»   » ಸಂದರ್ಶನ: ನಟ ರಘು ಮುಖರ್ಜಿ ಜೊತೆ 'ಅನು'ರಾಗ ಅರಳಿದ್ದು ಹೇಗೆ.?

ಸಂದರ್ಶನ: ನಟ ರಘು ಮುಖರ್ಜಿ ಜೊತೆ 'ಅನು'ರಾಗ ಅರಳಿದ್ದು ಹೇಗೆ.?

Posted By:
Subscribe to Filmibeat Kannada

ನಟಿ ಅನು ಪ್ರಭಾಕರ್ - ನಟ ರಘು ಮುಖರ್ಜಿ ಮದುವೆ ಅನೇಕರಿಗೆ ಸರ್ ಪ್ರೈಸ್ ಮತ್ತು ಶಾಕ್ ಒಟ್ಟೊಟ್ಟಿಗೆ ನೀಡಿತ್ತು. ಕಾರಣ, ಇಬ್ಬರ 'ಲವ್ ಸ್ಟೋರಿ' ಜಗಜ್ಜಾಹೀರಾಗಿದ್ದೇ ಮದುವೆ ದಿನ.! ಅದಕ್ಕೂ ಮುನ್ನ, ಇವರಿಬ್ಬರ ಬಗ್ಗೆ ಯಾವುದೇ ಗಾಸಿಪ್ ಕೂಡ ಹರಿದಾಡಿರಲಿಲ್ಲ.

ಸೈಲೆಂಟ್ ಆಗಿ ಹಸೆಮಣೆ ಏರಿದ್ದ ಈ ಜೋಡಿ ಇಂದು ಖುಷಿಖುಷಿಯಾಗಿ... ಜೊತೆಜೊತೆಯಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.[ಅನು ಪ್ರಭಾಕರ್-ರಘು ಮುಖರ್ಜಿ 'ಎರಡನೇ' ವಿವಾಹ ಮಹೋತ್ಸವ]

ಅಸಲಿಗೆ, ನಟಿ ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ ನಡುವೆ 'ಲವ್' ಶುರುವಾಗಿದ್ದು ಎಲ್ಲಿಂದ.? ಮದುವೆ ಆಗಲು ಇಬ್ಬರು ನಿರ್ಧಾರ ಮಾಡಿದ್ದು ಯಾವಾಗ.? ಎಂಬ ವಿಚಾರಗಳ ಕುರಿತು ನಟಿ ಅನು ಪ್ರಭಾಕರ್ ಮುಖರ್ಜಿ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ನೀಡಿದ ಸಂದರ್ಶನದಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ. ಆ ಸಂದರ್ಶನದ ಆಯ್ದ ಭಾಗ ಇಲ್ಲಿದೆ ಓದಿರಿ....

ಅನು ಪ್ರಭಾಕರ್ ಮುಖರ್ಜಿ... ನಿಮ್ಮ ಲವ್ ಸ್ಟೋರಿ ಬಗ್ಗೆ ಹೇಳಿ...

- ಲವ್ ಸ್ಟೋರಿ ಅಂತ ಏನೂ ಇಲ್ಲ.

* ರಘು ಪರಿಚಯ... ಸ್ನೇಹ... ಮದುವೆ ಹೇಗಾಯ್ತು...

- ನಾವಿಬ್ಬರು ಒಟ್ಟಿಗೆ ಕೆಲಸ ಮಾಡಿದ್ವಿ. ಅವರು ನನ್ನನ್ನ 'ಟೈಗರ್' ಪ್ರಭಾಕರ್ ಮಗಳು ಅಂತ ಅಂದುಕೊಂಡಿದ್ರಂತೆ. ಅವರಿಗೆ ನನ್ನ ಬಗ್ಗೆ ಐಡಿಯಾ ಇರಲಿಲ್ಲ. ಅವರು ತುಂಬಾ ಸೈಲೆಂಟ್. ನಾನು ತುಂಬಾ ಬಾಯ್ಬಡುಕಿ. ನನಗೆ ಅವರ ಬಗ್ಗೆ ಹೆಚ್ಚಿಗೆ ಗೊತ್ತಿರಲಿಲ್ಲ. 'ಸೂಪರ್' ಕಾರ್ಯಕ್ರಮದಲ್ಲಿ ನಾವೆಲ್ಲ ಜಡ್ಜ್ ಆಗಿದ್ವಿ. ಅದಾದ್ಮೇಲೆ ಫ್ರೆಂಡ್ಸ್ ಆದ್ವಿ. ಮೀಟ್ ಮಾಡ್ತಿದ್ವಿ. ಕಷ್ಟದಲ್ಲಿ ಇರುವಾಗ ಸ್ನೇಹ ಗಟ್ಟಿ ಆಯ್ತು. ಕುಟುಂಬಗಳು ಒಂದಾದಾಗ ಮದುವೆ ಆಯ್ತು. ಮದುವೆ ಆಗುವ ಯೋಚನೆ ಖಂಡಿತ ನನಗೆ ಇರಲಿಲ್ಲ. ವಿದ್ಯಾಭ್ಯಾಸ, ಸಿನಿಮಾ ಅಂತ ಇದ್ದೆ. ಆದ್ರೆ, ಕುಟುಂಬದವರೇ ಮುಂದೆ ಬಂದಾಗ ತುಂಬಾ ಟೈಮ್ ತೆಗೆದುಕೊಂಡು ಒಪ್ಪಿಕೊಂಡ್ವಿ. ರೋಮ್ಯಾಂಟಿಕ್ ಲವ್ ಸ್ಟೋರಿ ತರಹ ಇಲ್ಲ ನಮ್ಮದು. ಈಗ ಇಬ್ಬರೂ ಜೀವನವನ್ನು ಹಂಚಿಕೊಳ್ಳುತ್ತಿರುವುದು ಖುಷಿ ಕೊಟ್ಟಿದೆ. [ನೂತನ ದಂಪತಿಗಳ ಟ್ಯಾಟೂ ಪ್ರೀತಿ ಎಂತದ್ದು ಅಂತೀರಾ?]

ಕಹಿ ಅನುಭವ... ಮತ್ತೊಂದು ಮದುವೆ ಆಗುವ ನಿರ್ಧಾರ...

- ನನ್ನ ಲೈಫ್ ಜರ್ನಿ ಎಲ್ಲರೂ ನೋಡಿದ್ದೀರಾ. ಕಹಿ ಅನುಭವಗಳು ಆಗಿದೆ. ಎಡವಿದ್ದೀವಿ ಅಂತ ಅನಿಸಿದ ಮೇಲೆ ಮತ್ತೆ ಅದೇ ಹಾದಿಯಲ್ಲಿ ಸಾಗುವುದು ಕಷ್ಟಕರವಾದ ನಿರ್ಧಾರ. ಬಹುಶಃ ನಮ್ಮಿಬ್ಬರ ತಾಯಂದಿರು ನಮ್ಮ ತಲೆಯಲ್ಲಿ ತುಂಬಿ, ಒತ್ತಾಯ ಮಾಡದೇ ಹೋಗಿದಿದ್ರೆ, ನಾವು ಮದುವೆ ಆಗುವ ಧೈರ್ಯ ಮಾಡ್ತಿರ್ಲಿಲ್ಲ. ನನ್ನ ತಾಯಿ ಮತ್ತು ಅಣ್ಣ ನನಗೆ ತುಂಬ ಸಪೋರ್ಟ್ ಮಾಡಿದರು. ನಾವಿಬ್ಬರು ಜೊತೆಯಾದರೆ ಸಂತೋಷವಾಗಿರುತ್ತೇವೆ ಅಂತ ನಮಗೆ ಅನಿಸಿದ ಮೇಲೆ ನಾನು-ರಘು ಮದುವೆ ಆಗಲು ನಿರ್ಧಾರ ಮಾಡಿದ್ವಿ.

ಈಗ ಲೈಫ್ ಹೇಗಿದೆ.?

- ಲೈಫ್ ಈಗ ಬ್ಯೂಟಿಫುಲ್ ಆಗಿದೆ. ನನ್ನ ಮುಖ ನೋಡಬಹುದು.. ಯಾವಾಗಲೂ ಖುಷಿ ಖುಷಿಯಿಂದ, ನಗುನಗುತ್ತಾ ಇರ್ತೀನಿ. ರಘು ಜೊತೆ ಹೊರಕಡೆ ಕಾಣಿಸಿಕೊಂಡರೆ, ''ನೀವು ಯಾವಾಗಲೂ ನಗ್ತಾನೇ ಇರ್ತೀರಾ'' ಅಂತ ಎಲ್ಲರೂ ಹೇಳ್ತಾರೆ. ಮುಂಚೆಯಿಂದಲೂ ನಗ್ತಿದೆ. ಈಗ ಸ್ವಲ್ಪ ಜಾಸ್ತಿ ನಗುತ್ತಿದ್ದೇನೆ. ನಾನು ಈಗ ತುಂಬಾ ಖುಷಿ ಆಗಿದ್ದೇನೆ.

ನಿಮ್ಮ ಆಯ್ಕೆ ಸೂಕ್ತ ಅಂತ ಅನಿಸುತ್ತಾ.?

- ಖಂಡಿತ. ಅಷ್ಟು ನಂಬಿಕೆ ಇರ್ಲಿಲ್ಲ ಅಂದ್ರೆ ನಾನು-ರಘು ಈ ಹೆಜ್ಜೆ ಇಡುತ್ತಲೇ ಇರ್ಲಿಲ್ಲ. ನಮ್ಮ ತಾಯಂದಿರು ಕೂಡ ಸಪೋರ್ಟ್ ಮಾಡಿದ್ದಕ್ಕೆ ಉತ್ತಮ ನಿರ್ಧಾರ ಅಂತ ಹೆಜ್ಜೆ ಇಟ್ಟಿದ್ದೇವೆ. ಪಾಸಿಟೀವ್ ಫೀಲ್ ಅಂತೂ ತುಂಬಾ ಇದೆ.

ರಘು ಮುಖರ್ಜಿ ವ್ಯಕ್ತಿತ್ವದ ಬಗ್ಗೆ ತುಂಬಾ ಇಷ್ಟವಾಗುವುದೇನು.?

- ತುಂಬಾ ಹಾನೆಸ್ಟ್. ತುಂಬಾ ಕ್ಲೀನ್ ಹಾರ್ಟೆಡ್. ನನಗೆ ಅವರ ಪರಿಚಯ ಆದಾಗಿನಿಂದಲೂ, ಯಾರ ಬಗ್ಗೆಯೂ ಒಂದು ನೆಗೆಟಿವ್ ಕಾಮೆಂಟ್ ಕೂಡ ಮಾಡಿಲ್ಲ. ಒಬ್ಬರು ಇಷ್ಟ ಆಗ್ಲಿಲ್ಲ ಅಂದ್ರೆ ಅವರಿಂದ ರಘು ದೂರ ಉಳಿಯುತ್ತಾರೆ ಹೊರತು ಗಾಸಿಪ್ ಮಾಡಲ್ಲ. ಕೆಟ್ಟದ್ದು ಕೂಡ ಬಯಸಲ್ಲ. ಇದೇ ನನಗೆ ಅವರಲ್ಲಿ ತುಂಬಾ ಇಷ್ಟ.

ಪತಿ-ಪತ್ನಿ ತೆರೆ ಹಂಚಿಕೊಳ್ಳುವ ಆಸೆ ಇದ್ಯಾ.?

- ಖಂಡಿತ ಆಸೆ ಇದೆ. ಅವರು ತುಂಬ ಒಳ್ಳೆ ಆಕ್ಟರ್. ಬಹಳ ಇನ್ವಾಲ್ವ್ ಆಗಿ ನಟಿಸುತ್ತಾರೆ. ಒಬ್ಬ ಕಲಾವಿದೆ ಆಗಿ ನೋಡುವಾಗ ನನಗೆ ತುಂಬಾ ಖುಷಿ, ಹೆಮ್ಮೆ ಆಗುತ್ತೆ. ಅವರ ಜೊತೆ ನಾನು ಸ್ಕ್ರೀನ್ ಶೇರ್ ಮಾಡಿಕೊಳ್ಳಬೇಕು ಎಂಬ ಆಸೆ ಇದೆ. ಒಳ್ಳೆ ಕಥೆ ಸಿಕ್ಕರೆ ಖಂಡಿತ ಜೊತೆಯಾಗಿ ನಟಿಸುತ್ತೇವೆ.

ನಿಮ್ಮ ಫಿಟ್ನೆಸ್ ಸೀಕ್ರೆಟ್ ಏನು.?

- ಮುಂಚೆಯಿಂದಲೂ ಮನೆಯಲ್ಲಿ ಯೋಗ ಮಾಡುತ್ತೇನೆ. ಜಿಮ್ ಗೆ ಹೋಗುತ್ತೇನೆ. ಈಗ 'ಫಿಟ್ನೆಸ್ ಫ್ರೀಕ್ ಹಸ್ಬೆಂಡ್' ಸಿಕ್ಕಿರೋದ್ರಿಂದ, ಇನ್ನೂ ಜಾಸ್ತಿ ಆಗಿದೆ. ಯಾವುದೇ ಕಾರಣಕ್ಕೂ ಜಿಮ್ ಮಿಸ್ ಮಾಡಲ್ಲ. ಅವರಿಂದ ನನಗೆ ಹುಮ್ಮಸ್ಸು ಬರುತ್ತೆ.

ಮದುವೆ ಆದ್ಮೇಲೆ ಚಿತ್ರರಂಗ.. ಬಣ್ಣದ ಬದುಕು..

- ಮದುವೆ ಆದ್ಮೇಲೆ ಸಾಕಷ್ಟು ಆಫರ್ಸ್ ಬರ್ತಾಯಿತ್ತು. ಆದ್ರೆ ಯಾವುದನ್ನೂ ಒಪ್ಪಿಕೊಂಡಿರಲಿಲ್ಲ. ಒಪ್ಪಿಕೊಂಡು ಮಾಡಿದ್ರೆ, ಸಾರ್ಥಕ ಆಗಬೇಕು. ಮಹೇಂದರ್ ಸರ್ ಗಾಗಿ 'ಮತ್ತೆ ಕೌರವ' ಸಿನಿಮಾ ಒಪ್ಪಿಕೊಂಡೆ. ಅದರಲ್ಲಿ ವಿಶೇಷ ಪಾತ್ರ ಅಷ್ಟೇ. ನಂತರ 'ತ್ರಿವೇಣಿ ಸಂಗಮ' ಧಾರಾವಾಹಿ ಆಫರ್ ಬಂತು.

ನೀವು ಸೀರಿಯಲ್ ನೋಡ್ತೀರಾ.?

- ನಿಜ ಹೇಳ್ಬೇಕಂದ್ರೆ, ನಾವು ಟಿವಿ ನೋಡಲ್ಲ. ಸಮಯ ಸಿಗುವುದೇ ಇಲ್ಲ. ಸಿನಿಮಾಗಳನ್ನ ನೋಡ್ತೀವಿ. ಟೈಮ್ ಸಿಕ್ಕಾಗಲೆಲ್ಲ ಥಿಯೇಟರ್ ಗೆ ಹೋಗಿ ನೋಡ್ತೀವಿ. ಟಿವಿ ನೋಡುವ ಅಭ್ಯಾಸ ಇಬ್ಬರಿಗೂ ಇಲ್ಲ. ರಘು ಡಾಕ್ಯುಮೆಂಟ್ರಿಗಳನ್ನು ಜಾಸ್ತಿ ನೋಡಿದ್ರೆ, ನಾನು ಹೆಚ್ಚಾಗಿ ಪುಸ್ತಕಗಳನ್ನು ಓದುತ್ತೇನೆ. ಹೀಗಾಗಿ ಟಿವಿ ಕೊಂಚ ಕಡಿಮೆ.

English summary
Kannada Actress Anu Prabhakar Mukherjee revealed her Love Story with Raghu Mukherjee in an Interview with Filmibeat Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada