For Quick Alerts
  ALLOW NOTIFICATIONS  
  For Daily Alerts

  ಶಂಕರ್-ರಾಮ್ ಚರಣ್ ಪ್ರಾಜೆಕ್ಟ್ ಎಂಟ್ರಿಯಾದ ಮಲಯಾಳಂ ಸ್ಟಾರ್

  |

  ಎಸ್‌ಎಸ್‌ ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಆರ್‌ಆರ್‌ಆರ್ ಸಿನಿಮಾ ಚಿತ್ರೀಕರಣ ಇತ್ತೀಚಿಗಷ್ಟೆ ಮುಕ್ತಾಯವಾಗಿದೆ. ಸದ್ಯದ ಮಾಹಿತಿ ಪ್ರಕಾರ ನಟ ರಾಮ್ ಚರಣ್ ತೇಜ ಅವರ ಭಾಗದ ಸಂಪೂರ್ಣ ಶೂಟಿಂಗ್ ಮುಗಿದಿದೆ. ಯಶಸ್ವಿಯಾಗಿ ಆರ್‌ಆರ್‌ಆರ್ ಪೂರ್ಣಗೊಳಿಸಿದ ಮೆಗಾಪುತ್ರ ಈಗ ಸ್ಟಾರ್ ನಿರ್ದೇಶಕ ಶಂಕರ್ ಜೊತೆಗಿನ ಪ್ರಾಜೆಕ್ಟ್ ಆರಂಭಿಸುವ ಹಂತದಲ್ಲಿದ್ದಾರೆ.

  ಸೆಪ್ಟೆಂಬರ್ 8 ರಂದು ರಾಮ್ ಚರಣ್-ಶಂಕರ್ ಜೋಡಿಯ ಚಿತ್ರ ಅಧಿಕೃತವಾಗಿ ಸೆಟ್ಟೇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೈದರಾಬಾದ್‌ನಲ್ಲಿ ಚಿತ್ರದ ಮುಹೂರ್ತ ಮಾಡುವುದರೊಂದಿಗೆ ಚಿತ್ರಕ್ಕೆ ಚಾಲನೆ ಕೊಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ 'RC15' ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡ್‌ನಲ್ಲಿದೆ. ಈ ಪ್ರಾಜೆಕ್ಟ್ ಅನೌನ್ಸ್ ಆದ ಸಂದರ್ಭದಿಂದಲೂ ತೀವ್ರ ಕುತೂಹಲ ಹೆಚ್ಚಿಸಿದೆ.

  ರಾಮ್ ಚರಣ್ ಮತ್ತು ಪ್ರಭಾಸ್ ಬಗ್ಗೆ ಹೀಗೊಂದು ಸುದ್ದಿ: ಅಭಿಮಾನಿಗಳು ಫುಲ್ ಖುಷ್ರಾಮ್ ಚರಣ್ ಮತ್ತು ಪ್ರಭಾಸ್ ಬಗ್ಗೆ ಹೀಗೊಂದು ಸುದ್ದಿ: ಅಭಿಮಾನಿಗಳು ಫುಲ್ ಖುಷ್

  ರಾಮ್ ಚರಣ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಬೇರೆ ಯಾವೆಲ್ಲ ಸ್ಟಾರ್ ಕಲಾವಿದರು ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆ ಹೆಚ್ಚಿದೆ. ಇದೀಗ, ಮಲಯಾಳಂ ಸ್ಟಾರ್ ನಟರೊಬ್ಬರು ಶಂಕರ್ ಹೊಸ ಪ್ರಾಜೆಕ್ಟ್‌ಗೆ ಎಂಟ್ರಿಯಾಗಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಮುಂದೆ ಓದಿ...

  RC15 ಚಿತ್ರಕ್ಕೆ ಮಲಯಾಳಂ ನಟ ಎಂಟ್ರಿ

  RC15 ಚಿತ್ರಕ್ಕೆ ಮಲಯಾಳಂ ನಟ ಎಂಟ್ರಿ

  ಸದ್ಯದ ವರದಿಗಳ ಪ್ರಕಾರ ರಾಮ್ ಚರಣ್ ಹಾಗೂ ಶಂಕರ್ ಕಾಂಬಿನೇಷನ್‌ನಲ್ಲಿ ಬರಲಿರುವ ಚಿತ್ರದಲ್ಲಿ ಮಲಯಾಳಂ ಖ್ಯಾತ ಕಲಾವಿದ ಜಯರಾಂ ನಟಿಸಲಿದ್ದಾರೆ. ಈ ಸುದ್ದಿ ಅಧಿಕೃತವಾಗಿ ಪ್ರಕಟಣೆಯಾಗಿಲ್ಲ. ಆದರೆ ಇಂತಹದೊಂದು ಸುದ್ದಿ ಟಾಲಿವುಡ್ ಹಾಗೂ ಮಾಲಿವುಡ್ ಇಂಡಸ್ಟ್ರಿಯಲ್ಲಿ ಚರ್ಚೆಗೆ ಬಂದಿದೆ. ಒಂದು ವೇಳೆ ಈ ಚಿತ್ರದಲ್ಲಿ ಜಯರಾಂ ನಟಿಸುವುದು ಪಕ್ಕಾ ಆದರೆ ಇದು ಅವರ 5ನೇ ತೆಲುಗು ಸಿನಿಮಾ ಆಗಲಿದೆ.

  ರಾಮ್ ಚರಣ್- ಶಂಕರ್ ಪ್ಯಾನ್ ಇಂಡಿಯಾ ಚಿತ್ರಕ್ಕೆ ಸ್ಟಾರ್ ನಟಿ ಎಂಟ್ರಿರಾಮ್ ಚರಣ್- ಶಂಕರ್ ಪ್ಯಾನ್ ಇಂಡಿಯಾ ಚಿತ್ರಕ್ಕೆ ಸ್ಟಾರ್ ನಟಿ ಎಂಟ್ರಿ

  ಅಲ್ಲು ಅರ್ಜುನ್-ಪ್ರಿನ್ಸ್ ಜೊತೆ ನಟನೆ

  ಅಲ್ಲು ಅರ್ಜುನ್-ಪ್ರಿನ್ಸ್ ಜೊತೆ ನಟನೆ

  1980 ರಿಂದಲೂ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಜಯರಾಂ ನೂರಕ್ಕೂ ಹೆಚ್ಚು ಚಿತ್ರಗಗಳಲ್ಲಿ ನಟಿಸಿದ್ದಾರೆ. 80, 90 ಹಾಗೂ 2000ರ ಸಮಯದಲ್ಲಿ ಜಯರಾಂ ಸ್ಟಾರ್ ನಟ ಎನಿಸಿಕೊಂಡಿದ್ದರು. ಮಲಯಾಳಂ ಅಷ್ಟೇ ಅಲ್ಲದೇ ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ಜೊತೆ 'ಅಲಾ ವೈಕುಂಠಪುರಂಲೋ', ಮಹೇಶ್ ಬಾಬು ಜೊತೆ 'ಸರ್ಕಾರಿ ವಾರಿ ಪಾಟ', ಪ್ರಭಾಸ್ ಜೊತೆ 'ರಾಧೆಶ್ಯಾಮ್', ಮಣಿರತ್ನಂ ನಿರ್ಮಾಣ 'ಪೊನ್ನಿಯನ್ ಸೆಲ್ವನ್' ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ.

  ಕಿಯಾರಾ ಅಡ್ವಾಣಿ ನಾಯಕಿ

  ಕಿಯಾರಾ ಅಡ್ವಾಣಿ ನಾಯಕಿ

  ರಾಮ್ ಚರಣ್-ಶಂಕರ್ ಚಿತ್ರಕ್ಕೆ ದಿಲ್ ರಾಜು ಬಂಡವಾಳ ಹಾಕುತ್ತಿದ್ದು, ಇವರ ಸಂಸ್ಥೆಯಲ್ಲಿ ಮೂಡಿ ಬರುತ್ತಿರುವ 50ನೇ ಚಿತ್ರ ಇದಾಗಿದೆ. ಸ್ಟಾರ್ ಗಾಯಕ ಎಸ್ ತಮನ್ ಸಂಗೀತ ನಿರ್ದೇಶನ ಮಾಡ್ತಿದ್ದಾರೆ. ಇನ್ನು ರಾಮ್ ಚರಣ್‌ಗೆ ನಾಯಕಿಯಾಗಿ ಬಾಲಿವುಡ್ ಚೆಲುವೆ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಚಿತ್ರ ಆಗಿದ್ದು, ಮೆಗಾಪುತ್ರ ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ಆಚಾರ್ಯ ಚಿತ್ರ ನಿರ್ಮಾಣ

  ಆಚಾರ್ಯ ಚಿತ್ರ ನಿರ್ಮಾಣ

  ಆರ್‌ಆರ್‌ಆರ್ ಮುಗಿಯಿತು. RC15 ಶುರುವಾಗುತ್ತಿದೆ. ಈ ನಡುವೆ ಮೆಗಾಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಚಿತ್ರವನ್ನು ರಾಮ್ ಚರಣ್ ತೇಜ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಕೊರಟಲಾ ಶಿವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಬಿಡುಗಡೆಗೆ ಸಜ್ಜಾಗಿದೆ. ಸದ್ಯಕ್ಕೆ ಆಚಾರ್ಯ ಚಿತ್ರವೂ ರಿಲೀಸ್ ದಿನಾಂಕ ಘೋಷಣೆ ಮಾಡಿಲ್ಲ. ಆ ಕಡೆ ಜೂನಿಯರ್ ಎನ್‌ಟಿಆರ್ ಜೊತೆ ನಟಿಸಿರುವ ಆರ್‌ಆರ್ಆರ್ ಸಿನಿಮಾ ಅಕ್ಟೋಬರ್ 13ಕ್ಕೆ ತೆರೆಗೆ ಬರಲಿದೆ ಎಂದು ಈ ಹಿಂದೆ ಪ್ರಕಟಿಸಿತ್ತು. ಬದಲಾದ ಕೋವಿಡ್ ಪರಿಸ್ಥಿತಿಯಲ್ಲಿ ಬಿಡುಗಡೆ ದಿನಾಂಕವೂ ಬದಲಾಗುತ್ತದಾ ಕಾದು ನೋಡಬೇಕಿದೆ.

  English summary
  Malayalam Actor Jayaram joining for the first time with mass director shankar and actor Ram charan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X