For Quick Alerts
  ALLOW NOTIFICATIONS  
  For Daily Alerts

  'ಅವತಾರ್' ಶೈಲಿಯ ಚಿತ್ರಕ್ಕೆ ಸ್ಟಾರ್ ನಟ ಸಜ್ಜು, ಕನ್ನಡದಲ್ಲೂ ರಿಲೀಸ್!

  |

  ಹಾಲಿವುಡ್ ಸೂಪರ್ ಹಿಟ್ ಚಿತ್ರ ಅವತಾರ್. 2009 ರಲ್ಲಿ ತೆರೆಕಂಡಿದ್ದ ಈ ಚಿತ್ರದ ಮೇಕಿಂಗ್ ಕಂಡು ಇಡೀ ಸಿನಿಮಾ ಜಗತ್ತು ವಾವ್ ಎಂದಿತ್ತು. ಇಂತಹ ಸಿನಿಮಾ ಭಾರತದಲ್ಲಿ ತಯಾರಾಗಬೇಕು ಎಂದು ಅನೇಕರು ಪ್ರಯತ್ನ ಪಟ್ಟಿದ್ದಾರೆ ಮತ್ತು ಪಡುತ್ತಿದ್ದಾರೆ. ಆದರೆ, ಇದುವರೆಗೂ ಸಾಧ್ಯವಾಗಲಿಲ್ಲ.

  Prem 6 pack ಫೋಟೋಶೂಟ್ , 'ಮಳೆ' ಚಿತ್ರಕ್ಕಾಗಿ | Filmibeat Kannada

  ಇದೀಗ, ಮಲಯಾಳಂನಲ್ಲಿ ಇಂತಹದೊಂದು ಅದ್ಧೂರಿ ಹಾಗೂ ವಿಶೇಷ ಸಿನಿಮಾ ಸಿದ್ಧವಾಗುತ್ತಿದೆ. ನಟ ಪೃಥ್ವಿರಾಜ್ ಸುಕುಮಾರನ್ ಈ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಕನ್ನಡ ಅಭಿಮಾನಿಗಳಿಗೆ ಸರ್ಪ್ರೈಸ್ ಅಂದ್ರೆ ಕನ್ನಡದಲ್ಲೂ ಈ ಚಿತ್ರ ತೆರೆಗೆ ಬರಲಿದೆ. ಅಷ್ಟಕ್ಕೂ, ಯಾವುದು ಆ ಚಿತ್ರ? ಮುಂದೆ ಓದಿ...

  ಫಸ್ಟ್ ಲುಕ್ ಬಿಡುಗಡೆ

  ಫಸ್ಟ್ ಲುಕ್ ಬಿಡುಗಡೆ

  ಪೃಥ್ವಿರಾಜ್ ಸುಕುಮಾರನ್ ನಾಯಕನಾಗಿ ನಟಿಸಲಿರುವ ಹೊಸ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಭಾರತದಲ್ಲಿ ಮೊದಲ ಬಾರಿಗೆ ಚಿತ್ರವೊಂದರಲ್ಲಿ ವರ್ಚುಯಲ್ ತಂತ್ರಾಜ್ಞಾನ ಬಳಕೆ ಮಾಡಲಾಗುತ್ತಿದೆ ಎಂಬುದು ವಿಶೇಷ. ಇನ್ನು ಹೆಸರಿಡದ ಈ ಚಿತ್ರದ ಮೊದಲ ನೋಟದಿಂದಲೇ ಭಾರಿ ಸದ್ದು ಮಾಡುತ್ತಿದೆ.

  ದುಲ್ಕರ್ ಸಲ್ಮಾನ್‌ಗೆ ಸಂಕಷ್ಟ: ಲೀಗಲ್ ನೋಟಿಸ್ ಕಳುಹಿಸಿದ ಅಮ್ಮ, ಮಗ

  ಐದು ಭಾಷೆಗಳಲ್ಲಿ ಬಿಡುಗಡೆ

  ಐದು ಭಾಷೆಗಳಲ್ಲಿ ಬಿಡುಗಡೆ

  ಅವತಾರ್, ದಿ ಲಯನ್ ಕಿಂಗ್ ಅಂತಹ ಚಿತ್ರಗಳಿಗೆ ಸಮನಾಗಿ ಈ ಚಿತ್ರವನ್ನು ಸಿದ್ದಪಡಿಸಲು ಚಿತ್ರತಂಡ ಯೋಜಿಸಿದೆ. ದೊಡ್ಡ ಬಜೆಟ್‌ನಲ್ಲಿ ತಯಾರಾಗಲಿರುವ ಈ ಚಿತ್ರ ಮಲಯಾಳಂ, ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ತೆರೆಕಾಣಲಿದೆ ಎಂದು ಸ್ವತಃ ಚಿತ್ರತಂಡ ಘೋಷಿಸಿದೆ.

  ಹೊಸ ಸವಾಲು, ಹೊಸ ಅನ್ವೇಷಣೆ

  ಹೊಸ ಸವಾಲು, ಹೊಸ ಅನ್ವೇಷಣೆ

  ಹೊಸ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿರುವ ನಟ ''ಸಿನಿಮಾದ ಕಲೆ ಮತ್ತು ವಿಜ್ಞಾನದಲ್ಲಿ ಇದು ಹೊಸ ಅಧ್ಯಯನ. ಬದಲಾಗುತ್ತಿರುವ ಸಮಯಗಳು, ಹೊಸ ಸವಾಲುಗಳು, ಹೊಸ ಅನ್ವೇಷಣೆ. ಹಾಗಾಗಿ, ಇದನ್ನು ಎದುರು ನೋಡುತ್ತಿದ್ದೇನೆ. ನಿಮಗೊಂದು ಎಪಿಕ್ ಕಥೆ ಹೇಳಲಿದ್ದೇವೆ, ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿರಿ'' ಎಂದು ನಟ ಪೃಥ್ವಿರಾಜ್ ಟ್ವೀಟ್ ಮಾಡಿದ್ದಾರೆ.

  ಗೋಕಲ್ ಭಾಸ್ಕರ್ ನಿರ್ದೇಶನ

  ಗೋಕಲ್ ಭಾಸ್ಕರ್ ನಿರ್ದೇಶನ

  ಗೋಕಲ್ ರಾಜ್ ಭಾಸ್ಕರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಪೃಥ್ವಿರಾಜ್ ಪ್ರೊಡಕ್ಷನ್ ಮತ್ತು ಮ್ಯಾಜಿಲ್ ಫ್ರೇಮ್ಸ್ ಅಡಿಯ ಸಿನಿಮಾ ತಯಾರಾಗಲಿದೆ. ನಿರ್ದೇಶಕ ಗೋಕಲ್ ಭಾಸ್ಕರ್ ಅವರೇ ಚಿತ್ರಕಥೆ ಹಾಗೂ ವಿನ್ಯಾಸ ಮಾಡಲಿದ್ದಾರೆ. ಇದಕ್ಕೂ ಮುಂಚೆ 'ಅಯ್ಯಪ್ಪನುಂ ಕೋಶಿಯಂ', 'ಡ್ರೈವಿಂಗ್ ಲೈಸೆನ್ಸ್' ಚಿತ್ರಗಳಲ್ಲಿ ನಟಿಸಿದ್ದ ಪೃಥ್ವಿರಾಜ್ ಅಭಿಮಾನಿಗಳನ್ನು ರಂಜಿಸಿದ್ದರು.

  English summary
  Malayalam actor Prithviraj Sukumaran new film will be made in Kannada as well. It will be India's first film to be entirely shot in 'virtual production'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X