ಕನ್ನಡ, ತೆಲುಗು, ತಮಿಳಿನ ನಂತರ ಮಲೆಯಾಳಂನಲ್ಲಿ 'ಕುರುಕ್ಷೇತ್ರ' ಬಿಡುಗಡೆ

Recommended Video

Kurukshethra : ಕುರುಕ್ಷೇತ್ರ ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್ ಆಗಲಿದೆ....! |FILMIBEAT KANNADA

'ಕುರುಕ್ಷೇತ್ರ' ಸಿನಿಮಾ ಈ ವರ್ಷದ ದೊಡ್ಡ ಹಿಟ್ ಸಿನಿಮಾ ಆಗುತ್ತಿದೆ. ಸಿನಿಮಾದ ಸಿಕ್ಕ ಪ್ರತಿಕ್ರಿಯೆ ಹಾಗೆಯೇ ಮುಂದುವರೆಯುತ್ತಿದೆ. ಬಹಳ ವರ್ಷಗಳ ಬಳಿಕ ಬಂದ ಪೌರಾಣಿಕ ಸಿನಿಮಾವನ್ನು ಜನ ಪ್ರೀತಿಯಿಂದ ಸ್ವಾಗತ ಮಾಡಿದ್ದಾರೆ.

ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ 'ಕುರುಕ್ಷೇತ್ರ' ಏಕಕಾಲಕ್ಕೆ ಆಗಸ್ಟ್ 9 ರಂದು ಬಿಡುಗಡೆಯಾಗಿತ್ತು. ಅದರ ಬಳಿಕ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನ ಪ್ರಯುಕ್ತ ತಮಿಳಿನಲ್ಲಿ ಸಿನಿಮಾ ರಿಲೀಸ್ ಆಯ್ತು. ಮೂರು ಭಾಷೆಗಳ ಬಳಿಕ ಮಲೆಯಾಳಂ ಭಾಷೆಯಲ್ಲಿಯೂ ಸಿನಿಮಾ ಬರುತ್ತಿದೆ.

ಇದೇ ಶುಕ್ರವಾರ ಆಗಸ್ಟ್ 23 ರಂದು ಮಲೆಯಾಳಂ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ವಿಶ್ವದ ಮೊದಲ ತ್ರೀಡಿ ಪೌರಾಣಿಕ ಸಿನಿಮಾವನ್ನು ಮಾಲಿವುಡ್ ಪ್ರೇಕ್ಷಕರು ನೋಡಬಹುದಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಎನ್ನುವ ಕನಸು ಹೊಂದಿದ್ದ ಮುನಿರತ್ನ ಒಂದೊಂದೆ ಭಾಷೆಯಲ್ಲಿ ಚಿತ್ರವನ್ನು ತರುತ್ತಿದ್ದಾರೆ.

Kurukshethra Malayalam Movie Will Be Releasing On August 23rd

'ಕೆಜಿಎಫ್' ಸಿನಿಮಾ ಮಲೆಯಾಳಂನಲ್ಲಿ ಬಿಡುಗಡೆಯಾಗಿದ್ದು, ಅದರ ನಂತರ ಈ ಸಿನಿಮಾವೂ ಮಾಲಿವುಡ್ ಪ್ರವೇಶ ಮಾಡಿದೆ. ಈಗಾಗಲೇ ಬಿಡುಗಡೆಯಾಗಿರುವ ಮಲೆಯಾಳಂ ಟ್ರೇಲರ್ 1 ಲಕ್ಷದ 51 ಸಾವಿರಕ್ಕೂ ಹೆಚ್ಚು ಹಿಟ್‌ ಪಡೆದುಕೊಂಡಿದೆ.

ಕನ್ನಡದಲ್ಲಿ ದೊಡ್ಡ ಮಟ್ಟದ ರೆಸ್ಪಾನ್ಸ್ ಗಿಟ್ಟಿಸಿದ 'ಕುರುಕ್ಷೇತ್ರ'ಗೆ ತೆಲುಗಿನಲ್ಲಿಯೂ ಒಳ್ಳೆಯ ಮಾತುಗಳು ಕೇಳಿ ಬಂತು. ಆದರೆ, ತಮಿಳಿನಲ್ಲಿ ಆ ಮಟ್ಟಿನ ಕ್ರೇಜ್ ಹುಟ್ಟುಹಾಕಿಲ್ಲ. ಹೀಗಾಗಿ ಮಲೆಯಾಳಂ ಜನರು ಸಿನಿಮಾವನ್ನು ಹೇಗೆ ಸ್ವಾಗತ ಮಾಡುತ್ತಾರೆ ಎನ್ನುವ ನಿರೀಕ್ಷೆ ಇದೆ.

'ಕುರುಕ್ಷೇತ್ರ' ನಾಗಣ್ಣ ನಿರ್ದೇಶನದ ಸಿನಿಮಾವಾಗಿದ್ದು, ದರ್ಶನ್ ನಟನೆಯ 50ನೇ ಚಿತ್ರವಾಗಿದೆ.

More from Filmibeat

English summary
Challenging star Darshan's 'Kurukshethra' malayalam movie will be releasing on August 23rd.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X