Just In
Don't Miss!
- Finance
Gold Silver Rate: ಪ್ರಮುಖ ನಗರಗಳಲ್ಲಿ ಜ.26ರ ಚಿನ್ನ, ಬೆಳ್ಳಿ ದರ
- News
ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ನಮ್ಮ ಸರ್ಕಾರ ಬದ್ಧ: ಡಿಸಿಎಂ ಅಶ್ವಥ್ ನಾರಾಯಣ
- Sports
ಸಯ್ಯದ್ ಮುಷ್ತಾಕ್ ಅಲಿ: ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ಹೀನಾಯ ಸೋಲು
- Automobiles
ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ ನ್ಯೂ ಜನರೇಷನ್ ಸ್ಕಾರ್ಪಿಯೋ
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಿತ್ರೀಕರಣ ವೇಳೆ ನಿರ್ದೇಶಕನಿಗೆ ಹೃದಯಾಘಾತ: ವೆಂಟಿಲೇಟರ್ ಬೆಂಬಲದಲ್ಲಿ ಚಿಕಿತ್ಸೆ
ಹೃದಯಾಘಾತ ಸಂಭವಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಲಯಾಳಂ ಚಿತ್ರ ನಿರ್ದೇಶಕ ನರಣಿಪುಳ ಶಾನವಾಸ್ ಇಂದು ಕೊನೆಯುಸಿರೆಳೆದರು ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದ್ರೆ, ನಟ-ನಿರ್ಮಾಪಕ ಬಾಬು, ನರಣಿಪುಳ ಶಾನವಾಸ್ ನಿಧನರಾಗಿಲ್ಲ, ಪ್ರಸ್ತುತ ವೆಂಟಿಲೇಟರ್ ಬೆಂಬಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಡಿಸೆಂಬರ್ 21 ರಂದು ಪಾಲಕ್ಕಾಡ್‌ನ ಅಟ್ಟಪಾಡಿಯಲ್ಲಿ 'ಗಾಂಧಿರಾಜನ್' ಸಿನಿಮಾದ ಚಿತ್ರೀಕರಣ ನಡೆಸುತ್ತಿದ್ದರು. ಈ ವೇಳೆ ನಿರ್ದೇಶಕ ನರಣಿಪುಳ ಶಾನವಾಸ್ ಅವರಿಗೆ ಹೃದಯಾಘಾತ ಆಗಿದೆ. ಕೂಡಲೇ ಅವರನ್ನು ಕೊಯಮತ್ತೂರಿನ ಕೆಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ, ಅವರ ಸ್ಥಿತಿ ಗಂಭೀರವಾಗಿ ಎಂದು ವೈದ್ಯರು ತಿಳಿಸಿದ್ದರು.
ಶಾಪಿಂಗ್ ಮಾಲ್ನಲ್ಲಿ ನಟಿಗೆ ಕಿರುಕುಳ: ಇಬ್ಬರನ್ನು ಬಂಧಿಸಿದ ಪೊಲೀಸರು
ವರದಿಗಳ ಪ್ರಕಾರ, ನರಣಿಪುಳ ಶಾನವಾಸ್ ಅವರಿಗೆ ಹೃದಯ ಆಘಾತ ಆದ ನಂತರ ದೇಹಕ್ಕೆ ರಕ್ತವನ್ನು ಪಂಪ್ ಮಾಡುವುದು ನಿಂತಿದೆ. ಈ ಕಾರಣದಿಂದ ಮೆದುಳಿನ ರಕ್ತಸ್ರಾವ ಸಂಭವಿಸಿದ್ದು, ಮೆದುಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
ಮೆದುಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ವೈದ್ಯರು ಘೋಷಿಸುತ್ತಿದ್ದಂತೆ ನರಣಿಪುಳ ಶಾನವಾಸ್ ಮೃತಪಟ್ಟಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟ-ನಿರ್ಮಾಪಕ ವಿಜಯ್ ಬಾಬು ''ಶಾನವಾಸ್ ಇನ್ನೂ ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ. ಅವರ ಹೃದಯ ಇನ್ನೂ ಬಡಿಯುತ್ತಿದೆ ....ಅವರಿಗೆ ಎಲ್ಲರೂ ಪ್ರಾರ್ಥನೆ ಸಲ್ಲಿಸಿ. ಏನಾದರೂ ಪವಾಡ ಆಗಬಹುದು ಎಂದು ನಿರೀಕ್ಷಿಸುತ್ತಿದ್ದೇವೆ. ದಯವಿಟ್ಟು ತಪ್ಪು ಮಾಹಿತಿಯನ್ನು ಪೋಸ್ಟ್ ಮಾಡಬೇಡಿ'' ಎಂದು ವಿನಂತಿಸಿದ್ದಾರೆ.
ಮರದಿಂದ ಬಿದ್ದು ನಟ ನಿವಿನ್ ಪೌಲಿ ಮೇಕಪ್ ಮ್ಯಾನ್ ನಿಧನ
ನಿರ್ದೇಶಕ ನರಣಿಪುಳ ಶಾನವಾಸ್ ಅವರು 2015 ರಲ್ಲಿ ಬಿಡುಗಡೆಯಾದ 'ಕರಿ' ಚಿತ್ರದ ಮೂಲಕ ಸಿನಿ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು. ಅಧಿತಿ ರಾವ್ ಹೈದರಿ, ಜಯಸೂರ್ಯ ಮತ್ತು ದೇವ್ ಮೋಹನ್ ನಟಿಸಿರುವ 'ಸುಫಿಯಮ್ ಸುಜತಾಯಂ' ಚಿತ್ರಕ್ಕೂ ಇವರೇ ನಿರ್ದೇಶಕರು. ಈ ಸಿನಿಮಾ ಈ ವರ್ಷ ಅಮೇಜಾನ್ ಪ್ರೈಮ್‌ನಲ್ಲಿ ತೆರೆಕಂಡಿತ್ತು.