»   » 'ಭಾಗ್ಯರಾಜ್' ಚಿತ್ರಕ್ಕೆ ಮಹೇಶ್ ಹೀರೋ ಆಗಲು ಕಾರಣ ಯಾರು ಗೊತ್ತಾ?

'ಭಾಗ್ಯರಾಜ್' ಚಿತ್ರಕ್ಕೆ ಮಹೇಶ್ ಹೀರೋ ಆಗಲು ಕಾರಣ ಯಾರು ಗೊತ್ತಾ?

Posted By:
Subscribe to Filmibeat Kannada

ಸುಮಾರು ವರ್ಷಗಳ ಹಿಂದೆಯೇ ಬಿಡುಗಡೆ ಆಗಬೇಕಿದ್ದ ಲೂಸ್ ಮಾದ ಯೋಗಿ ಸಹೋದರ ಮಹೇಶ್ ಅಭಿನಯದ 'ಭಾಗ್ಯರಾಜ್' ಚಿತ್ರ ಈ ವಾರ ರಾಜ್ಯಾದ್ಯಂತ ಎಲ್ಲೆಡೆ ಭರ್ಜರಿಯಾಗಿ ಬಿಡುಗಡೆ ಆಗುತ್ತಿದೆ.

ನವ ನಿರ್ದೇಶಕ ದೀಪಕ್ ಮಧುವನ ಹಳ್ಳಿ ಅವರು ಆಕ್ಷನ್-ಕಟ್ ಹೇಳಿರುವ 'ಭಾಗ್ಯರಾಜ್' ಸಿನಿಮಾ ನಿಜ ಕಥೆಯಾಧರಿತ ಕಥೆಯನ್ನು ಹೊಂದಿದೆಯಂತೆ. ಭಾಗ್ಯ ಮತ್ತು ರಾಜು ಎಂಬ ಇಬ್ಬರು ಮುಗ್ದ ಪ್ರೇಮಿಗಳ ನಡುವೆ ನಡೆಯುವ ಪ್ರೇಮ ಕಥಾ ಹಂದರವೇ 'ಭಾಗ್ಯರಾಜ್' ಸಿನಿಮಾ.[ಪ್ರೇಕ್ಷಕರಿಗೆ ಭಾಗ್ಯರಾಜ್ ನೋಡುವ ಭಾಗ್ಯ ಯಾವಾಗ? ]


Watch video 'Bhagyaraj' Actor Mahesh Interview

ಇನ್ನು ಮಹೇಶ್ ಅವರು ನಾಯಕನಾಗಲು ಕಾರಣ ಅವರ ಸಹೋದರ ಲೂಸ್ ಮಾದ ಯೋಗೇಶ್ ಅವರಂತೆ. ನಿರ್ದೇಶಕರು 'ಬಾಗ್ಯರಾಜ್' ಸಿನಿಮಾದ ಸ್ಕ್ರಿಪ್ಟ್ ತಂದು ತೋರಿಸಿದ ಕೂಡಲೇ ಮಹೇಶ್ ಅವರು ಚಿತ್ರದ ಬಗ್ಗೆ ಮತ್ತು ಪಾತ್ರದ ಬಗ್ಗೆ ಯೋಗಿ ಅವರ ಚರ್ಚೆ ನಡೆಸಿದರಂತೆ. ಆ ಸಂದರ್ಭದಲ್ಲಿ ಮಹೇಶ್ ಅವರನ್ನು ಯೋಗಿ ಅವರು ಬೆನ್ನು ತಟ್ಟಿ ಪ್ರೋತ್ಸಾಹಿಸಿದರಂತೆ.


ಲೂಸ್ ಮಾದ ಯೋಗೇಶ್ ಅವರ ಸಹೋದರ ಚಿತ್ರದ ನಾಯಕ ಮಹೇಶ್ ಮತ್ತು ಚಿತ್ರದ ನಿರ್ದೇಶಕ ದೀಪಕ್ ಮಧುವನ ಹಳ್ಳಿ ಅವರು ಇತ್ತೀಚೆಗೆ ಬಿಡುವು ಮಾಡಿಕೊಂಡು 'ಒನ್ ಇಂಡಿಯಾ' ಕನ್ನಡ ಕಛೇರಿಗೆ ಭೇಟಿ ಇತ್ತಾಗ ನಿಮ್ಮ ಫಿಲ್ಮಿಬೀಟ್ ಕನ್ನಡ ಅವರನ್ನು ಮಾತಿಗೆಳೆಯಿತು.


Watch video 'Bhagyaraj' Actor Mahesh Interview

ನಾಯಕ ನಟ ಮಹೇಶ್ ಅವರು ಚಿತ್ರದ ಬಗ್ಗೆ, ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಹಾಗೂ ಶೂಟಿಂಗ್ ಸಂದರ್ಭದಲ್ಲಿ ತಮಗಾದ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.


ಫೆಬ್ರವರಿ 5ಕ್ಕೆ ತೆರೆ ಕಾಣುತ್ತಿರುವ 'ಭಾಗ್ಯರಾಜ್' ಸಿನಿಮಾದ ನಾಯಕ ಮಹೇಶ್ ಅವರೊಂದಿಗೆ ನಿಮ್ಮ ಫಿಲ್ಮಿಬೀಟ್ ಕನ್ನಡ ನಡೆಸಿರುವ ಎಕ್ಸ್ ಕ್ಲ್ಯೂಸಿವ್ ಸಂದರ್ಶನ ನೋಡಲು ಈ ವಿಡಿಯೋ ನೋಡಿ....


English summary
Kannada Movie 'Bhagyaraj' releasing this week (February 5th). Kannada Actor Mahesh spoke to Filmibeat. 'Bhagyaraj' Actor Mahesh Shared his experience about 'Bhagyaraj' shooting. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada