For Quick Alerts
  ALLOW NOTIFICATIONS  
  For Daily Alerts

  ಕೇರಳ ನಟಿ ಅತ್ಯಾಚಾರ ಪ್ರಕರಣ: ಸ್ಟಾರ್ ನಟನ ವಿರುದ್ಧ ಮತ್ತೊಂದು ಪ್ರಕರಣ

  |

  2017ರಲ್ಲಿ ಕೇರಳದ ಜನಪ್ರಿಯ ನಟಿಯೊಬ್ಬರ ಮೇಲೆ ಚಲಿಸುತ್ತಿರುವ ಕಾರಿನಲ್ಲಿಯೇ ಅತ್ಯಾಚಾರ, ಹಲ್ಲೆ ನಡೆಸಿದ್ದ ಪ್ರಕರಣ ಇದೀಗ ಮತ್ತೆ ಸುದ್ದಿಗೆ ಬಂದಿದೆ.

  ಕನ್ನಡದ ಕೆಲವು ಜನಪ್ರಿಯ ಸಿನಿಮಾಗಳಲ್ಲಿಯೂ ನಟಿಸಿರುವ ಈ ನಟಿ ಇದೀಗ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರಕರಣದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜೊತೆಗೆ ಆರೋಪಿ ನಟ ದಿಲೀಪ್ ವಿರುದ್ಧ ಕೇರಳ ಪೊಲೀಸರು ಹೊಸ ಪ್ರಕರಣವೊಂದನ್ನು ದಾಖಲಿಸಿದ್ದಾರೆ.

  2017ರ ಫೆಬ್ರವರಿಯಲ್ಲಿ ಮಲಯಾಳಂ ನಟಿಯು ಚಿತ್ರೀಕರಣ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ ಕಾರಿನಲ್ಲಿ ಅಡ್ಡ ಹಾಕಿದ ಗುಂಪೊಂದು ನಟಿಯನ್ನು ಹೊರಗೆಳೆದು ತಮ್ಮ ಕಾರಿಗೆ ಹಾಕಿಕೊಂಡು ಆಕೆಯ ಮೇಲೆ ಅತ್ಯಾಚಾರ ಎಸಗಿತ್ತು, ಆ ಘಟನೆಯನ್ನು ವಿಡಿಯೋ ರೆಕಾರ್ಡ್ ಸಹ ಮಾಡಿಕೊಳ್ಳಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂನ ಸ್ಟಾರ್ ನಟ ದಿಲೀಪ್ ಅನ್ನು ಬಂಧಿಸಲಾಗಿತ್ತು.

  ಇದೀಗ ಕೇರಳ ಪೊಲೀಸರು ದಿಲೀಪ್ ವಿರುದ್ಧ ಹೊಸ ಪ್ರಕರಣ ದಾಖಲಿಸಿದ್ದು, ದಿಲೀಪ್‌ ವಿರುದ್ಧ ತನಿಖೆ ಮಾಡುತ್ತಿದ್ದ ಪೊಲೀಸ್ ಅಧಿಕಾರಿಗಳನ್ನು ಕೊಲ್ಲಲು ದಿಲೀಪ್ ಯತ್ನಿಸಿದ್ದ ಎಂದು ಕೊಲ್ಲುವ ಬೆದರಿಕೆ ಹಾಕಿದ್ದನೆಂದು ಕೇಸು ದಾಖಲಿಸಿಕೊಳ್ಳಲಾಗಿದೆ.

  ತನಿಖಾಧಿಕಾರಿಗಳ ತಲೆ ಕಡಿಯುವುದಾಗಿಯೇ ತನ್ನನ್ನು ಬಂಧಿಸಿದ ಎಸ್‌ಪಿಯ ಕೈ ಕತ್ತರಿಸುವುದಾಗಿಯೂ ದಿಲೀಪ್ ಬೆದರಿಕೆ ಹಾಕಿದ್ದ ಎಂದು ಪೊಲೀಸರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  ಉಳಿದಂತೆ ಸಂತ್ರಸ್ತ ನಟಿಯು ಇದೇ ಮೊದಲ ಬಾರಿಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಂದಿನ ಘಟನೆ ಬಗ್ಗೆ ಬರೆದುಕೊಂಡಿದ್ದು, ''ಈ ಪಯಣ ಅಷ್ಟು ಸುಲಭದ್ದಾಗಿರಲಿಲ್ಲ. ಸಂತ್ರಸ್ತೆಯಿಂದ ಬದುಕುಳಿದವಳು ಎಂಬಲ್ಲಿಗೆ ತಲುಪಿದ ಪ್ರಯಾಣ ಸಾಮಾನ್ಯದ್ದಾಗಿರಲಿಲ್ಲ'' ಎಂದು ನಟಿ ಹೇಳಿಕೊಂಡಿದ್ದಾರೆ.

  ''ನ್ಯಾಯವು ಮೇಲುಗೈ ಸಾಧಿಸುತ್ತಿರುವುದನ್ನು ನೋಡಲು, ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತಿರುವುದನ್ನು ನೋಡಲು ಹಾಗೂ ನನ್ನಂತೆ ಇನ್ಯಾರೂ ಈ ರೀತಿಯ ಅಗ್ನಿ ಪರೀಕ್ಷೆಗೆ ಒಳಗಾಗದಿರಲಿ ಎಂಬ ಹೋರಾಟಕ್ಕಾಗಿ ನನ್ನ ಈ ಪಯಣವನ್ನು ಮುಂದುವರೆಸಲಿದ್ದೇನೆ'' ಎಂದಿದ್ದಾರೆ ನಟಿ.

  ''ನನ್ನ ಮೇಲೆ ನಡೆದ ಹಲ್ಲೆ ಈ ಐದು ವರ್ಷದಲ್ಲಿ ನನ್ನ ಹೆಸರು, ನನ್ನು ಗುರುತಿನ ಮೇಲೆ ಗಾಯ ಮೂಡಿಸಿದ್ದವು. ನಾನು ಅಪರಾಧಿ ಅಲ್ಲದಿದ್ದರೂ, ನಾನು ತಪ್ಪಿತಸ್ಥಳಲ್ಲದಿದ್ದರೂ ನನ್ನ ಧ್ವನಿ ಅಡಗಿಸಲಾಗಿತ್ತು, ನನ್ನನ್ನು ಸುಮ್ಮನಾಗಿಸುವ ಯತ್ನಗಳು ನಡೆದಿದ್ದವು. ಆಗ ನನಗೆ ಬೆಂಬಲವಾಗಿ ಕೆಲವರು ಇದ್ದರು. ಈಗ ನನ್ನ ಬೆಂಬಲಕ್ಕೆ ಹಲವು ದನಿಗಳು ಒಗ್ಗೂಡಿರುವುದು ನೋಡಿದರೆ, ನ್ಯಾಯಕ್ಕಾಗಿ ನಡೆದಿರುವ ಈ ಹೋರಾಟದಲ್ಲಿ ನಾನು ಒಂಟಿಯಲ್ಲ ಎಂಬ ಭಾವನೆ ಮೂಡುತ್ತದೆ'' ಎಂದಿದ್ದಾರೆ ನಟಿ.

  ಪ್ರಕರಣದ ಮುಖ್ಯ ಆರೋಪಿ ಪಲ್ಸರ್ ಸುನಿಗೂ ನಟ ದಿಲೀಪ್‌ಗೂ ಸಂಬಂಧವಿದೆಯೆಂದು, ದಿಲೀಪ್ ಆದೇಶದಂತೆಯೇ ಸುನಿ ನಟಿಯ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಎನ್ನಲಾಗುತ್ತಿದೆ. ಆದರೆ ದಿಲೀಪ್ ಈ ಆರೋಪವನ್ನು ನಿರಾಕರಿಸುತ್ತಲೇ ಬಂದಿದ್ದಾನೆ.

  ಆದರೆ ಇದೀಗ ದಿಲೀಪ್‌ ಗೆಳೆಯರಾದ ನಿರ್ದೇಶಕ ಬಾಲಚಂದ್ರಕುಮಾರ್ ಮಾಧ್ಯಮಗಳಿಗೆ ಕೆಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದು, 2017ರಲ್ಲಿ ಅತ್ಯಾಚಾರ ಘಟನೆ ನಡೆವ ಕೆಲವು ದಿನಗಳ ಮೊದಲು ಪಲ್ಸರ್ ಸುನಿಯನ್ನು ದಿಲೀಪ್ ಮನೆಯಲ್ಲಿ ನೋಡಿದ್ದಾಗಿ ಹೇಳಿದ್ದಾರೆ. ಹಾಗೂ ನಟ ದಿಲೀಪ್, ಅತ್ಯಾಚಾರ ಘಟನೆ ಕುರಿತು ಕೆಲವರೊಟ್ಟಿಗೆ ಮಾತನಾಡಿರುವ ಆಡಿಯೋ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ಮತ್ತೆ ತನಿಖೆಯನ್ನು ಆರಂಭಿಸಿದ್ದಾರೆ.

  English summary
  Assault of Malayalam Actress: First time she talked in public. She said In this fight for justice I am not alone.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X