»   » ವೇದಿಕೆ ಮೇಲೆ ಎಡವಿಬಿದ್ದ ಪಾಪ್ ಕ್ವೀನ್ ಮಡೋನ್ನಾ

ವೇದಿಕೆ ಮೇಲೆ ಎಡವಿಬಿದ್ದ ಪಾಪ್ ಕ್ವೀನ್ ಮಡೋನ್ನಾ

By: ಉದಯರವಿ
Subscribe to Filmibeat Kannada

ನಡೆಯುವವರು ಎಡವುದು ಸಹಜ. ಅದೇ ರೀತಿ ಕುಣಿಯುವವರು ಬೀಳುವುದು ಸಹಜ. ಈಗ ಈ ಮಾತನ್ನು ಪಾಪ್ ಕ್ವೀನ್ ಮಡೋನ್ನಾ ನಿಜ ಮಾಡಿದ್ದಾರೆ. ಮಡೋನ್ನಾ ಕುಂತ್ರು ನಿಂತ್ರು ಸುದ್ದಿಯಾಗುವಂತಹ ಕಾಲವೊಂದಿತ್ತು. ಈಗವರ ವಯಸ್ಸು 56 ವರ್ಷ.

ಇತ್ತೀಚೆಗೆ ಬ್ರಿಟ್ ಅವಾರ್ಡ್ಸ್ 2015ರಲ್ಲಿ ಪಾಲ್ಗೊಂಡ ಅವರು ವೇದಿಕೆ ಮೇಲೆ ಕುಣಿಯುತ್ತಿರಬೇಕಾದರೆ ಎಡವಿಬಿದ್ದು ಸೊಂಟ ಉಳುಕಿಸಿಕೊಂಡಿದ್ದಾರೆ. ಮಡೋನ್ನಾ ಇದ್ದಕ್ಕಿಂದ್ದಂತೆ ಕುಸಿದು ಬಿದ್ದಾಗ ಲಕ್ಷಾಂತರ ಜನ ಏನಾಯಿತೋ ಏನೋ ಎಂದು ಗಾಬರಿಯಾಗಿದ್ದರು. ಆದರೆ ಕೂಡಲೇ ಎದ್ದನಿಂತ ಮಡೋನ್ನ ತನ್ನ ಡಾನ್ಸ್ ಶೋ ಮುಂದುವರಿಸಿ ಎಲ್ಲರೂ ನಿಟ್ಟುಸಿರುಬಿಡುವಂತೆ ಮಾಡಿದರು.

Pop Queen Madonna falls off-stage while performing

ಮಡೋನ್ನಾ ಜಾರಿ ಬೀಳಲು ಕಾರಣವಾಗಿದ್ದು ಅವರು ತೊಟ್ಟಿದ್ದ ವಿಶೇಷ ವಿನ್ಯಾಸದ ಉಡುಪು. ಬಾಲಂಗೋಚಿ ತರಹ ವಿಶೇಷವಾಗಿ ವಿನ್ಯಾಸಗೊಳಿಸಿದ್ದ ಉಡುಪು ಅದು. ಅವರು 'ಲಿವಿಂಗ್ ಫರ್ ಲವ್' ಎಂಬ ಹಾಡಿಗೆ ಹೆಜ್ಜೆ ಹಾಕುತ್ತಿರಬೇಕಾದರೆ ಈ ಘಟನೆ ನಡೆದಿದೆ.

ಶೋ ಮುಗಿದ ಮೇಲೆ ಈ ಘಟನೆ ಬಗ್ಗೆ ಸ್ವತಃ ಮಡೋನ್ನಾ ಅವರು ಟ್ವೀಟಿಸಿದ್ದಾರೆ. "ಆ ಡ್ರೆಸ್ ನಿಂದ ಬಹಳ ಕಿರಿಕಿರಿ ಅನುಭವಿಸುವಂತಾಯಿತು. ಕಾಲಿಗೆ ಸಿಕ್ಕಿಕೊಂಡ ಕಾರಣ ಎಡವಿಬಿದ್ದೆ. ಆದರೂ ಅದನ್ನು ನಾನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನೃತ್ಯವನ್ನು ಮುಂದುವರಿಸಿದೆ" ಎಂದಿದ್ದಾರೆ.

Pop Queen Madonna falls off-stage while performing

ಮಡೋನ್ನಾ ಅವರ ವಯಸ್ಸು 56 ದಾಟಿದ್ದರೂ ಅವರ ಶೋಗಳನ್ನು, ಹಾಡುಗಳನ್ನು ಇನ್ನೂ ಮುಗಿಬಿದ್ದು ನೋಡುವ ಅಭಿಮಾನಿಗಳಿದ್ದಾರೆ. ಈ ವಯಸ್ಸಿನಲ್ಲೂ 26 ವರ್ಷದ ಕೊರಿಯೋಗ್ರಾಫರ್ ಟಿಪ್ ಸ್ಟೆಫನ್ಸ್ ಜೊತೆ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ. ಈ ರೀತಿಯ ಸುದ್ದಿಗಳು ಮಡೋನ್ನಾಗೆ ಹೊಸದಲ್ಲ ಬಿಡಿ.

ಈ ನಡುವೆ ಸ್ಫೋಟಕ ಸುದ್ದಿಯೊಂದನ್ನು ಪ್ರಕಟಿಸಿದ್ದರು ಮಡೋನ್ನಾ. ತನ್ನ ಮೇಲೆ ಅತ್ಯಾಚಾರ ನಡೆದ ಘಟನೆಯನ್ನು ಅವರು ಪ್ರಸ್ತಾಪಿಸಿದ್ದರು. ಅಮೆರಿಕಾದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರೇಪ್ ವಿವರಗಳನ್ನು ಬಹಿರಂಗಪಡಿಸಿದ್ದರು.

ನ್ಯೂಯಾರ್ಕ್ ನಲ್ಲಿ ಅವಕಾಶಕ್ಕಾಗಿ ಪ್ರಯತ್ನಿಸುತ್ತಿದ್ದ ಕಷ್ಟದ ದಿನಗಳಲ್ಲಿ ನೈಪ್ ಪಾಯಿಂಟ್ ಬಳಿ ತನ್ನ ಮೇಲೆ ಅತ್ಯಾಚಾರ ನಡೆಯಿತು. ಇದಿಷ್ಟೇ ಅಲ್ಲದೆ ಗನ್ ಪಾಯಿಂಟ್, ತನ್ನ ಅಪಾರ್ಟ್ ಮೆಂಟ್ ಬಳಿ ಮೂರು ಬಾರಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂಬ ವಿಷಯವನ್ನು ಅವರು ಹೇಳಿದ್ದರು.

English summary
Brit Awards 2015 had its own set of best and embarrassing moments. The queen of Pop, Madonna is back with her new album, Rebel Heart, and while performing her fierce number, Madonna suffered an embarrassing moment.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada