ಭಾವ ತೀರ ಯಾನ ಸಿನಿಮಾವನ್ನು ಶಾಖಾಹಾರಿ ಸಿನಿಮಾ ಸಂಗೀತ ನಿರ್ದೇಶಕ ಮಯೂರ್ ಅಂಬೆಕಲ್ಲು ಹಾಗೂ ತೇಜಸ್ ಕಿರಣ್ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ತೇಜಸ್ ಕಿರಣ್ ನಾಯಕನಾಗಿ ನಟಿಸಿದ್ದು, ಆರೋಹಿ ನೈನಾ ಹಾಗೂ ಅನುಷಾ ಕೃಷ್ಣ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ವಿದ್ಯಾ ಮೂರ್ತಿ, ಚಂದನ ಅನಂತ ಕೃಷ್ಣ, ರಮೇಶ್ ಭಟ್, ಸಂದೀಪ್ ರಾಜ್‌ಗೋಪಾಲ್ ಮುಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಮಯೂರ್ ಅಂಬೆಕಲ್ಲು ಸಂಗೀತ, ಶಿವಶಂಕರ್ ನೂರಂಬಡ ಛಾಯಾಗ್ರಹಣ ಹಾಗೂ ಸುಪ್ರೀತ್ ಬಿ.ಕೆ ಸಂಕಲನವಿದೆ. ಶೈಲೇಶ್ ಅಂಬೆಕಲ್ಲು, ಲಕ್ಷ್ಣಣ್ ಬಿ.ಕೆ, ಮಯೂರ್ ಅಂಬೆಕಲ್ಲು ಹಾಗೂ ತೇಜಸ್ ಕಿರಣ್ ಈ ಸಿನಿಮಾವನ್ನು ಆರೋಹ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಬಿಡುಗಡೆ: ಭಾವ ತೀರ ಯಾನ ಸಿನಿಮಾ 2025ರ ಫೆಬ್ರವರಿ 21ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.