ಕುರುಪ್ ಟೀಸರ್: ಕನ್ನಡದಲ್ಲಿ ದುಲ್ಕರ್ ಸಲ್ಮಾನ್ ನೋಡಿ ದಿಲ್ ಖುಷ್

ಭಾರತೀಯ ಚಿತ್ರರಂಗದ ಬಹುನಿರೀಕ್ಷೆಯ ಚಿತ್ರ ಎನಿಸಿಕೊಂಡಿರುವ 'ಕುರುಪ್' ಟೀಸರ್ ಇಂದು ಬಿಡುಗಡೆಯಾಗಿದೆ. ಐದು ಭಾಷೆಯಲ್ಲಿ ಟೀಸರ್ ರಿಲೀಸ್ ಆಗಿದ್ದು, ದುಲ್ಕರ್ ಸಲ್ಮಾನ್ ಲುಕ್‌ಗೆ ಚಿತ್ರಪ್ರೇಮಿಗಳು ಫಿದಾ ಆಗಿದ್ದಾರೆ.

ಶ್ರೀನಾಥ್ ರಾಜೇಂದ್ರನ್ ನಿರ್ದೇಶನದ ಕುರುಪ್ ಟೀಸರ್ ಕನ್ನಡದಲ್ಲೂ ಮೂಡಿಬಂದಿದೆ. ಮಲಯಾಳಂ, ಹಿಂದಿ, ತೆಲುಗು, ತಮಿಳು ಜೊತೆಗೆ ಕನ್ನಡದಲ್ಲೂ ಕುರುಪ್ ತೆರೆಕಾಣಲಿದೆ.

1.13 ನಿಮಿಷ ಕಾಲಾವಧಿಯ ಟೀಸರ್ ಬಹಳ ವಿಶೇಷವಾಗಿ ಮೂಡಿ ಬಂದಿದೆ. ರೆಟ್ರೋ ಲುಕ್‌ನಲ್ಲಿ ದುಲ್ಕರ್ ಇಷ್ಟ ಆಗ್ತಾರೆ. ''ಮೋಸ್ಟ್ ವಾಂಟೆಡ್ ಕ್ರಿಮಿನಲ್ ಸುಕುಮಾರ್ ಕುರುಪ್ ಬೇಕಾಗಿದ್ದಾರೆ'' ಎಂಬ ಪ್ರಕಟಣೆ ಚಿತ್ರದ ಕಥೆ ಏನು ಎಂಬುದರ ಸುಳಿವು ನೀಡುತ್ತದೆ.

Dulquer Salmaan Starrer Kurup Teaser Released In Kannada

ಸುಮಾರು 36 ವರ್ಷ ಪೊಲೀಸರ ಕೈಗೆ ಸಿಗದೆ ಅನೇಕ ಪ್ರಕರಣಗಳಲ್ಲಿ ಆರೋಪಿಯಾಗಿರುವ ಸುಕುಮಾರ್ ಕುರುಪ್ ಯಾರು, ಆತನ ಹಿನ್ನೆಲೆ ಏನು ಎಂಬುದೇ ಚಿತ್ರದ ರೋಚಕ ಕಥೆ.

ಶೀರ್ಷಿಕೆ ಪಾತ್ರದಲ್ಲಿ ದುಲ್ಕರ್ ಸಲ್ಮಾನ್ ನಟಿಸಿದ್ದಾರೆ. ಶೋಭಿತಾ ನಾಯಕಿಯಾಗಿ ಅಭಿನಯಿಸಿದ್ದಾರೆ. ತಾಂತ್ರಿಕವಾಗಿ ಕುರುಪ್ ಸಿನಿಮಾ ಹೆಚ್ಚು ಸದ್ದು ಮಾಡುತ್ತಿದೆ. ನಿಮಿಶ್ ರವಿ ಅವರ ಛಾಯಾಗ್ರಹಣ, ಸುಶಿನ್ ಶ್ಯಾಮ್ ಅವರ ಹಿನ್ನೆಲೆ ಸಂಗೀತದ ಝಲಕ್ ಟೀಸರ್‌ನಲ್ಲಿ ಪ್ರಮುಖ ಆಕರ್ಷಣೆ.

'ಸೆಕೆಂಡ್ ಶೋ' ಚಿತ್ರದ ಬಳಿಕ ನಿರ್ದೇಶಕ ಶ್ರೀನಾಥ್ ರಾಜೇಂದ್ರನ್ ಜೊತೆ ದುಲ್ಕರ್ ಕೆಲಸ ಮಾಡಿದ್ದಾರೆ. ಕೆ.ಎಸ್.ಅರವಿಂದ್, ಜಿಥಿನ್ ಕೆ ಜೋಸ್ ಮತ್ತು ಡೇನಿಯಲ್ ಸಯೂಜ್ ನಾಯರ್ ಈ ಚಿತ್ರದ ಚಿತ್ರಕಥೆ ಬರೆದಿದ್ದಾರೆ.

ಸನ್ನಿ ವೇಯ್ನ್, ಶೈನ್ ಟಾಮ್ ಚಾಕೊ, ಗೋಪಾಕುಮಾರ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ದುಲ್ಕರ್ ಸಲ್ಮಾನ್ ಅವರ ವೇಫೇರ್ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳ ಹಾಕಿದೆ.

More from Filmibeat

English summary
Malayalam Actor Dulquer Salmaan starrer Kurup Movie kannada teaser released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X