Just In
Don't Miss!
- Sports
ಕೊನೆಯಲ್ಲಿ ಗೌರವದೊಂದಿಗೆ ನಿರ್ಗಮಿಸಿದ ಒಡಿಶಾ
- Automobiles
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- News
ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ನಿಲ್ಲಿಸುವುದಿಲ್ಲ: ಭಾರತೀಯ ಸೇನೆ
- Lifestyle
ಮಾರ್ಚ್ ತಿಂಗಳಲ್ಲಿ ಹುಟ್ಟಿದವರು ಈ ವ್ಯಕ್ತಿತ್ವ ಹೊಂದಿರುತ್ತಾರೆ!!
- Finance
ಮತ್ತಷ್ಟು ಇಳಿಕೆಗೊಂಡ ಚಿನ್ನದ ಬೆಲೆ: ಫೆಬ್ರವರಿ 27ರ ಬೆಲೆ ಹೀಗಿದೆ
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೋಹನ್‌ಲಾಲ್ ಮಗಳಿಗೆ ದುಲ್ಕರ್ ಸಲ್ಮಾನ್ ಸುಂದರ ಸಂದೇಶ
ಮೋಹನ್‌ಲಾಲ್ ಮತ್ತು ಮಮ್ಮುಟಿ, ಮಲಯಾಳಂ ನ ಇಬ್ಬರು ಸೂಪರ್ ಸ್ಟಾರ್‌ಗಳು. ಇಬ್ಬರೂ ಉತ್ತಮ ಗೆಳೆಯರೂ ಸಹ ಹೌದು.
ಮೋಹನ್ ಲಾಲ್, ಮಮ್ಮುಟಿ ಮಾತ್ರವೇ ಅಲ್ಲದೆ, ಈ ಇಬ್ಬರು ಕುಟುಂಬಗಳೂ ಸಹ ಬಹು ಆಪ್ತ. ಮಮ್ಮುಟಿ ಮಗ ಖ್ಯಾತ ನಟ ದುಲ್ಕರ್ ಸಲ್ಮಾನ್ ಹಾಗೂ ಮೋಹನ್‌ಲಾಲ್ ಮಕ್ಕಳಾದ ಪ್ರಣವ್ ಮೋಹನ್‌ಲಾಲ್ ಹಾಗೂ ಪ್ರಣವ್ ಮೋಹನ್‌ಲಾಲ್ ನಡುವೆ ಉತ್ತಮ ಗೆಳೆತನವಿದೆ.
ಇದೀಗ ಮೋಹನ್‌ಲಾಲ್ ಮಗಳಾದ ವಿಸ್ಮಯಾ ಮೋಹನ್‌ಲಾಲ್ ಗೆ ಸ್ಟಾರ್ ನಟ, ಮಮ್ಮುಟಿ ಮಗ ದುಲ್ಕರ್ ಸಲ್ಮಾನ್ ಸಾಮಾಜಿಕ ಜಾಲತಾಣದಲ್ಲಿ ಸುಂದರ ಸಾಲುಗಳನ್ನು ಬರೆದಿದ್ದಾರೆ.
ವಿಸ್ಮಯಾ ಮೋಹನ್‌ಲಾಲ್ ಕವಯತ್ರಿ ಹಾಗು ಚಿತ್ರಕಾರ್ತಿ ಆಗಿದ್ದು ತನ್ನ ಮೊದಲ ಕವನ ಸಂಕಲನವನ್ನು ಹೊರತಂದಿದ್ದಾರೆ. ಅದರ ಒಂದು ಕಾಪಿಯನ್ನು ದುಲ್ಕರ್ ಸಲ್ಮಾನ್ ಗೆ ಕಳಿಸಿದ್ದಾರೆ. ಅದರ ಚಿತ್ರ ಹಂಚಿಕೊಂಡು ವಿಸ್ಮಯ ಜೊತೆಗಿನ ಹಳೆಯ ನೆನಪು ಹಂಚಿಕೊಂಡಿದ್ದಾರೆ ದುಲ್ಕರ್ ಸಲ್ಮಾನ್.
'ಮಾಯಾ (ವಿಸ್ಮಯಾ) ಎಂದರೆ ನನಗೆ ನೆನಪಾಗುವುದು ಆಕೆಯ ಮೊದಲ ವರ್ಷದ ಹುಟ್ಟುಹಬ್ಬ. ಚೆನ್ನೈನಲ್ಲಿ ಅವರ ಪೋಷಕರು ದೊಡ್ಡ ಪಾರ್ಟಿ ಕೊಟ್ಟಿದ್ದರು. ಬಂಗಾರದ ಬಣ್ಣದ ಉಡುಗೆ ತೊಟ್ಟು ಮಿಂಚಿದ್ದಳು ಮಾಯಾ. ಆದರೆ ಪಾರ್ಟಿ ಪ್ರಾರಂಭವಾಗುತ್ತಿದ್ದಂತೆ 'ಬರ್ತ್‌ಡೇ ಗರ್ಲ್' ಕಾಣೆಯಾಗಿಬಿಟ್ಟಳು. ನಾವೆಲ್ಲರೂ ಆಕೆಯೊಂದಿಗೆ ಆಟವಾಡುವ ಆಸೆಯಿಂದ ಅವರ ಅಮ್ಮನನ್ನು ಕೇಳಿದಾಗ, ಆಕೆ ಮಲಗಿದ್ದಾಳೆ ಎಂದು ಹೇಳಿದರು. ಈಗ ಆಕೆ ಬೆಳೆದು ದೊಡ್ಡವಳಾಗಿದ್ದಾಳೆ ಸ್ವರಚಿತ ಪುಸ್ತಕ ಬಿಡುಗಡೆ ಮಾಡಿದ್ದಾಳೆ. ಡೂಡಲ್‌ಗಳು, ಚಿತ್ರಗಳು ಇನ್ನೂ ಏನೇನೋ ಮಾಡುತ್ತಿದ್ದಾಳೆ. ಮಾಯಾ ಗೆ ಅಭಿನಂದನೆಗಳು, ನಿನ್ನ ಮೊದಲ ಪುಸ್ತಕದ ಪಾರ್ಟಿಯಲ್ಲಿ ಬೇಗ ನಿದ್ದೆ ಮಾಡಿಬಿಡಬೇಡ' ಎಂದು ಬರೆದಿದ್ದಾರೆ ದುಲ್ಕರ್ ಸಲ್ಮಾನ್.
ಇದಕ್ಕೆ ಪ್ರತಿಕ್ರಿಯಿಸಿರುವ ವಿಸ್ಮಯಾ, 'ಇದು ಬಹಳ ಮಧುರವಾದ ಸಂದೇಶ ಚಾಲು ಚೆಟ್ಟಾ (ದುಲ್ಕರ್ ಸಲ್ಮಾನ್) ನೀವು ಇನ್ನೂ ಆ ಹುಟ್ಟುಹಬ್ಬ ನೆನಪಿಟ್ಟುಕೊಂಡಿರುವುದು ಅದ್ಭುತ' ಎಂದಿದ್ದಾರೆ.
ದುಲ್ಕರ್ ಸಲ್ಮಾನ್ ಹಾಗೂ ಮೋಹನ್ ಲಾಲ್ ಮೊದಲ ಮಗ ಪ್ರಣವ್ ಮೋಹನ್‌ಲಾಲ್ ಬಹುತೇಕ ಒಂದೇ ವಯಸ್ಸಿನವರು, ಮತ್ತು ಇಬ್ಬರೂ ಒಳ್ಳೆಯ ಗೆಳೆಯರು ಹಾಗೂ ಪಾರ್ಟನರ್‌ಗಳು ಸಹ. ಪ್ರಣವ್ ಹಾಗೂ ದುಲ್ಕರ್ ಸಲ್ಮಾನ್ ಒಟ್ಟಿಗೆ ಸಿನಿಮಾದಲ್ಲಿ ನಟಿಸುವ ಸಾಧ್ಯತೆಯೂ ಇದೆ.