ತೆ ಎಂದು ಲೇಖನ ಬರೆದಿದ್ದಕ್ಕೆ ಆಕೆಯ ವಿರುದ್ಧ ಕೋಟ್ಯಂತರ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಜಾನಿ.

    750 ಕೋಟಿ ಹಣಕ್ಕೆ ಮಾನನಷ್ಟ ಮೊಕದ್ದಮೆ

    750 ಕೋಟಿ ಹಣಕ್ಕೆ ಮಾನನಷ್ಟ ಮೊಕದ್ದಮೆ

    ಇದಕ್ಕೆ ಪ್ರತಿಯಾಗಿ ಹೆರಾಡ್ ಸಹ ಜಾನಿ ವಿರುದ್ಧ ಹಲವು ದೂರುಗಳನ್ನು ನೀಡಿದ್ದಾರೆ. ಗೃಹ ದೌರ್ಜನ್ಯ, ಸುಳ್ಳು ಆರೋಪ, ಮಾನ ಹಾನಿ ಪ್ರಕರಣಗಳನ್ನು ದಾಖಲಿಸಿದ್ದಾರೆ. 750 ಕೋಟಿ ಹಣಕ್ಕೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

    ಅವತಾರ್ 2 ಚಿತ್ರೀಕರಣ: ನೀರಿನ ಆಳದಲ್ಲಿ ಅದ್ಭುತ ಲೋಕಅವತಾರ್ 2 ಚಿತ್ರೀಕರಣ: ನೀರಿನ ಆಳದಲ್ಲಿ ಅದ್ಭುತ ಲೋಕ

    English summary
    Famous actor Johnny Depp loses libel case against a Tabloid. Britain court says tabloid proved what they published is subsequently true.
    Tuesday, November 3, 2020, 13:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X