Don't Miss!
- News
ನಾವು ಜಾಗರೂಕರಾಗಿದ್ದೇವೆ: ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಕುರಿತು ಉನ್ನತ ಬ್ಯಾಂಕ್ಗಳು ಹೇಳಿದ್ದೇನು?
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇನ್‌ಸ್ಟಾಗ್ರಾಂ ಖಾತೆ ಡಿಲೀಟ್ ಮಾಡಿದ ಕಣ್ಸನ್ನೆ ಸುಂದರಿ ಪ್ರಿಯಾ ವಾರಿಯರ್: ಕಾರಣ?
ನೂರಾರು ಸಿನಿಮಾಗಳು ಮಾಡಿದರೂ ಬರದ ಖ್ಯಾತಿ ಕೇವಲ ಒಂದು ಕಣ್ಸನ್ನೆಯಿಂದ ಗಳಿಸಿದವರು ಮಲೆಯಾಳಂ ನಟಿ ಪ್ರಿಯಾ ವಾರಿಯರ್.
Recommended Video
ಕೇವಲ ಒಂದೇ ಸೀನ್‌ನಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಪ್ರಿಯಾ ವಾರಿಯರ್, ಸಾಮಾಜಿಕ ಜಾಲತಾಣದಲ್ಲಿಯೂ ಸಹ ಲಕ್ಷಾಂತರ ಹಿಂಬಾಲಕರನ್ನು ಹೊಂದಿದ್ದರು.
ಬೆಂಬಲ
ನೀಡಿ
ಎಂದು
ಕನ್ನಡದಲ್ಲಿ
ಮನವಿ
ಮಾಡಿದ
ಕಣ್ಸನ್ನೆ
ಬೆಡಗಿ
ಪ್ರಿಯಾ
ವಾರಿಯರ್
ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಪ್ರಿಯಾ ವಾರಿಯರ್ ಅಚಾನಕ್ಕಾಗಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂ ನಲ್ಲಿ ಕೆಲವು ದಾಖಲೆಗಳನ್ನೇ ಬರೆದಿದ್ದ ಪ್ರಿಯಾ ಇದ್ದಕ್ಕಿಂತೆ ಈ ನಿರ್ಣಯ ತೆಗೆದುಕೊಂಡಿದ್ದು ಏಕೆ ಎಂಬುದು ಕುತೂಹಲ ಕೆರಳಿಸಿದೆ.

ಒಂದೇ ದಿನದಲ್ಲಿ ಅತಿ ಹೆಚ್ಚು ಹಿಂಬಾಲಕರ ಪಡೆದಾಕೆ
ಪ್ರಿಯಾ ಪ್ರಕಾಶ್ ವಾರಿಯರ್, ಒಂದೇ ದಿನದಲ್ಲಿ ಸುಮಾರು ಆರು ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಪಡೆದಿದ್ದರು. ಹೀಗೆ ಒಂದೇ ದಿನದಲ್ಲಿ ಇಷ್ಟೋಂದು ಫಾಲೋವರ್‌ಗಳನ್ನು ಪಡೆದ ಮೂರನೇ ವ್ಯಕ್ತಿ ಪ್ರಿಯಾ ಎಂಬ ದಾಖಲೆ ಇವರ ಹೆಸರಿಗಿತ್ತು.

ಇನ್‌ಸ್ಟಾಗ್ರಾಂ ನಲ್ಲಿ 72 ಲಕ್ಷ ಹಿಂಬಾಲಕರಿದ್ದರು
ಪ್ರಿಯಾ ವಾರಿಯರ್ ಇನ್‌ಸ್ಟಾಗ್ರಾಂ ಖಾತೆಯನ್ನು 72 ಲಕ್ಷ ಮಂದಿ ಫಾಲೋ ಮಾಡುತ್ತಿದ್ದರು. ಇದು ಕಡಿಮೆ ಸಂಖ್ಯೆಯೇನಲ್ಲ. ಹಾಗಿದ್ದರೂ ಸಹ ಕೆಲವೇ ದಿನಗಳ ಹಿಂದೆ ಪ್ರಿಯಾ ವಾರಿಯರ್ ತಮ್ಮ ಇನ್‌ಸ್ಟಾಗ್ರಾಂ ಖಾತೆ ಬಂದ್ ಮಾಡಿದ್ದಾರೆ.
ಕ್ರೈಂ
ಥ್ರಿಲ್ಲಿಂಗ್
ಚಿತ್ರಕ್ಕೆ
ಪ್ರಿಯಾ
ಪ್ರಕಾಶ್
ವಾರಿಯರ್
ನಾಯಕಿ!

ಅಧಿಕೃತ ಕಾರಣ ನೀಡಿಲ್ಲ ಪ್ರಿಯಾ
ಅಚಾನಕ್ಕಾಗಿ ತಮ್ಮ ಸಾಮಾಜಿಕ ಜಾಲತಾಣವನ್ನು ಪ್ರಿಯಾ ವಾರಿಯರ್ ಬಂದ್ ಮಾಡಿದ್ದು, ಇದಕ್ಕೆ ಅಧಿಕೃತ ಕಾರಣವನ್ನು ಅವರು ನೀಡಿಲ್ಲ. ಆದರೆ ಅವರು ಒತ್ತಡವನ್ನು ಕಡಿಮೆ ಮಾಡಿಕೊಳ್ಳಲೆಂದು ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.

ಒರು ಅಡಾರ್ ಲವ್ ಮೂಲಕ ಖ್ಯಾತಿ
'ಒರು ಅಡಾರ್ ಲವ್' ಸಿನಿಮಾ ಮೂಲಕ ಖ್ಯಾತಿಗಳಿಸಿದ ಪ್ರಿಯಾ ವಾರಿಯರ್, ಶ್ರೀದೇವಿ ಬಂಗ್ಲೋ, ತನಾಹ್, ವಿಶ್ಣು ಪ್ರಿಯಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ನಟ ನಿತಿನ್ ಜೊತೆ ಸಹ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ.