For Quick Alerts
  ALLOW NOTIFICATIONS  
  For Daily Alerts

  ಮಲೆಯಾಳಿ ನಟನ ಹಿಂದೆ ಬಿದ್ದ ನಮ್ಮ ಮೇಘನಾ

  By Mahesh
  |

  ಕನ್ನಡ ಚಿತ್ರರಂಗಕ್ಕೆ ಪುಂಡ ಚಿತ್ರದ ಮೂಲಕ ಕಾಲಿಟ್ಟ ಮೇಘನಾ ರಾಜ್ ಈಗ ಬೆಳಗುತ್ತಿರುವುದು ಮಾಲಿವುಡ್, ಕಾಲಿವುಡ್ ಹಾಗೂ ಟಾಲಿವುಡ್ ಗಳಲ್ಲಿ, ನಮ್ಮ ಸುಂದರ್ ರಾಜ್, ಪ್ರಮೀಳಾ ಜೋಷಾಯ್ ಅವರ ಪುತ್ರಿ ಮೇಘನಾ ಈಗ ಬೇಡದ ವಿಷಯಕ್ಕೆ ಸುದ್ದಿಯಾಗಿದ್ದಾಳೆ.

  ಈ ಹಿಂದೆ ಹಲವು ನಟರ ಜೊತೆ ಮೇಘನಾ ಡೇಟಿಂಗ್ ಬಗ್ಗೆ ಗಾಸಿಪ್ ಹರಡಿತ್ತು ಇದಕ್ಕೆ ಉತ್ತರ ನೀಡಿದ್ದ ಮೇಘನಾ ಯಾರನ್ನು ನಾನು ಪ್ರೀತಿಸಿಲ್ಲ ಎಂದಿದ್ದಳು. ನಾನು ಮದುವೆಯಾಗಲು ಇನ್ನೂ ಐದು ವರ್ಷ ಬಾಕಿ ಇದೆ. ಸದ್ಯಕ್ಕಂತೂ ಯಾರನ್ನು ನಾನು ಮೆಚ್ಚಿಲ್ಲ, ಮದುವೆ ಬಗ್ಗೆ ಯೋಚಿಸಿಲ್ಲ ಎಂದಿದ್ದಳು. ಆದರೆ, ಮದುವೆಯದರೆ ಅದು ಚಿತ್ರರಂಗದ ಒಬ್ಬ ಯೋಗ್ಯ ನಟನನ್ನೇ ಆಗುತ್ತೇನೆ ಎಂದು ಅಚ್ಚರಿ ಮೂಡಿಸಿದ್ದಳು.

  ಚಿತ್ರರಂಗದಲ್ಲಿರುವ ವ್ಯಕ್ತಿಯನ್ನು ಮದುವೆಯಾದರೆ ನನ್ನ ವೃತ್ತ್ತಿಗೂ ಅನುಕೂಲ ಇಬ್ಬರಿಗೂ ಫೀಲ್ಡ್ ಏನು ಎಂದು ತಿಳಿದಿರುತ್ತದೆ. ಚಿತ್ರರಂಗದಲ್ಲಿ ನಮ್ಮ ಏಳು ಬೀಳು ಹಾಗೂ ಸುಖ ದುಃಖ ಹಂಚಿಕೊಳ್ಳಲು ಸುಲಭವಾಗುತ್ತದೆ ಎಂದು ಮೇಘನಾ ಹೇಳಿ ಕಣ್ಣು ಮಿಟುಕಿಸಿದ್ದಳು.ಈ ನಡುವೆ ಮಲೆಯಾಳಂ ಚಿತ್ರರಂಗದ ನಟ ಅನೂಪ್ ಮೆನನ್ ಜೊತೆ ಮೇಘನಾ ಅಗತ್ಯಕ್ಕಿಂತ ಹೆಚ್ಚು ಓಡಾಟ ನಡೆಸಿದ್ದಾಳೆ. ಇಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿಯನ್ನು ಕೇರಳ ಚಿತ್ರರಂಗದಲ್ಲಿ ಯಾರೋ ಹಬ್ಬಿಸಿದ್ದಾರೆ.

  ಆದರೆ, ಇದೆಲ್ಲ ನಿಜವಲ್ಲ, ಅನೂಪ್ ನಾನು ಒಳ್ಳೆ ಸ್ನೇಹಿತರು ಅಷ್ಟೇ ಎಂದು ಮೇಘನಾ ಮತ್ತೆ ಮತ್ತೆ ಹೇಳಿದ್ದಾಳೆ, ಅನೂಪ್ ಮಾತ್ರ ಏನು ಪ್ರತಿಕ್ರಿಯೆ ನೀಡಿಲ್ಲ. ಅಂದ ಹಾಗೆ, ಪೃಥ್ವಿರಾಜ್ ಅಭಿನಯದ ಮೆಮೊರೀಸ್ ಚಿತ್ರದಲ್ಲಿ ಮೇಘನಾಗೆ ನಾಯಕಿ ಪಟ್ಟ ಸಿಕ್ಕಿದೆ. ಆಗಸ್ಟ್ 9 ರಂದು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

  ವಿನಯನ್ ಅವರ ಥ್ರಿಲ್ಲರ್ ಸಿನಿಮಾ 'ಯಕ್ಷಿಯುಂ ನ್ಯಾನುಂ ' ಮೂಲಕ ಮಲೆಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ಮೇಘನಾ ಅಭಿನಯದ ಬಗ್ಗೆ ಒಳ್ಳೆ ಮಾತುಗಳು ಕೇಳಿ ಬಂದಿದೆ.'ಬ್ಯೂಟಿಫುಲ್' ಚಿತ್ರದಲ್ಲೂ ಮೇಘನಾ ಉತ್ತಮ ನಟನೆ ನೀಡಿದ್ದಳು, ಅನೂಪ್ ನಟಿಸಿದ್ದ ಆ ಚಿತ್ರದ ಮೂಲಕವೇ ಇಬ್ಬರಲ್ಲೂ ಆಪ್ತತೆ ಹೆಚ್ಚಾಯಿತು ಎಂಬ ಸುದ್ದಿ ಇದೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಟಿವಿ ಸಂದರ್ಶನವೊಂದರಲ್ಲಿ ಇಬ್ಬರ ಬಗ್ಗೆ ಕೇಳಿದ ಪ್ರಶ್ನೆಗೆ ಅನೂಪ್ ನಿರಾಕರಿಸಿರಲಿಲ್ಲ.

  ನಮ್ಮ ಮೇಘನಾ: ತೆಲುಗಿನ ಬೆಂಡು ಅಪ್ಪರಾವ್ ಆರ್.ಎಂ.ಪಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನಂತರ 2010ರಲ್ಲಿ ಮಲೆಯಾಳಂ ಚಿತ್ರರಂಗಕ್ಕೆ ಜಿಗಿತ. 15ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಒಟ್ಟಾರೆ,ಮಲೆಯಾಳಂ ಅಲ್ಲದೆ ಕನ್ನಡ, ತೆಲುಗು, ತಮಿಳು ಸೇರಿ 25ಕ್ಕೂ ಅಧಿಕ ಚಿತ್ರಗಳಲ್ಲಿ ಮೇಘನಾ ಕಾಣಿಸಿಕೊಂಡಿದ್ದಾಳೆ. 2013ರಲ್ಲಿ ಯಶ್ ಜೊತೆ ರಾಜಾ ಹುಲಿ ಹಾಗೂ ಶ್ರೀನಗರ ಕಿಟ್ಟಿ ಜೊತೆ ಬಹುಪರಾಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಂದ ಹಾಗೆ ಮೇಘನಾ ಬೆಂಗಳೂರಿನ ಕ್ರೈಸ್ಟ್ ವಿವಿಯ ಸೈಕಾಲಜಿ ಪದವೀಧರೆ.

  English summary
  Meghna Raj is in limelight for all wrong reasons, but the actress seems to unaffected. Meghna says that she has well-planned ideologies with respect to her future and wedding. It was rumoured that Meghna is dating Anoop Menon. In an interview to a prominent Malayalam channel, Anoop Menon was asked about his relationship with Meghna and he did not refuse it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X