For Quick Alerts
  ALLOW NOTIFICATIONS  
  For Daily Alerts

  ಮತ್ತೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರಾ 'ಗೂಳಿ' ಚಿತ್ರದ ನಟಿ ಮಮತಾ? ಇನ್‌ಸ್ಟಾಗ್ರಾಂನಲ್ಲಿ ಆಕೆ ಹೇಳಿದಿಷ್ಟು!

  |

  ಬಹುಭಾಷಾ ನಟಿ, ಗಾಯಕಿ ಮಮತಾ ಮೋಹನ್ ದಾಸ್ ಮತ್ತೊಮ್ಮೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡ್ತಿದೆ. ಈ ಬಗ್ಗೆ ಸ್ವತಃ ಆಕೆ ಇನ್‌ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿದ್ದು. ಅದೆಲ್ಲಾ ಬರೀ ರೂಮರ್ಸ್ ಅಷ್ಟೇ ಎಂದಿದ್ದಾರೆ.

  'ಗೂಳಿ' ಚಿತ್ರದಲ್ಲಿ ಕಿಚ್ಚ ಸುದೀಪ್ ಜೋಡಿಯಾಗಿಯೂ ಮಮತಾ ಮೋಹನ್ ದಾಸ್ ಮಿಂಚಿದ್ದರು. ಮಲಯಾಳಂನ 'ಮಯಕುಂ' ಸಿನಿಮಾ ಮೂಲಕ ಬಣ್ಣದಲೋಕಕ್ಕೆ ಎಂಟ್ರಿ ಕೊಟ್ಟ ಮಮತಾ ಮುಂದೆ ತೆಲುಗು, ತಮಿಳು ಸಿನಿಮಾಗಳಲ್ಲೂ ಮಿಂಚಿದ್ದರು. 2010ರಲ್ಲಿ ತಮಗೆ ಕ್ಯಾನ್ಸರ್ ಇರುವುದಾಗಿ ಘೋಷಿಸಿದ್ದ ನಟಿ ಅದಕ್ಕಾಗಿ ಚಿಕಿತ್ಸೆ ಪಡೆದಿದ್ದರು. ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿದ್ದರು. ಮತ್ತೆ ಸಿನಿಮಾಗಳಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇಂತಹ ಹೊತ್ತಲ್ಲೇ ನಟಿಯ ಆರೋಗ್ಯದ ಬಗ್ಗೆ ಮತ್ತೆ ರೂಮರ್ಸ್ ಶುರುವಾಗಿದೆ.

  ಐದೇ ದಿನಕ್ಕೆ 86 ಕೋಟಿ ಬಾಚಿದ ಹಿಂದಿ 'ದೃಶ್ಯಂ- 2': ಒಳ್ಳೆ ಛಾನ್ಸ್ ಮಿಸ್ ಮಾಡಿಕೊಂಡ್ರಾ ಮೋಹನ್ ಲಾಲ್?ಐದೇ ದಿನಕ್ಕೆ 86 ಕೋಟಿ ಬಾಚಿದ ಹಿಂದಿ 'ದೃಶ್ಯಂ- 2': ಒಳ್ಳೆ ಛಾನ್ಸ್ ಮಿಸ್ ಮಾಡಿಕೊಂಡ್ರಾ ಮೋಹನ್ ಲಾಲ್?

  ನಟಿ ಮಮತಾ ಮೋಹನ್ ದಾಸ್ ಮತ್ತೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ಬಾರಿ ಕ್ಯಾನ್ಸರ್ ವಿರುದ್ಧ ಹೋರಾಟ ಕಷ್ಟ ಎಂದಿದ್ದಾರೆ. ಹಾಗಾಗಿ ಈ ಬಾರಿ ಚೇತರಿಸಿಕೊಳ್ಳುವುದು ಕಷ್ಟ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿತ್ತು.

  ನಾನು ಆರೋಗ್ಯವಾಗಿದ್ದೀನಿ

  ನಾನು ಆರೋಗ್ಯವಾಗಿದ್ದೀನಿ

  ಮತ್ತೆ ನಾನು ಕ್ಯಾನ್ಸರ್‌ಗೆ ತುತ್ತಾಗಿಲ್ಲ. ತುಂಬಾ ಆರೋಗ್ಯವಾಗಿ ಇದ್ದೀನಿ. ನನ್ನ ಕೆಲಸ ನಾನು ಮಾಡಿಕೊಂಡು ಸಂತೋಷವಾಗಿ ಇದ್ದೀನಿ. ಕ್ಲಿಕ್‌ಗಳಿಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಾಕದೇ ನೀವು ನಿಮ್ಮ ಕೆಲಸ ಮಾಡಿಕೊಂಡು ಇರಿ ಎಂದು ಗಾಸಿಪ್ ಹಬ್ಬಿಸುವವರಿಗೆ ಸ್ಟ್ರಾಂಗ್ ಕೌಂಟರ್ ಕೊಟ್ಟಿದ್ದಾರೆ.

  ಸಿನಿಮಾ ನೋಡಿ ಪ್ರಭಾವಿತಗೊಂಡು ಗಂಡನ ಹಿಗ್ಗಾ-ಮುಗ್ಗಾ ಥಳಿಸಿದ ಪತ್ನಿ: ದೂರು ದಾಖಲುಸಿನಿಮಾ ನೋಡಿ ಪ್ರಭಾವಿತಗೊಂಡು ಗಂಡನ ಹಿಗ್ಗಾ-ಮುಗ್ಗಾ ಥಳಿಸಿದ ಪತ್ನಿ: ದೂರು ದಾಖಲು

  ನನ್ನ ಆಪ್ತರು ಆತಂಕಗೊಂಡಿದ್ದಾರೆ

  ನನ್ನ ಆಪ್ತರು ಆತಂಕಗೊಂಡಿದ್ದಾರೆ

  "ನಾನು ಮತ್ತೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದೀನಿ ಎನ್ನುವ ಸುದ್ದಿ ಕೇಳಿ, ನನ್ನ ಆತ್ಮೀಯರು, ಶ್ರೇಯೋಭಿಲಾಷಿಗಳು ಆತಂಕಗೊಂಡಿದ್ದಾರೆ. ನನಗೆ ಸಾಕಷ್ಟು ಮೆಸೇಜ್, ಮೇಲ್ ಬರ್ತಿದ್ದಾವೆ. ನಾನು ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದೀನಿ, ಅದರಲ್ಲಿ ನಾನು ಮತ್ತೊಮ್ಮೆ ಕ್ಯಾನ್ಸರ್‌ಗೆ ತುತ್ತಾಗಿದ್ದೇನೆ, ಈ ಬಾರಿ ಫೈಟ್ ಮಾಡುವ ಶಕ್ತಿ ಇಲ್ಲದೇ ಅದಕ್ಕೆ ಶರಣಾಗಿದ್ದೇನೆ ಎಂದೆಲ್ಲಾ ಪ್ರಚಾರ ಮಾಡುತ್ತಿದ್ದಾರೆ. ಈ ಸುದ್ದಿಯಲ್ಲಿ ಯಾವುದೇ ವಾಸ್ತವವಿಲ್ಲ. ನಾನು ತುಂಬಾ ಆರೋಗ್ಯವಾಗಿಯೇ ಇದ್ದೇನೆ. ನನ್ನ ಆರೋಗ್ಯದ ಮೇಲೆ ಬರುತ್ತಿರುವ ಫೇಕ್ ಸುದ್ದಿಗಳನ್ನು ನಂಬಬೇಡಿ" ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

  ಈಗ ನಿಮಗೆ ಉತ್ತರ ಸಿಕ್ಕಿದೆ

  ಈಗ ನಿಮಗೆ ಉತ್ತರ ಸಿಕ್ಕಿದೆ

  "ಈ ಹಿಂದೆ ಕೂಡ ನನ್ನ ಬಗ್ಗೆ ಇಂತಹ ಸುದ್ದಿಗಳು ಸಾಕಷ್ಟು ಬಂದಿವೆ. ಆದರೆ ಈ ಬಾರಿ ಬಹಳ ಮೀತಿ ಮೀರಿರುವ ಕಾರಣ ಅದಕ್ಕೆಲ್ಲಾ ಫುಲ್ ಸ್ಟಾಪ್ ಇಡಲು ಈ ರೀತಿ ಸ್ಪಂದಿಸಬೇಕಾಯಿತು. ಈಗ ನಿಮಗೆ ಉತ್ತರ ಸಿಕ್ಕಿದೆ ಅಲ್ಲವೇ, ಇನ್ನು ಮುಂದೆ ಇಂತಹ ಸುದ್ದಿ ಬರೆಯುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ ಎಂದು ಗಾಸಿಪ್‌ ಶೂರರಿಗೆ ಬಿಸಿ ಮುಟ್ಟಿಸಿದ್ದಾರೆ. ತನ್ನಂತೆಯೇ ಕಷ್ಟಕರವಾದ ಪರಿಸ್ಥಿತಿ ಎದುರಾದಾಗ ಜೀವನದ ಮೌಲ್ಯ ಗೊತ್ತಾಗುತ್ತದೆ. ನನಗೆ ಈ ವಿಚಾರವನ್ನು ನನ್ನ ಗಮನಕ್ಕೆ ತಂದವರಿಗೆ ಧನ್ಯವಾದ" ಎಂದು ಬರೆದು ಹೊಸ ಫೋಟೊಶೂಟ್ ಫೋಟೊಗಳನ್ನು ಮಮತಾ ಶೇರ್ ಮಾಡಿದ್ದಾರೆ.

  ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ನಟಿ

  ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ನಟಿ

  ಚಿತ್ರರಂಗದಲ್ಲಿ ಸಾಕಷ್ಟು ಜನ ನಟಿಯರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಕೆಲವರು ಇದನ್ನು ಜಯಿಸಿ ಮತ್ತೆ ಹೊಸ ಜೀವನವನ್ನು ಆರಂಭಿಸುತ್ತಿದ್ದಾರೆ. ಬಾಲಿವುಡ್ ಬ್ಯೂಟಿ ಮನೀಶಾ ಕೊಯಿರಾಲಾ, ಸೋನಾಲಿ ಬಿಂದ್ರೆ, ಮಲಯಾಳಂ ನಟಿ ಮಮತಾ ಮೋಹನ್ ದಾಸ್ ಸೇರಿದಂತೆ ಹಲವರು ಕ್ಯಾನ್ಸರ್ ವಿರುದ್ಧ ಹೋರಾಡಿ ಜಯಿಸಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಮತಾ ಕೂಡ ಬಹಳ ದಿನಗಳ ಕಾಲ ಕ್ಯಾನ್ಸರ್ ವಿರುದ್ಧ ಹೋರಾಡಿದ್ದರು.ತಾವು ಚಿಕಿತ್ಸೆ ಪಡೆಯುವ ಸಮಯದಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಜನರಿಗೆ ಅರಿವು ಮೂಡಿಸಿದ್ದರು.

  English summary
  Actress Mamta Mohandas gives clarification on rumours about her health. Actress has given Counter to those people who shared the fake news about her ill health. know more.
  Wednesday, November 23, 2022, 21:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X