For Quick Alerts
ALLOW NOTIFICATIONS  
For Daily Alerts

  ಅಪ್ರತಿಮ ಸುಂದರಿ ಮನ್ರೋ ಅಪರೂಪದ ಚಿತ್ರ ಹರಾಜು

  By * ಜೇಮ್ಸ್ ಮಾರ್ಟಿನ್
  |

  20ನೇ ಶತಮಾನದ ಮಾದಕ ನಟಿಯರ ಸಾಲಿನ ಅಗ್ರಗಣ್ಯ ತಾರೆ ಮರ್ಲಿನ್ ಮನ್ರೋ ಅವರ ಅಪರೂಪದ ಕಪ್ಪು ಬಿಳಿಪಿನ ಚಿತ್ರವೊಂದನ್ನು ಹರಾಜು ಹಾಕಲಾಗಿದೆ. ನಿರೀಕ್ಷೆಯಂತೆ ಭಾರಿ ಬೆಲೆಗೆ ಈ ಚಿತ್ರ ಹರಾಜಾಗಿದೆ. ನಟಿಯಾಗಿ ಜನಪ್ರಿಯತೆ ಗಳಿಸುವುದಕ್ಕೂ ಮುನ್ನ ತೆಗೆದಿದ್ದ ಈ ಚಿತ್ರ ಮನ್ರೋ ಅವರ ಪ್ರಥಮ ಫೋಟೋ ಶೂಟ್ ಆಲ್ಬಂನಿಂದ ಸಿಕ್ಕಿದ್ದಂತೆ.

  ಮಲಿಬೂನ ಝೂಮಾ ಕಡಲ ಕಿನಾರೆಯಲ್ಲಿ 20ರ ಹರೆಯ ಮನ್ರೋ ಕೊಟ್ಟ ಪೋಸ್ ಅಂದಿನ ಕೆಮೆರಾ ಕಣ್ಣೇ ನಾಚುವಂತೆ ಮಾಡಿತ್ತಂತೆ. ಈ ಅಪರೂಪದ ಚಿತ್ರ 4,250 ಪೌಂಡ್ ಗಳಿಗೆ ಹರಾಜಾಗಿದೆ.

  ನೋರ್ಮಾ ಜೀನ್ ಮೋರ್ಟೆಸನ್ ಅಲಿಯಾಸ್ ಮರ್ಲಿನ್ ಮನ್ರೋ 1946ರಲ್ಲಿ ತನ್ನ ಫ್ಯಾಕ್ಟರಿ ಕೆಲಸ ಮುಗಿಸಿಕೊಂಡು ಮಾಡೆಲಿಂಗ್ ಜಗತ್ತಿಗೆ ಜಿಗಿಯಲು ಹಾತೊರೆಯುತ್ತಿದ್ದ ಕಾಲವದು. ಈ ಸಂದರ್ಭದಲ್ಲಿ ಆಕೆಗೆ ಧೈರ್ಯ ಹೇಳಿ ಗ್ಲಾಮರ್ ಜಗತ್ತಿಗೆ ಪರಿಚಯಿಸಿದ ಫೋಟೋಗ್ರಾಫರ್ ಜೋಸೆಫ್ ಜಸ್ಗರ್ ತೆಗೆದ ಚಿತ್ರಗಳು ಸಂಗ್ರಹ ಯೋಗ್ಯವಾದ ಅಪರೂಪದ ಚಿತ್ರಗಳೆನಿಸಿವೆ. ವರ್ಣಮಯ ಚಿತ್ರಗಳಿಗಿಂತ ಕಪ್ಪು ಬಿಳಿಪಿನ ಚಿತ್ರದಲ್ಲಿ ವರ್ಣಮಯ ವ್ಯಕ್ತಿಗಳನ್ನು ಕಾಣಬಯಸುವ ಕಲಾರಸಿಕರಿಗೆ ಜೋಸೆಫ್ ಚಿತ್ರಗಳು ಮನತಣಿಸದೇ ಇರದು. [ಚಿರನಿದ್ರೆಗೆ ಜಾರಿದ ಆ ಕಾಲದ ಮಾದಕ ನಟಿ ]

  ಮನ್ರೋ ಚಿತ್ರದ ಹರಾಜುಗಾರ ಇಂಗ್ಲೆಂಡಿನ ವಿಲ್ಟ್ ಶೈರ್ ಆಂಡ್ಯೂ ಅಲ್ಡ್ರಿಡ್ಜ್ಅವರು ಈ ಚಿತ್ರಕ್ಕೆ ಸುಮಾರು 5000 ರಿಂದ 8000 ಪೌಂಡ್ ಗಳಿಸುವ ನಿರೀಕ್ಷೆ ಹೊಂದಿದ್ದರಂತೆ. ಅದರೆ, 4250 ಪೌಂಡ್ ಗೆ ಚಿತ್ರ, ಅದರ ನೆಗಟಿವ್ ಹಾಗೂ ಹಕ್ಕುಗಳನ್ನು ಮಾರಾಟಮಾಡಲಾಗಿದೆ.

  ಮನ್ರೋ ವಸ್ತುಗಳಿಗೆ ಬೇಡಿಕೆ: 1942ರ ಸೆಪ್ಟೆಂಬರ್ 14ರಂದು 16 ವರ್ಷ ವಯಸ್ಸಿನ ಮನ್ರೋ ಅವರು ತಮ್ಮ ಸಾಕುತಾಯಿಗೆ ಪೆನ್ಸಿಲ್‌ನಲ್ಲಿ ಬರೆದಿದ್ದ 8 ಪುಟಗಳ ಪತ್ರ 52,460 ಡಾಲರ್ ಗೆ ಮಾರಾಟವಾಗಿತ್ತು.

  1955 ರಲ್ಲಿ ತೆರೆ ಕಂಡಿದ್ದ 'ದಿ ಸೆವೆನ್ ಇಯರ್ ಇಛ್' ಚಿತ್ರದಲ್ಲಿ ಮನ್ರೋ ಧರಿಸಿದ್ದ ಮಾದಕ ಬಿಳಿ ಗೌನ್ ಮಾದರಿ ಉಡುಪು 4.5 ದಶಲಕ್ಷ ಡಾಲರ್‌ಗೆ ಹರಾಜಾಗಿತ್ತು. ಚಿತ್ರದ ಸನ್ನಿವೇಶವೊಂದರಲ್ಲಿ ತಣ್ಣನೆ ಬೀಸುವ ಗಾಳಿ ಕೂಡ ಮನ್ರೋ ಅವರ ಲಂಗವನ್ನು ಹಾಗೆಯೇ ಮೇಲಕ್ಕೆ ಹಾರಿಸಿತ್ತು. ಮನ್ರೋ ಒಳ ಉಡುಪು ಕಾಣಿಸುವಂತೆ ಬೀಸಿದ್ದ ತಂಗಾಳಿಗೆ ರಸಿಕರು ಥ್ಯಾಂಕ್ಸ್ ಹೇಳಿದ್ದರು.

  ನವೆಂಬರ್ 10, 1954ರಲ್ಲಿ ಮರ್ಲಿನ್ ಆಸ್ಪತ್ರೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಈ ಎಕ್ಸ್ ರೇ ತೆಗೆಯಲಾಗಿತ್ತು. ಮನ್ರೋ ಎದೆ ಭಾಗದ ಎಕ್ಸ್ ರೇ 45 ಸಾವಿರ ಡಾಲರ್ಸ್ ಗೆ ಮಾರಾಟವಾಗಿತ್ತು. 1962ರಲ್ಲಿ ಬಳಸಿದ್ದ ಕುರ್ಚಿ, ಹೈಹೀಲ್ಡ್ ಶೂಗಳನ್ನು ಹರಾಜಿಗೆ ಇಡಲಾಗಿತ್ತು. ಹೀಗೆ ಮನ್ರೋ ಬಳಸಿದ ವಸ್ತುಗಳಿಗೆ ಬೇಡಿಕೆ ಇದ್ದೇ ಇದೆ.

  English summary
  A rare negative of legendary actress Marilyn Monroe which was taken before she shot to stardom, was sold at an auction for 4,250 pounds. The picture, along with the negative and copyright, was sold for £4,250. It had been expected to fetch between £5,000 and £8,000 in Wiltshire, England on September 20th, 2014.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more