»   » 'ಫಿಲ್ಮಿಬೀಟ್' ಜೊತೆ ಪವನ್ 'ರಣವಿಕ್ರಮ' ವಿಶೇಷಗಳು

'ಫಿಲ್ಮಿಬೀಟ್' ಜೊತೆ ಪವನ್ 'ರಣವಿಕ್ರಮ' ವಿಶೇಷಗಳು

Posted By:
Subscribe to Filmibeat Kannada

'ಮೈತ್ರಿ' ಹಿಟ್ ಆಯ್ತು. ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಎದುರು ನೋಡುತ್ತಿರುವ ಸಿನಿಮಾ 'ರಣವಿಕ್ರಮ'. ಪವನ್ ಒಡೆಯರ್ ನಿರ್ದೇಶನದ 'ರಣವಿಕ್ರಮ' ಈಗಾಗಲೇ ಹಲವು ವಿಶೇಷತೆಗಳಿಂದ ಕನ್ನಡ ಸಿನಿ ಪ್ರಿಯರ ಹುಬ್ಬೇರಿಸಿದೆ.

ಮಾರ್ಚ್ 17 ರಂದು ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ 'ರಣವಿಕ್ರಮ' ರಿಲೀಸ್ ಆಗಲಿದೆ ಅಂತ ಸುದ್ದಿ ಇದೆ. ಚಿತ್ರೀಕರಣಕ್ಕೆ ಕುಂಬಳಕಾಯಿ ಹೊಡೆದಿರುವ ನಿರ್ದೇಶಕ ಪವನ್ ಒಡೆಯರ್, 'ರಣವಿಕ್ರಮ' ಚಿತ್ರದ ಕುರಿತು 'ಫಿಲ್ಮಿಬೀಟ್'ಗೆ ನೀಡಿರುವ ವಿಶೇಷ ಸಂದರ್ಶನ ಇಲ್ಲಿದೆ.


Puneeth Rajkumar's Ranavikrama director Pawan Wadeyar Interview

* 'ರಣವಿಕ್ರಮ' ರಿಲೀಸ್ ಯಾವಾಗ?


- 'ರಣವಿಕ್ರಮ' ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರದ ಆಡಿಯೋ ರಿಲೀಸ್ ಆಗಲಿದೆ. ಏಪ್ರಿಲ್ ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. [ಗುಂಡಿಗೆ ಗಟ್ಟಿಮಾಡಿಕೊಂಡು ನೋಡಿ 'ರಣವಿಕ್ರಮ' ಟೀಸರ್]


Puneeth Rajkumar's Ranavikrama director Pawan Wadeyar Interview

* ಆದ್ರೆ, ಅಪ್ಪು ಹುಟ್ಟುಹಬ್ಬಕ್ಕೆ 'ರಣವಿಕ್ರಮ' ರಿಲೀಸ್ ಗಿಫ್ಟ್ ಅಂತ ಸುದ್ದಿ ಇತ್ತಲ್ಲಾ?


- ಇನ್ನೂ ಯಾವುದೂ ಫೈನಲ್ ಆಗಿಲ್ಲ. ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಸಿನಿಮಾ ರಿಲೀಸ್ ಸ್ವಲ್ಪ ಕಷ್ಟ. ಆದ್ರೆ, ಬರ್ತಡೆ ಪ್ರಯುಕ್ತ ಒಂದು ಎಕ್ಸ್ ಕ್ಲೂಸಿವ್ ಗಿಫ್ಟ್ ಖಂಡಿತ ಎಲ್ಲರಿಗೂ ಸಿಗಲಿದೆ. ['ನಾಟಿ ಅಟ್ 40' ಅಪ್ಪುಗೆ ಇದೋ ಇಲ್ಲಿದೆ ಬಿಗ್ ಗಿಫ್ಟ್]


* 'ರಣವಿಕ್ರಮ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಪಾತ್ರದ ಕುರಿತು....


- 'ರಣವಿಕ್ರಮ' ಒಂದು ಡಿಫರೆಂಟ್ ಸಿನಿಮಾ. ಪುನೀತ್ ರಾಜ್ ಕುಮಾರ್ ಪವರ್ ಫುಲ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪಾತ್ರದಲ್ಲಿ ಮೂರು ವಿಭಿನ್ನ ಶೇಡ್ಸ್ ಇದೆ. ಫೈಟ್, ಹಾಡುಗಳ ಜೊತೆಗೆ ಪುನೀತ್ ರಾಜ್ ಕುಮಾರ್ ಇಮೇಜ್ ತಕ್ಕಂತೆ 'ರಣವಿಕ್ರಮ' ರೆಡಿಯಾಗಿದೆ.


Puneeth Rajkumar's Ranavikrama director Pawan Wadeyar Interview

* 'ರಣವಿಕ್ರಮ' ಹಾಡುಗಳ ಬಗ್ಗೆ....


- 'ರಣವಿಕ್ರಮ' ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಸನ್ನಿವೇಶಕ್ಕೆ ತಕ್ಕಂತೆ ಹಾಡುಗಳು ರೆಡಿಯಾಗಿವೆ. ವಿಶೇಷ ಅಂದ್ರೆ, 'ರಣವಿಕ್ರಮ' ಚಿತ್ರದಲ್ಲಿ ಎರಡು ಹಾಡುಗಳಿಗೆ ಪುನೀತ್ ದನಿಯಾಗಿದ್ದಾರೆ. [ಇಟಲಿಯಿಂದ ಬೆಂಗಳೂರಿಗೆ ಪುನೀತ್ ರಾಜ್ ವಾಪಸ್]


* 'ರಣವಿಕ್ರಮ' ನಾಯಕಿಯರಾದ ಅದಾ ಶರ್ಮ ಮತ್ತು ಅಂಜಲಿ ಪಾತ್ರಗಳು..


- ಅದಾ ಶರ್ಮಾ ಅಭಿನಯದ '1920' ಮತ್ತು 'ಹಾರ್ಟ್ ಅಟ್ಯಾಕ್' ಸಿನಿಮಾಗಳನ್ನ ನಾನು ನೋಡಿದ್ದೆ. ಅವರ ಅಭಿನಯ ನನಗೆ ತುಂಬಾ ಖುಷಿ ಕೊಟ್ಟಿತ್ತು. 'ರಣವಿಕ್ರಮ' ಚಿತ್ರದ ನಾಯಕಿ ಪಾತ್ರಕ್ಕೆ ಅವರನ್ನ ಸಂಪರ್ಕಿಸಿದಾಗ ಹಿಂದು ಮುಂದು ನೋಡದೆ ಆಕೆ ಒಪ್ಪಿಕೊಂಡರು. ಇನ್ನೂ ಅಂಜಲಿ ಅವರಿಗೂ ಒಂದು ವಿಭಿನ್ನ ಪಾತ್ರವಿದೆ. ಅದನ್ನ ಈಗಲೇ ಬಿಟ್ಟುಕೊಡುವುದಿಲ್ಲ.


Puneeth Rajkumar's Ranavikrama director Pawan Wadeyar Interview

* ಇಬ್ಬರು ನಾಯಕಿಯರು. ಒಬ್ಬ ಹೀರೋ. ಹಾಗಾದ್ರೆ, ಯಾವ ನಟಿಗೆ ಪ್ರಾಮುಖ್ಯತೆ ಹೆಚ್ಚು?


- ಇದೇ ಸಿನಿಮಾದ ಟ್ವಿಸ್ಟ್. ಇಬ್ಬರು ನಾಯಕಿಯರಿಗೂ ಪ್ರಾಮುಖ್ಯತೆ ಇದೆ. ['ಧೀರ ರಣವಿಕ್ರಮ'ದ ವಿಲನ್ ಆಗಿ ಬಾಲಿವುಡ್ ವಿಕ್ರಮ್ ಸಿಂಗ್]


Puneeth Rajkumar's Ranavikrama director Pawan Wadeyar Interview

* 'ರಣವಿಕ್ರಮ' ಚಿತ್ರಕ್ಕೆ ನಿಮ್ಮ ಸ್ಪೂರ್ತಿ...


- ನಾನು 'ಗೋವಿಂದಾಯ ನಮಃ' ಸಿನಿಮಾ ಮಾಡುವಾಗಲೇ ಪುನೀತ್ ರಾಜ್ ಕುಮಾರ್ ಗಾಗಿ ಬರೆದ ಸ್ಕ್ರಿಪ್ಟ್ ಇದು. ಅವರೊಂದಿಗೆ ನಾನು ಕೆಲಸ ಮಾಡಿರುವುದರಿಂದ ನನ್ನ ಜೀವಮಾನದ ಕನಸು ನನಸಾಗಿದೆ.

English summary
Power Star Puneeth Rajkumar starrer 'Ranavikrama' Audio is set to hit the market soon. On this Occasion, Here is an Interview with the director Pawan Wadeyar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada