For Quick Alerts
  ALLOW NOTIFICATIONS  
  For Daily Alerts

  ತೆರಿಗೆ ವಂಚನೆ: ಎಂಟು ವರ್ಷ ಸೆರೆವಾಸದ ಆತಂಕದಲ್ಲಿ ಶಕೀರಾ

  |

  ವಿಶ್ವವಿಖ್ಯಾತ ಹಾಡುಗಾರ್ತಿ, ನಟಿ ಶಕೀರಾ ಎಂಟು ವರ್ಷ ಸೆರೆ ವಾಸ ಶಿಕ್ಷೆಗೆ ಗುರಿಯಾಗುವ ಆತಂಕದಲ್ಲಿದ್ದಾರೆ.

  'ಲ್ಯಾಟಿನ್ ಸಂಗೀತದ ರಾಣಿ' ಎಂದೇ ಕರೆಸಿಕೊಳ್ಳುವ ಶಕೀರಾ ಮತ್ತೊಮ್ಮೆ ಆರ್ಥಿಕ ಅಪರಾಧದ ಆರೋಪ ಹೊತ್ತಿದ್ದು, ಈ ಬಾರಿ ಸ್ಪೇನ್‌ನಲ್ಲಿ ಶಕೀರಾ ತೆರಿಗೆ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.

  ಶಕೀರಾ, ಆರು ಆರ್ಥಿಕ ಅಪರಾಧಗಳನ್ನು ಎಸಗಿದ್ದು, ಅವರನ್ನು ಎಂಟು ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಬೇಕು ಹಾಗೂ 180 ಕೋಟಿ ರುಪಾಯಿ (23 ಮಿಲಿಯನ್ ಡಾಲರ್) ದಂಡ ವಿಧಿಸಬೇಕು ಎಂದು ಸ್ಪೇನ್‌ನ ನ್ಯಾಯಾಂಗ ಸಚಿವಾಲಯ ದಾವೆ ಹೂಡಿದೆ.

  ಶಕೀರಾ, ಸ್ಪೇನ್ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪವನ್ನು ಹೊರಿಸಲಾಗಿದ್ದು, ವೈಯಕ್ತಿಕ ಆದಾಯ ತೆರಿಗೆ, ಆಸ್ತಿ ತೆರಿಗೆಗಳನ್ನು ಕಟ್ಟದೆ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.

  ಬಾರ್ಸಿಲೋನಾದಲ್ಲಿ ಮನೆ ಖರೀದಿಸಿದ್ದ ಶಕೀರ

  ಬಾರ್ಸಿಲೋನಾದಲ್ಲಿ ಮನೆ ಖರೀದಿಸಿದ್ದ ಶಕೀರ

  ಶಕೀರಾ, ಬಾರ್ಸಿಲೋನಾದ ಫುಟ್‌ಬಾಲ್ ಆಟಗಾರ ಜೆರಾರ್ಡ್‌ ಜೊತೆ ಪ್ರೀತಿಯಲ್ಲಿದ್ದಾಗ 2012 ರಿಂದ 2014 ರ ವರೆಗೆ ಬಾರ್ಸಿಲೋನಾದಲ್ಲಿ ಮನೆ ಖರೀದಿಸಿದ್ದರು. ಆದರೆ ಈ ಮನೆಗೆ ಆಸ್ತಿ ತೆರಿಗೆ ಹಾಗೂ ಇಲ್ಲಿದ್ದ ಎರಡು ವರ್ಷ ಅವರು ಆದಾಯ ತೆರಿಗೆ ಪಾವತಿಸಿಲ್ಲ ಎಂದು ಸ್ಪೇನ್ ಸರ್ಕಾರ ಆರೋಪಿಸಿದೆ. ಬಾರ್ಸಿಲೋನಾದಲ್ಲಿ ನೆಲೆಸಿದ್ದಾಗ ತೆರಿಗೆ ತಪ್ಪಿಸಿಕೊಳ್ಳಲೆಂದು ಆಕೆ ತಮ್ಮ ಅಧಿಕೃತ ನಿವಾಸ ಬಹಾಮಸ್‌ನಲ್ಲಿದೆ ಎಂದು ಹೇಳಿದ್ದರು.

  ಸಾಕ್ಷಿ ಕಲೆ ಹಾಕಿರುವ ಸ್ಪೇನ್ ತೆರಿಗೆ ಇಲಾಖೆ

  ಸಾಕ್ಷಿ ಕಲೆ ಹಾಕಿರುವ ಸ್ಪೇನ್ ತೆರಿಗೆ ಇಲಾಖೆ

  ಆದರೆ 2018 ರಲ್ಲಿ ಈ ಬಗ್ಗೆ ತನಿಖೆ ನಡೆಸಿದ ಸ್ಪೇನ್ ತೆರಿಗೆ ಇಲಾಖೆ, ಶಕೀರಾ ವಾಸವಿದ್ದ ಅವಧಿಯಲ್ಲಿ ಭೇಟಿ ನೀಡಿದ ಸ್ಥಳ, ಶಾಪಿಂಗ್, ಸಲೂನ್, ಆಸ್ಪತ್ರೆ (ಗರ್ಭಿಣಿ ಆಗಿದ್ದಾಗ) ಇನ್ನಿತರೆ ಸ್ಥಳಗಳಿಗೆ ತೆರಳಿ ಬಿಲ್‌ಗಳನ್ನು ಸಂಗ್ರಹಿಸಿ ಹಾಗೂ ಬಾರ್ಸಿಲೋನಾದಿಂದ ಹೊರಗೆ ಹೋದ ವಿಮಾನದ ಟಿಕೆಟ್‌ ಬುಕಿಂಗ್‌ಗಳನ್ನು ಆಧರಿಸಿ ಶಕೀರಾ ಸತತ 183 ದಿನಗಳು ಸ್ಪೇನ್‌ನಲ್ಲಿ ವಾಸವಿದ್ದರು ಎಂದಿದೆ.

  183 ದಿನ ಇದ್ದರೆ ತೆರಿಗೆ ಪಾವತಿಸಬೇಕು

  183 ದಿನ ಇದ್ದರೆ ತೆರಿಗೆ ಪಾವತಿಸಬೇಕು

  ಸ್ಪೇನ್‌ನ ಕಾನೂನಿನ ಪ್ರಕಾರ ಯಾರು ಆ ದೇಶದಲ್ಲಿ 183 ದಿನ ವಾಸವಿರುತ್ತಾರೊ ಅವರು ಆ ದೇಶಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ ಅಥವಾ ಸ್ಪೇನ್‌ನ ತೆರಿಗೆ ಪಾವತಿಸುವ ನಾಗರೀಕರಾಗಿ ಬದಲಾಗುತ್ತಾರೆ. ಹಾಗಾಗಿ ಸ್ಪೇಸ್ ಸರ್ಕಾರವು ಶಕೀರಾ 14 ಮಿಲಿಯನ್ 109 ಕೋಟಿ ತೆರಿಗೆ ಪಾವತಿಸಬೇಕು ಎಂದಿತ್ತು. ಕೆಲವು ರಿಯಾಯಿತಿಗಳನ್ನು ಸಹ ನೀಡುವುದಾಗಿ ಸರ್ಕಾರ ಹೇಳಿತ್ತು.

  ಮುಂದಿನ ದಿನಗಳಲ್ಲಿ ವಾದ ಮಂಡನೆ

  ಮುಂದಿನ ದಿನಗಳಲ್ಲಿ ವಾದ ಮಂಡನೆ

  ಆದರೆ ಸರ್ಕಾರದ ರಿಯಾಯಿತಿ ಆಫರ್ ಅನ್ನು ತಿರಸ್ಕರಿಸಿದ ಶಕೀರಾ, ತಾವು ನ್ಯಾಯಾಲಯದಲ್ಲಿ ಹೋರಾಟ ಮಾಡುವುದಾಗಿ ಹೇಳಿದರು. ಅಂತೆಯೇ ಇದೀಗ ಸ್ಪೇನ್‌ನ ನ್ಯಾಯಾಂಗ ಸಚಿವಾಲಯವು ಶಕೀರಾ ಸ್ಪೇನ್‌ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದು, ಆಕೆಯ ಮೇಲೆ 180 ಕೋಟಿ ದಂಡ ಹಾಗೂ ಆಕೆಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸುವಂತೆ ನ್ಯಾಯಾಲಯವನ್ನು ಕೋರಿದೆ. ಶಕೀರಾರ ಪರ ವಕೀಲರ ವಾದ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.

  English summary
  Tax fraud allegations against world famous singer Shakira in Spain. Government alleged that she fraud 14 million dolor of tax money.
  Wednesday, August 3, 2022, 10:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X