For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಟಿ ಮೇಲೆ ದೌರ್ಜನ್ಯ ಪ್ರಕರಣ: ದಿಲೀಪ್ ಪತ್ನಿ ಕಾವ್ಯಾ ವಿಚಾರಣೆ

  |

  ಮಲಯಾಳಂ ಸ್ಟಾರ್ ನಟಿಯ ಮೇಲೆ 2017 ರಲ್ಲಿ ನಡೆದಿದ್ದ ಅತ್ಯಾಚಾರ ಯತ್ನ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ಪತ್ನಿ ಕಾವ್ಯಾ ಮಾಧವನ್ ಅನ್ನು ಕ್ರೈಂ ಬ್ರ್ಯಾಂಚ್ ಪೊಲೀಸರು ವಿಚಾರಣೆ ನಡೆಸಿದ್ದಾರೆ.

  2017 ರಲ್ಲಿ ಮಲಯಾಳಂ ಸ್ಟಾರ್ ನಟಿಯನ್ನು ಅಡ್ಡಗಟ್ಟಿದ್ದ ಗುಂಪೊಂದು ಆಕೆಯ ಅಪಹರಣ ಮಾಡಿ ಆಕೆಯ ಮೇಲೆ ದೌರ್ಜನ್ಯ ಎಸಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಲ್ಸರ್ ಸುನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ನಂತರ ಮಲಯಾಳಂನ ಸ್ಟಾರ್ ನಟ ದಿಲೀಪ್‌ ಆಜ್ಞೆಯ ಮೇರೆಗೆ ಪಲ್ಸರ್ ಸುನಿ ಹಾಗೂ ಇತರರು ನಟಿಯ ಮೇಲೆ ದೌರ್ಜನ್ಯ ಎಸಗಿದ್ದರು ಎಂಬ ಅಂಶ ಬೆಳಕಿಗೆ ಬಂದಿತ್ತು.

  ದೇಶದ ಗಮನ ಸೆಳೆದಿದ್ದ ಪ್ರಕರಣದ ತನಿಖೆ ಚುರುಕಾಗಿ ನಡೆಯುತ್ತಿದ್ದು, ದಿಲೀಪ್ ಪತ್ನಿ ಕಾವ್ಯಾ ಮಾಧವನ್ ಹಸ್ತಕ್ಷೇಪವೂ ಈ ಪ್ರಕರಣದಲ್ಲಿ ಇದೆ ಎಂಬ ಅಂಶ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಪ್ರಕರಣದ ಆರಂಭದಿಂದಲೂ ಕಾವ್ಯಾ ಮಾಧವನ್‌ಗೆ ಪ್ರಕರಣದ ಬಗ್ಗೆ ಗೊತ್ತಿತ್ತು, ಹಾಗೂ ಕಾವ್ಯಾ ಮಾಧವನ್ ಒತ್ತಾಯದ ಮೇರೆಗೆ ದಿಲೀಪ್, ನಟಿಯ ವಿರುದ್ಧ ದೌರ್ಜನ್ಯ ಎಸಗಲು ಪಲ್ಸರ್ ಸುನಿಗೆ ಸೂಚಿಸಿದ್ದ ಎನ್ನಲಾಗಿತ್ತು.

  ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ಕ್ರೈಂ ಬ್ರ್ಯಾಂಚ್ ಪೊಲೀಸರು, ಕಾವ್ಯಾ ಮಾಧವನ್ ಅನ್ನು ದಿಲೀಪ್‌ರ ಅಲುವಾದ ನಿವಾಸದಲ್ಲಿ ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಕಾವ್ಯಾ ಮಾಧವನ್ ಅನ್ನು, ನಟಿಯ ಮೇಲೆ ದೌರ್ಜನ್ಯ ಹಾಗೂ ವಿಚಾರಣಾ ಅಧಿಕಾರಿಯ ಕೊಲೆಗೆ ಯೋಜನೆ ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗಿದೆ.

  ಎರಡೂ ಪ್ರಕರಣದಲ್ಲಿ ತಮ್ಮ ಹಸ್ತಕ್ಷೇಪ ಇಲ್ಲವೆಂದು ಕಾವ್ಯಾ ಮಾಧವನ್ ಹೇಳಿದ್ದಾರೆ. ಆದರೆ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ಕಾವ್ಯಾರನ್ನು ಮತ್ತೊಮ್ಮೆ ವಿಚಾರಣೆ ಮಾಡಲು ಯೋಜಿಸಿದೆ. ನಟಿಯ ಮೇಲೆ ದೌರ್ಜನ್ಯ ಹಾಗೂ ವಿಚಾರಣಾ ಅಧಿಕಾರಿಯ ಹತ್ಯೆ ಯೋಜನೆ ಪ್ರಕರಣದಲ್ಲಿ ಕಾವ್ಯಾ ಪ್ರಮುಖ ಸಾಕ್ಷಿ ಎಂದು ಪೊಲೀಸರು ಗಟ್ಟಿಯಾಗಿ ನಂಬಿದ್ದಾರೆ.

  ದಿಲೀಪ್ ಸಹೋದರ ಸಂಬಂಧಿ, ಪ್ರಕರಣದ ಆರೋಪಿ ಸೂರಜ್‌ರ ಆಡಿಯೋ ಕ್ಲಿಪ್‌ ಒಂದು ಲೀಕ್ ಆಗಿದ್ದು ಅದರ ಪ್ರಕಾರ ಕಾವ್ಯಾ ಮಾಧವನ್ ಇಂದಲೇ ದಿಲೀಪ್ ನಟಿಯ ಮೇಲೆ ದೌರ್ಜನ್ಯ ಮಾಡಿಸಿದ್ದು. ಅಲ್ಲದೆ ಪಲ್ಸರ್ ಸುನಿಯ ಜೊತೆ ಬಂಧನಕ್ಕೆ ಒಳಗಾದ ಮತ್ತೊಬ್ಬ ವ್ಯಕ್ತಿ ಕಾವ್ಯಾ ಮಾಧವನ್ ಅವರ ಬುಟಿಕ್‌ನಲ್ಲಿಯೇ ಕೆಲಸಕ್ಕೆ ಇದ್ದ. ಪಲ್ಸರ್ ಸುನಿ ಸಹ ವಿಚಾರಣೆ ಸಂದರ್ಭದಲ್ಲಿ ಕಾವ್ಯಾ ಮಾಧವನ್ ಹೆಸರು ಹೇಳಿದ್ದಾನೆ.

  ಕಾವ್ಯಾ ಮಾಧವನ್ ವಿಚಾರಣೆ ಹಲವು ಬಾರಿ ಮುಂದಕ್ಕೆ ಹಾಕಲಾಗಿತ್ತು. ಕಾವ್ಯಾ ಚೆನ್ನೈನಲ್ಲಿ ಇದ್ದ ಕಾರಣ ವಿಚಾರಣೆ ಸಾಧ್ಯವಾಗಿರಲಿಲ್ಲ. ಅಲ್ಲದೆ, ಕಾವ್ಯಾ ಸಹ ಹಲವು ಬಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ವಿಚಾರಣೆ ತಪ್ಪಿಸಿಕೊಳ್ಳಲು ಯತ್ನಿಸಿದರು. ಅಲುವಾ ಪೊಲೀಸ್ ಠಾಣೆಗೆ ವಿಚಾರಣೆಗೆ ಬರಲು ಒಪ್ಪದ ಕಾವ್ಯಾ ಅಲುವಾದ ದಿಲೀಪ್‌ರ ನಿವಾಸದಲ್ಲಿಯೇ ಕುಟುಂಬ ಸದಸ್ಯರ ಮುಂದೆಯೇ ವಿಚಾರಣೆ ನಡೆಯಬೇಕು ಎಂದು ವಕೀಲರ ಮೂಲಕ ಅರ್ಜಿ ಸಲ್ಲಿಸಿದರು. ಅಂತೆಯೇ ಇದೀಗ ಅಲುವಾದ ನಿವಾಸದಲ್ಲಿಯೇ ಕಾವ್ಯಾರ ವಿಚಾರಣೆ ನಡೆದಿದೆ.

  ದೌರ್ಜನ್ಯಕ್ಕೆ ಒಳಗಾದ ನಟಿ ಹಾಗೂ ನಟ ದಿಲೀಪ್‌ರ ಮಾಜಿ ಪತ್ನಿ ಮಂಜು ವಾರಿಯರ್ ಒಳ್ಳೆಯ ಸ್ನೇಹಿತೆಯರಾಗಿದ್ದರು. ಆದರೆ ದಿಲೀಪ್‌ಗೆ ನಟಿ ಕಾವ್ಯಾ ಮಧವನ್ ಜೊತೆ ಸಂಬಂಧ ಇದ್ದು ಆ ವಿಷಯವನ್ನು ದೌರ್ಜನ್ಯಕ್ಕೆ ಒಳಗಾದ ನಟಿ, ಮಂಜು ವಾರಿಯರ್‌ಗೆ ಹೇಳಿದ್ದರು. ಇದರಿಂದ ದಿಲೀಪ್ ಹಾಗೂ ಕಾವ್ಯಾ ಮಾಧವನ್ ಅನ್ನು ಮಂಜು ವಾರಿಯರ್ ಪ್ರಶ್ನೆ ಮಾಡಿದ್ದರು. ತಮ್ಮ ಸಂಭಂಧವನ್ನು ಬಹಿರಂಗಗೊಳಿಸಿದ್ದಕ್ಕೆ ಸಿಟ್ಟಾಗಿದ್ದ ಕಾವ್ಯಾ ಹಾಗೂ ದಿಲೀಪ್ ನಟಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಆಕೆಯ ವಿರುದ್ಧ ದೌರ್ಜನ್ಯ ಎಸಗಿಸಿದ್ದರು.

  ದೌರ್ಜನ್ಯಕ್ಕೆ ಒಳಗಾದ ನಟಿಯು ದಕ್ಷಿಣ ಭಾರತದ ಪ್ರಮುಖ ನಟಿಯಾಗಿದ್ದು, ಕನ್ನಡದ ಹಲವು ಸಿನಿಮಾಗಳಲ್ಲಿ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್, ಶಿವರಾಜ್ ಕುಮಾರ್, ಸುದೀಪ್, ಗಣೇಶ್ ಇನ್ನಿತರೆ ಸ್ಟಾರ್‌ಗಳೊಟ್ಟಿಗೆ ಸಿನಿಮಾದಲ್ಲಿ ನಟಿಸಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ನಟಿಗೆ ದೇಶದಾದ್ಯಂತ ದೊಡ್ಡ ಮಟ್ಟದ ಬೆಂಬಲ ಸಹ ವ್ಯಕ್ತವಾಗಿದೆ.

  English summary
  Dileep's wife Kavya Madhavan interrogation in assault on actress case. Interrogation done in Dileep's Aluva residence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion