Don't Miss!
- Technology
PVRನಿಂದ ಭರ್ಜರಿ ಸಿಹಿಸುದ್ದಿ; ಸಿನಿಮಾ ಪ್ರಿಯರ ಕಣ್ಣಿಗೆ ಹಬ್ಬದ ಸಂಭ್ರಮ!
- Sports
Asia Cup 2023: ಪಾಕ್ನಲ್ಲಿ ಭಾರತ ಏಷ್ಯಾಕಪ್ ಆಡದಿದ್ದರೆ, ವಿಶ್ವಕಪ್ ಆಡಲ್ಲ; ಎಚ್ಚರಿಕೆ ನೀಡಿದ ಪಿಸಿಬಿ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- News
ಬರಲಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು: ಭಾರತ ಹಾಗೂ ಕರ್ನಾಟಕದ ಯಾವ ನಗರಗಳ ನಡುವೆ ಸಂಚಾರ?
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟ ಸೂರ್ಯ, ಕಾಜೊಲ್ ಸೇರಿ ಆರು ಮಂದಿ ಭಾರತೀಯರು ಆಸ್ಕರ್ ಸಮಿತಿಗೆ ಆಯ್ಕೆ
ವಿಶ್ವದ ಅತಿ ದೊಡ್ಡ ಸಿನಿಮಾ ನಿರ್ಮಿಸುವ ದೇಶ ಹಾಗೂ ಅತಿ ದೊಡ್ಡ ಮಾರುಕಟ್ಟೆ ಎಂದು ಹೆಸರು ಗಳಿಸಿದ್ದರೂ ಸಹ ಆಸ್ಕರ್ಸ್ ಹಾಗೂ ಇತರೆ ವಿಶ್ವ ಮಟ್ಟದ ಸಿನಿಮಾ ಪ್ರಶಸ್ತಿಗಳು ಭಾರತೀಯ ಸಿನಿಮಾಗಳನ್ನು, ಭಾರತೀಯ ಸಿನಿಮಾ ಕರ್ಮಿಗಳನ್ನು ಬಹುತೇಕ ದೂರವೇ ಇಟ್ಟಿದ್ದರು. ಆದರೆ ಈಗ ಸಮಯ ಬದಲಾಗಿದೆ.
ಕಳೆದ ಆಸ್ಕರ್ಸ್ ಸಂದರ್ಭದಲ್ಲಿ ಭಾರತದ ಕೆಲವು ಸಿನಿಮಾಗಳು ಒಂದು ಹಂತದವರೆಗೆ ಗಮನ ಸೆಳೆಯಲು ಸಫಲವಾಗಿದ್ದವು. ಅದರಲ್ಲಿ ಮುಖ್ಯವಾಗಿ ತಮಿಳಿನ 'ಜೈ ಭೀಮ್' ಹಾಗೂ ಡಾಕ್ಯುಮೆಂಟರಿ ವಿಭಾಗದಲ್ಲಿ ಅಂತಿಮ ನಾಲ್ಕರ ಘಟ್ಟಕ್ಕೆ ಆಯ್ಕೆಯಾಗಿದ್ದ 'ರೈಟಿಂಗ್ ವಿಥ್ ಫೈಯರ್' ಗಳು ಆಸ್ಕರ್‌ನಲ್ಲಿ ಭಾರತೀಯ ಕಂಟೆಂಟ್‌ನ ಶಕ್ತಿ ಪ್ರದರ್ಶನ ಮಾಡಿದ್ದವು.
Bollywood
Party:
ಅನನ್ಯಾ
ಬಿಕಿನಿ,
ಕಾಜೊಲ್
ಆಫ್
ಶೋಲ್ಡರ್,
ಕತ್ರಿನಾ
ದುಬಾರಿ
ಡ್ರೆಸ್
ಟ್ರೋಲ್!
ಇದೀಗ ಆಸ್ಕರ್ ಸಮಿತಿಯು ಭಾರತದಿಂದ ಆರ್ವರನ್ನು ತನ್ನ ಸಮಿತಿ ಸದಸ್ಯರಾಗುವಂತೆ ಆಹ್ವಾನಿಸಿದೆ. ಅದರಲ್ಲಿ 'ಜೈ ಭೀಮ್' ಸಿನಿಮಾದ ನಟ, ನಿರ್ಮಾಪಕ ಸೂರ್ಯ ಹಾಗೂ ಹಿಂದಿಯ ಜನಪ್ರಿಯ ನಟಿ ಕಾಜೊಲ್ ಸಹ ಇದ್ದಾರೆ.

397 ಮಂದಿಗೆ ಆಹ್ವಾನ ಕಳಿಸಲಾಗಿದೆ
ಆಸ್ಕರ್ಸ್ ಒಟ್ಟು 397 ಆಯ್ಕೆ ಸಮಿತಿ ಸದಸ್ಯರ ತಂಡ ಮಾಡುತ್ತಿದ್ದು, ಇದರಲ್ಲಿ ಭಾರತದ ಆರು ಮಂದಿಗೆ ಸದಸ್ಯತ್ವದ ಆಹ್ವಾನ ನೀಡಿದೆ. ಆರು ಮಂದಿಯಲ್ಲಿ ನಟ ಸೂರ್ಯಾ ಹಾಗೂ ನಟಿ ಕಾಜಲ್ ಸಹ ಇದ್ದಾರೆ. 397 ಸದಸ್ಯರಲ್ಲಿ 53 ಮಂದಿ ಮಾತ್ರವೇ ಅಮೆರಿಕದ ಹೊರಗಿನವರಾಗಿರುವುದು ವಿಶೇಷ. ಅದರಲ್ಲಿ ಆರು ಮಂದಿ ಭಾರತೀಯರೇ ಆಗಿದ್ದಾರೆ.

ವಿವಿಧ ಹಿನ್ನೆಲೆಯ ಸದಸ್ಯರು
ಈ ಬಾರಿಯ ಸಮಿತಿಯಲ್ಲಿ 71 ಮಂದಿ ಆಸ್ಕರ್ ಪ್ರಶಸ್ತಿಗೆ ಒಂದಲ್ಲ ಒಂದು ವಿಭಾಗದಲ್ಲಿ ನಾಮನಿರ್ದೇಶನವಾದವರೇ ಇದ್ದಾರೆ. 15 ಮಂದಿ ಆಸ್ಕರ್ ವಿಜೇತರು ಸಹ ಸಮಿತಿಯ ಭಾಗವಾಗಿದ್ದಾರೆ. ಸಮಿತಿಯಲ್ಲಿ 44% ಮಹಿಳೆಯರಿಗೆ ಅವಕಾಶ ನೀಡಲಾಗಿದೆ. 37% ನಿರ್ಲಕ್ಷಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆಸ್ಕರ್ ರೇಸ್‌ಗೆ ವಿವಿಧ ಭಾಷೆಯ, ಸಂಸ್ಕೃತಿಯ ಸಿನಿಮಾಗಳು ಬರುತ್ತವೆ ಅವುಗಳ ಮೌಲ್ಯವನ್ನು ಸರಿಯಾಗಿ ನಿರ್ಧರಿಸಲು ಈ ವೈವಿಧ್ಯಮಯ ಹಿನ್ನೆಲೆಯುಳ್ಳ ಸದಸ್ಯರಿಂದ ಸಾಧ್ಯವಾಗುತ್ತದೆ ಎಂದಿದೆ ಆಸ್ಕರ್.

ಸೂರ್ಯಗೆ ಆಹ್ವಾನ
ನಟ ಸೂರ್ಯ ನಟಿಸಿರುವ, ನಿರ್ಮಾಣ ಮಾಡಿರುವ 'ಜೈ ಭೀಮ್' ಸಿನಿಮಾ ಆಸ್ಕರ್‌ನ ಮೊದಲ ಹಂತದಲ್ಲಿ ಆಯ್ಕೆಯಾಗಿತ್ತು ಆದರೆ ಅಂತಿಮ ನಾಲ್ಕರ ಘಟಕ್ಕೆ ಏರುವಲ್ಲಿ ವಿಫಲವಾಗಿತ್ತು. 'ಜೈ ಭೀಮ್' ಸಿನಿಮಾವು ಸರಿಯಾದ ವಿಭಾಗದಲ್ಲಿ ಆಸ್ಕರ್‌ಗೆ ಸ್ಪರ್ಧೆ ಮಾಡಿರಲಿಲ್ಲ ಎಂಬ ಮಾತುಗಳು ಆಗ ಕೇಳಿ ಬಂದಿದ್ದವು. ಈಗ ಸೂರ್ಯಾ ಅವರೇ ಆಸ್ಕರ್ ಸಮಿತಿಗೆ ಸದಸ್ಯರಾಗಿ ಹೋಗಲಿದ್ದು, ಆಸ್ಕರ್ಸ್‌ನ ಆಯ್ಕೆ ವಿಧಾನವನ್ನು ಇನ್ನಷ್ಟು ಚೆನ್ನಾಗಿ ಅರಿಯಲು ಅವರಿಗೆ ಸಹಾಯವಾಗಲಿದೆ.

ಒಟ್ಟು ಆರು ಮಂದಿಗೆ ಆಹ್ವಾನ
ಇನ್ನು ಹಿಂದಿಯ ಜನಪ್ರಿಯ ಮತ್ತು ಹಿರಿಯ ನಟಿ ಕಾಜೊಲ್ ಸಹ ಆಯ್ಕೆ ಸಮಿತಿಯ ಸದಸ್ಯೆಯಾಗಲಿದ್ದು, ಅವರಿಗೂ ಸಿನಿಮಾಗಳ ಬಗ್ಗೆ ಸಾಕಷ್ಟು ಅನುಭವ ಮತ್ತು ಜ್ಞಾನವಿದೆ. ನಟಿ ಕಾಜೊಲ್‌ಗೆ ಆಸ್ಕರ್‌ನಿಂದ ಆಹ್ವಾನ ಬಂದಿರುವುದನ್ನು ಅಜಯ್ ದೇವಗನ್ ಸಂಭ್ರಮಿಸಿದ್ದು, ನಿನ್ನ ಬಗ್ಗೆ ಹೆಮ್ಮೆಯಿದೆ ಎಂದಿದ್ದಾರೆ. ಮತ್ತು ಆಹ್ವಾನ ಸ್ವೀಕರಿಸಿದ ಇತರರಿಗೂ ಟ್ವಿಟ್ಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಸೂರ್ಯಾ, ಕಾಜೊಲ್ ಅಲ್ಲದೆ, ಚಿತ್ರಕತೆ ಬರಹಾರ್ತಿ ರೀಮಾ ಕಾಗ್ತಿ, ಸಿನಿಮಾ ಕರ್ಮಿಗಳಾದ ಸುಶ್ಮಿತಾ ಘೋಷ್, ರಿಂತು ಥಾಮಸ್, ಪಾನ್ ನಳಿನ್ ಅವರೂ ಸಹ ಆಸ್ಕರ್ ಆಯ್ಕೆ ಸಮಿತಿ ಸದಸ್ಯರಾಗಲಿದ್ದಾರೆ.