ಅಮ್ಮನ ಮನೆ (2019)(U)
ಅಮ್ಮನ ಮನೆ ಕಥೆ
`ಅಮ್ಮನ ಮನೆ' ಚಿತ್ರದ ಮೂಲಕ ರಾಘವೇಂದ್ರ ರಾಜಕುಮಾರ್ ಹದಿನಾಲ್ಕು ವರ್ಷಗಳ ನಂತರ ಮತ್ತೆ ಹಿರಿತೆರೆಗೆ ಬರುತ್ತಿದ್ದಾರೆ.ನಿಖಿಲ್ ಮಂಜೂ ನಿರ್ದೇಶನದ ಈ ಚಿತ್ರ ಶ್ರೀಲಲಿತೆ ಚಿತ್ರಾಲಯ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ.
ಚಿತ್ರಕಥೆ
ರಾಜೀವ (ರಾಘವೇಂದ್ರ ರಾಜಕುಮಾರ್) ಹುಟ್ಟುತ್ತಲೆ ಅಂಗವೈಫಲ್ಯಕ್ಕೆ ಒಳಗಾದವರು. ಮಾತಡುವುದು, ನಡೆಯುವುದು, ತಿನ್ನುವುದು ಎಲ್ಲಾ ವಿಷಯದಲ್ಲೂ ರಾಜೀವ ತುಂಬ ನಿಧಾನ. ಮಗ ಅಂಗವೈಫಲ್ಯ, ಕೆಲಸಕ್ಕೆ ಬಾರದವನು ಎಂದು ಅಪ್ಪ ಮನೆ ಬಿಟ್ಟು ಹೋಗುತ್ತಾರೆ. ಆ ನಂತರ ರಾಜೀವ ಅಮ್ಮನ ಆಸರೆಯಲ್ಲಿಯೇ ಬೆಳೆಯುತ್ತಾನೆ. ಕಷ್ಟದ ನಡುವೆಯೂ ತಾಯಿ ರಾಜೀವನನ್ನು ಶಿಕ್ಷಕನನ್ನಾಗಿ ಮಾಡುತ್ತಾಳೆ. ತನ್ನ ಕೈ ಕಾಲಿನ ಬಲಹೀನತೆಯ ಕಷ್ಟದ ನಡುವೆಯೂ ರಾಜೀವ ಶಿಕ್ಷಕ ವೃತ್ತಿ ಪ್ರಾರಂಭಿಸುತ್ತಾನೆ.
ಒಂದೊಂದು ಕಡೆ ಜೋಕರ್ ಆಗಿ ಕಾಣಿಸಿಕೊಳ್ಳುವ ರಾಜೀವ್ ಮತ್ತೊಮ್ಮೆ ಗಂಭೀರವಾಗುತ್ತಾನೆ.ಅನಾರೋಗ್ಯದ ತಾಯಿ ಮತ್ತು ಹೆಂಡತಿ,ಮಗಳನ್ನು ಸಂಭಾಳಿಸುತ್ತಾ ತನ್ನೆಲ್ಲ ನೋವುಗಳನ್ನು ಅದುಮಿಟ್ಟುಕೊಂಡು ಇನ್ನೊಬ್ಬರ ಖುಷಿಗಾಗಿ ಹೊರಗೆ ಜೋಕರ್ ತರ ನಟಿಸುವ ರಾಜೀವ್ ಪಾತ್ರ ಪ್ರೇಕ್ಷಕರ ಮನಮುಟ್ಟುತ್ತದೆ.
ಶ್ರೀಲಲಿತ ಚಿತ್ರದ ಕಥೆಯನ್ನು ಬರೆದಿದ್ದರೆ,ಬಿ.ಶಿವಾನಂದ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಪಿವಿಆರ್ ಸ್ವಾಮಿ ಸಂಭಾಷಣೆ ಮತ್ತು ಸಮೀರ್ ಕುಲಕರ್ಣಿ ಸಂಗೀತವಿರಲಿದೆ.ಅಗಸ್ಟ್ 15,2018 ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ನೇರವೇರಿತು.