Don't Miss!
- Lifestyle
ಈ 16 ಔಷಧಿಗಳನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ಖರೀದಿಸಬಹುದು: ಸದ್ಯದಲ್ಲಿಯೇ ಬರಲಿದೆ ಈ ನಿಯಮ
- Finance
ಮೇ 27ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ
- Sports
RCB vs RR: ಮತ್ತೊಂದು ಪಂದ್ಯದಲ್ಲಿ ಕೊಹ್ಲಿ ವಿಫಲ: ರಣಜಿ ಆಡುವಂತೆ ಸಲಹೆ ನೀಡಿದ ಅಭಿಮಾನಿಗಳು!
- News
ಕಲಬುರ್ಗಿ ಯುವಕನ ಹತ್ಯೆ ಪ್ರಕರಣ: ಇಬ್ಬರ ಬಂಧನ
- Automobiles
ಹೊಸ ಟ್ರಯಂಫ್ ಟೈಗರ್ 1200 ಅಡ್ವೆಂಚರ್ ಬೈಕ್ ವಿಶೇಷತೆಗಳು
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Technology
ಸ್ಯಾಮ್ಸಂಗ್ನಿಂದ ಮತ್ತೆ ನೂತನ ಸ್ಮಾರ್ಟ್ಫೋನ್ ಅನಾವರಣ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಯಸ್ಸು 40, ಕಾಣೋದು 20ರ ಹಾಗೆ, ಮೀರಾ ಜಾಸ್ಮಿನ್ ಜಿಮ್ ಫೊಟೋ ವೈರಲ್!
ನಟಿ ಮೀರಾ ಜಾಸ್ಮಿನ್ ನಿಮಗೆಲ್ಲಾ ನೆನಪಿರಬೇಕು. ಕನ್ನಡದಲ್ಲಿ ಹಲವು ಚಿತ್ರಗಳನ್ನು ಮಾಡಿ ಕನ್ನಡ ಪ್ರೇಕ್ಷಕರಿಗೆ ಹತ್ತಿರ ಆದ ನಟಿ. ದುಂಡು ಮೊಗದ ಈ ಚೆಲುವೆಯನ್ನು ಕನ್ನಡಿಗರು ಮರೆಯುವುದು ಅಷ್ಟು ಸುಲಭ ಅಲ್ಲ. ಆದರೆ ಮೀರಾ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡ ಬಳಿಕ ಚಿತ್ರರಂಗದಿಂದ ಮಾಯವಾಗಿ ಬಿಟ್ಟಿದ್ದರು.
ಮೀರಾ ಜಾಸ್ಮಿನ್ ಹೊಸ ಫೋಟೊಗಳನ್ನು ನೋಡಿದರೆ ಇದು, ಅವರೆನಾ ಎಂದು ನಂಬುವುದು ಕೊಂಚ ಕಷ್ಟವೇ. ಆದರೂ ಮೀರಾ ಜಾಸ್ಮಿನ್ ಅವರ ಬದಲಾದ ಲುಕ್ ಅಚ್ಚರಿಗೆ ಕಾರಣವಾಗಿತ್ತು. ಹೊಸ ಲುಕ್ ಜೊತೆಗೆ ಮರಳಿದ ನಟಿ ತೆಲುಗು, ತಮಿಳು ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.
ಕನಸಿನ
ಮನೆ
ಬಗ್ಗೆ
ಏನಂತಾರೆ
ವೈಷ್ಣವಿ
ಗೌಡ?
ಇತ್ತೀಚೆಗೆ ಮೀರಾ ಜಾಸ್ಮಿನ್ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆದರೆ ಸಿನಿಮಾಗಿಂತಲೂ ಹೆಚ್ಚಾಗಿ ಮೀರಾ ಕಮ್ ಬ್ಯಾಕ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಂಬಲು ಸಾಧ್ಯವಾಗದಷ್ಟರ ಮಟ್ಟಿಗೆ ಮೀರಾ ಬದಲಾಗಿದ್ದಾರೆ. ಗ್ಲಾಮರ್ ಗೊಂಬೆಯಂತೆ ಮೀರಾ ಮಿಂಚುತ್ತಿದ್ದಾರೆ.
ಮೀರಾ ಜಾಸ್ಮಿನ್ ಜಿಮ್ ಲುಕ್ ವೈರಲ್!
ಈ ಹಿಂದೆ ಗ್ಲಾಮರಸ್ ಲುಕ್ ಮೂಲಕ ಮೀರಾ ಜಾಸ್ಮಿನ್ ಗಮನ ಸೆಳೆದಿದ್ದರು. ಈಗ ಜಿಮ್‌ನಲ್ಲಿ ಫೊಟೋ ಕ್ಲಿಕ್ಕಿಸಿಕೊಂಡು ಸುದ್ದಿ ಆಗಿದ್ದಾರೆ. ಮೀರಾ ಜಾಸ್ಮಿನ್‌ಗೆ ವಯಸ್ಸು ಈಗ 40. ಆದರೆ ಅವರು ಕಾಣುವುದು ಮಾತ್ರ ಹದಿಹರೆಯದ ಹುಡುಗಿಯಂತೆ. ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ಕೊಡುವ ಮೀರಾ ಜಾಸ್ಮಿನ್ ವರ್ಕೌಟ್ ಮಾಡುತ್ತಾ ಇರುತ್ತಾರೆ. ಈಗ ಹಂಚಿಕೊಂಡಿರುವ ಜಿಮ್ ಫೋಟೊದಲ್ಲಿ ಚಿಕ್ಕ ಹುಡುಯಂತೆ ಕಾಣುತ್ತಾರೆ. ಈ ಫೊಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಲಿಸ್ಟ್ ಸೇರಿದೆ.

ಮಲಯಾಳಂ ನಟಿ ಮೀರಾ ಜಾಸ್ಮಿನ್!
ನಟಿ ಮೀರಾ ಜಾಸ್ಮಿನ್ ಮೂಲತಃ ಮಲಯಾಳಿ. ಅವರು ತಮ್ಮ ಸಿನಿಮಾ ಜರ್ನಿಯನ್ನು ಮಲಯಾಳಂ ಸಿನಿಮಾರಂಗದಿಂದೇ ಆರಂಭಿಸಿದ್ದು. ಆದರೆ ತಮಿಳು ಮತ್ತು ತೆಲುಗಿನಲ್ಲಿ ಹೆಚ್ಚಿನ ಕ್ರೇಜ್ ಹುಟ್ಟು ಹಾಕಿದ್ದರು. ತೆಲುಗಿನಲ್ಲಿ ಮೀರಾ ಅವರು ಮಾಡಿರುವ ಬಹುತೇಕ ಚಿತ್ರಗಳು ಹಿಟ್ ಲಿಸ್ಟ್ ಸೇರಿವೆ. ಕಡಿಮೆ ಸಮಯದಲ್ಲೇ ಮೀರಾ ಟಾಲಿವುಡ್‌ನ ಬಹುಬೇಡಿಕೆಯ ನಟಿ ಆಗಿ ಬಿಟ್ಟಿದ್ದರು.
ದರ್ಶನ್
ಜೊತೆಗೆ
ಇಟ್ಟ
ಮೊದಲ
ಹೆಜ್ಜೆ
ನೆನೆದ
'ಬುಲ್
ಬುಲ್'
ರಚಿತಾ
ರಾಮ್!

ಕನ್ನಡದ ಹಲವು ಚಿತ್ರಗಳಲ್ಲಿ ಮೀರಾ ಅಭಿನಯ!
ಇನ್ನು ಮೀರಾ, ಕನ್ನಡದಲ್ಲೂ ಕೂಡ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೀರಾ ಜಾಸ್ಮಿನ್ ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಜೊತೆಗೆ 'ಮೌರ್ಯ' ಮತ್ತು 'ಅರಸು' ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕೊನೆಯದಾಗಿ ಅವರು ಅಭಿನಯಿಸಿದ ಸಿನಿಮಾ 'ಹೂ'. 2013ರಲ್ಲಿ ಮೀರಾ ಜಾಸ್ಮಿನ್ ದುಬೈ ಮೂಲಕ ಯುವಕನನ್ನು ಮದುವೆ ಆಗಿ ದುಬೈನಲ್ಲಿ ವಾಸ್ತವ್ಯ ಹೂಡಿದ್ದರು. ಬಳಿಕ ಸಿನಿಮಾಗಳಿಂದ ದೂರವೇ ಉಳಿದರು.
ಕನ್ನಡ
ನಟರ
ಟ್ರೋಲ್:
ಯಶ್
ಅಭಿಮಾನಿಗಳು
ಮಾಡ್ತಿರೋದು
ಸರಿಯೇ?

ಮೀರಾಗೆ ಪ್ಲಾಸ್ಟಿಕ್ ಸರ್ಜರಿ ಆಯ್ತೆಂದು ಕಮೆಂಟ್!
ಮೀರಾಳ ಹೊಸ ಲುಕ್ ನೋಡಿದವರೆಲ್ಲಾ ಅಚ್ಚರಿಗೆ ಒಳಗಾಗಿದ್ದರು. ಇದು ಪಕ್ಕಾ ಪ್ಲಾಸ್ಟಿಕ್ ಸರ್ಜರಿ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಮೀರಾಳ ಮೂಗು ಮತ್ತು ತುಟಿಯ ಆಕಾರ ಬದಲಾಗಿದೆ. ಹಾಗಾಗಿ ಮೀರಾ ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವ ಚರ್ಚೆ ಹುಟ್ಟಿಕೊಂಡಿದೆ. ಅದೇನೆ ಇದ್ದರು ಮೀರಾ ಜಾಸ್ಮಿನ್ ಮಾತ್ರ ಗ್ಲಾಮರ್ ಲುಕ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಾ ಇರುತ್ತಾರೆ.