twitter
    For Quick Alerts
    ALLOW NOTIFICATIONS  
    For Daily Alerts

    ಕಪ್ ಸಾಂಗ್ ಮೂಲಕ ಫೇಮಸ್ ಆದ ಬೆಂಗಳೂರಿನ ಹುಡುಗಿಯರು, ಯಾರಿವರು?

    By ಯಶಸ್ವಿನಿ
    |

    ಕಪ್ ಸಾಂಗ್ ಎಂಬ ಟ್ರೆಂಡ್ ಸಾಮಾನ್ಯವಾಗಿ ಹಾಲಿವುಡ್ ಹಾಗೂ ಬಾಲಿವುಡ್ ಮಾತ್ರ ಸೀಮಿತವಾಗಿತ್ತು. ಆದರೆ, ಇದನ್ನು ಕನ್ನಡಕ್ಕೆ ತರಲು ಸಾಧ್ಯನಾ ಎಂಬುದಕ್ಕೆ ಇಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ಮಾಡಿ ತೋರಿಸಿದ್ದಾರೆ. ಈ ಪ್ರಯತ್ನಕ್ಕೆ ಸಾಕ್ಷಿಯಾಗಿರುವುದು ಬೆಂಗಳೂರಿನ ಸ್ನೇಹಿತೆಯರು.

    ರಕ್ಷಾ ಭಟ್ ಹಾಗೂ ದಿವ್ಯಾಶ್ರೀ ಅಡಿಗ ತಮ್ಮ ಪ್ರಯತ್ನಕ್ಕೆ ಹೊಸ ರೂಪ ತಂದಿದ್ದಾರೆ. ಇವರ ಹಾಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಕೆಟ್ಟದಾಗಿ ಹಾಡಿ, ಬೇಕಾಬಿಟ್ಟಿ ಟಿಕ್ ಟಾಕ್ ಮಾಡಿವವರ ನಡುವೆ ತಮ್ಮ ಶುದ್ಧ ಪ್ರತಿಭೆ ಮೂಲಕ ಈ ಹುಡುಗಿಯರು ಗಮನ ಸೆಳೆದಿದ್ದಾರೆ.

    'ಯಜಮಾನ'ನ ಬಸಣ್ಣಿ ಹಾಡಿಗೆ ಭಾವ ತುಂಬಿದ್ದು ಈ ಹುಡುಗಿಯೇ! 'ಯಜಮಾನ'ನ ಬಸಣ್ಣಿ ಹಾಡಿಗೆ ಭಾವ ತುಂಬಿದ್ದು ಈ ಹುಡುಗಿಯೇ!

    ಕಾಲೇಜು ವಿದ್ಯಾರ್ಥಿಗಳೆಂದರೇ ಸುಖಾ ಸುಮ್ಮನೇ ಹರಟೆ ಹೊಡೆದು ಕಾಲ ಕಳೆಯುವ ಈ ವೇಳೆಗೆ ಸೋಷಿಯಲ್ ಮೀಡಿಯಾವನ್ನು ಈ ತೆರನಾಗಿ ಬಳಸಿಕೊಳ್ಳುತ್ತಿರುವ ಸ್ನೇಹಿತೆಯರ ಕಾಯಕ ಅಭಿನಂದನಾರ್ಹವೇ ಸರಿ. ಮುಂದೆ ಓದಿ..

    ರಕ್ಷಾ ಭಟ್ ಹಾಗೂ ದಿವ್ಯಾಶ್ರೀ

    ರಕ್ಷಾ ಭಟ್ ಹಾಗೂ ದಿವ್ಯಾಶ್ರೀ

    ರಕ್ಷಾ ಭಟ್ ಹಾಗೂ ದಿವ್ಯಾಶ್ರೀ ಕಳೆದ ಕೆಲವು ವರ್ಷಗಳಿಂದ ಇಬ್ಬರು ಹಿಂದೂಸ್ಥಾನ್ ಹಾಗೂ ಕರ್ನಾಟಕ ಸಂಗೀತ ಅಭ್ಯಾಸ ಮಾಡುತ್ತಿದ್ದರು. ಆದರೆ, ಇವರಿಬ್ಬರು ಪರಿಚಯವಾಗಿದ್ದು ಬೆಂಗಳೂರಿನ ಎ ಎಸ್ ಸಿ ಕಾಲೇಜಿನಲ್ಲಿಯೇ. ಇಬ್ಬರೂ ಸಂಗೀತಾಸಕ್ತರೇ ಕಾರಣಕ್ಕಾಗಿ ಕಾಲೇಜಿನಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಏನಾದರೂ ಹೊಸತನ್ನು ನೀಡಬೇಕೆಂಬ ತುಡಿತದಿಂದ ಒಮ್ಮೆ ಈ ಆಲೋಚನೆ ಇವರಿಬ್ಬರ ತಲೆಗೆ ಹೊಕ್ಕಿತು. ತಕ್ಷಣ ಮಾಡೋಣವೆಂದು ತಯಾರಾದರು.

    ಪುರಂದರ ದಾಸರ ಹಾಡು

    ಪುರಂದರ ದಾಸರ ಹಾಡು

    ಇವರ ಮೊದಲ ಹಾಡು ಕಪ್ ಸಾಂಗ್ ಗೆ ಸಿಕ್ಕಿದ್ದು ಪುರಂದರ ದಾಸರ ರಚನೆಯ ರಾಗಿ ತಂದೀರಾ ಭಿಕ್ಷಕೆ..'. ಈಗಾಗಲೇ ವಾಸು ದೀಕ್ಷಿತ್ ರವರು ಈ ಹಾಡಿಗೆ ಫ್ಯುಷನ್ ಟಚ್ ಕೊಟ್ಟು ಹೊಸತನದ ನಾಂದಿ ಹಾಡಿದ್ದರು. ಇದಕ್ಕೆ ತಕ್ಕಂತೆ ತಾವು ಏನಾದರೂ ಮಾಡಬೇಕೆಂದು ಮತ್ತಷ್ಟು ಹೊಸ ಆಲಾಪಗಳನ್ನು ಸೇರಿಸಿ ಪ್ಲಾಸ್ಟಿಕ್ ಕಪ್ ನ ಸಹಾಯದಿಂದ ತಾವೇ ಬೀಟ್ ರಚಿಸಿ ಹಾಡು ಹಾಡಿ ಫೇಸ್ ಬುಕ್ ಗೆ ಅಪ್ಲೋಡ್ ಮಾಡಿದರು. ಆಗ ಪ್ರತಿಕ್ರಿಯೆ ಬಂದಿದ್ದನ್ನು ಗಮನಿಸಿ ಮುಂದೆ ತಾವೇ ಸ್ವರತಾಳ ಎಂಬ ಪೇಜ್ ಅನ್ನು ಕ್ರಿಯೇಟ್ ಮಾಡಿ ಹೊಸ ಹೊಸ ಹಾಡುಗಳನ್ನು ಹಾಕತೊಡಗಿದರು.

    'ಮಜಾ ಟಾಕೀಸ್' ನಲ್ಲಿಯೂ ಭಾಗಿ

    'ಮಜಾ ಟಾಕೀಸ್' ನಲ್ಲಿಯೂ ಭಾಗಿ

    ಮೂಲತಃ ಬೆಂಗಳೂರಿನವರೇ ಆದ ರಕ್ಷಾ ಹಾಗೂ ದಿವ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಫಾಲೋವರ್ ಪಡೆದುಕೊಂಡು ಲೈವ್ ಕಾರ್ಯಕ್ರಮಗಳನ್ನು ಅನೇಕ ವೇದಿಕೆಗಳಲ್ಲಿ ಲೈವ್ ಕೊಟ್ಟಿದ್ದಾರೆ. 'ಮಜಾ ಟಾಕೀಸ್' ನಲ್ಲಿಯೂ ಭಾಗವಹಿಸಿ ಸೃಜನ್ ಲೋಕೇಶ್ ರವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೇ ರೇಡಿಯೋ ಸಿಟಿ 91.1 ಎಫ್ ಎಂ ನಲ್ಲಿ ಸತತ ಒಂದು ಗಂಟೆಗಳ ಕಾಲ ನಿರಂತರ ಕಾರ್ಯಕ್ರಮ ನೀಡಿದ್ದಾರೆ.

    ರಕ್ಷಾ ಭಟ್ ಸಂತಸ

    ರಕ್ಷಾ ಭಟ್ ಸಂತಸ

    ''ನಮ್ಮನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿ ಗುರುತಿಸಿ ಈ ಹಾಡನ್ನು ಹೇಳಿ ಎಂದು ಅನೇಕರು ಕೇಳಿಕೊಳ್ಳುತ್ತಾರೆ. ನಮಗೆ ಅದು ಸಂತಸ ತಂದಿದೆ. ಪ್ರತಿನಿತ್ಯ ಫಾಲೋವರ್ಸ್ ಹೆಚ್ಚುತ್ತಿದ್ದಾರೆ. ಅದರಲ್ಲೂ ಮಜಾ ಟಾಕೀಸ್ ನಲ್ಲಿ ನಮ್ಮನ್ನು ನೋಡಿ ಗುರುತಿಸಿದವರು ಹೆಚ್ಚು. ಮುಂದಿನ ದಿನಗಳಲ್ಲಿ ಜಾನಪದ ಗೀತೆ ಹಾಗೂ ದೇವರ ನಾಮದಲ್ಲಿ ಈ ತರಹ ಕಪ್ ಸಾಂಗ್ ಗಳನ್ನು ಪ್ರಯತ್ನಿಸಬೇಕೆಂದು ಕೊಂಡಿದ್ದೇವೆ. ನಮಗೆ ಕಪ್ ಒಂದೇ ಅಲ್ಲ ಬೇರೇ ಬೇರೆ ಪದಾರ್ಥಗಳನ್ನು ಬಳಸಿಯೂ ಸಂಗೀತದ ರಿದಂ ಮಾಡಬಹುದೆಂದು ತೋರಿಸಿಕೊಡುವ ಅಭಿಲಾಷೆ ಇದೆ. ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ'' ಎನ್ನುತ್ತಾರೆ ರಕ್ಷಾ ಭಟ್.

    ಒಂದು ತಿಂಗಳು ಪ್ರಾಕ್ಟಿಸ್

    ''ಕಾಲೇಜು ಸಮಯ ಹೊರತುಪಡಿಸಿ ಹೊರಗೆ ಬಂದ ಮೇಲೆ ನಾವಿಬ್ಬರೂ ಸೇರಿ ಯಾವ ಹಾಡು ಹೇಳಬಹುದೆಂದು ಪ್ಲಾನ್ ಮಾಡುತ್ತೇವೆ. ನಾವು ಕೇವಲ 1 ಗಂಟೆ ಅಷ್ಟೇ ಮ್ಯೂಸಿಕ್ ಗೆ ತೆಗೆದುಕೊಳ್ಳುತ್ತೇವೆ. ನಮ್ಮ ಮನೆಯಲ್ಲಿ ಮೊಬೈಲ್ ಬಳಸಿ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತೇವೆ. ಆದರೆ ಸುಖಾಸುಮ್ಮನೆ ಮನಸೋ ಇಚ್ಛೆ ಹಾಡನ್ನು ಹೇಳುವುದಿಲ್ಲ ತಿಂಗಳಿಗೊಂದು ಹಾಡನ್ನು ಪ್ರಾಕ್ಟಿಸ್ ಮಾಡಿ ಬಿಡುತ್ತೇವೆ'' ಎಂದು ನಗುಮೊಗದದಿಂದಲೇ ರಕ್ಷಾ ನುಡಿಯುತ್ತಾರೆ.

    English summary
    20 Year old girl’s Divya and Raksha invented new cup songs trend in social media. Their songs are getting viral.
    Thursday, February 21, 2019, 19:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X