ಜಿಲ್ಕ (2020)
ಜಿಲ್ಕ ಕಥೆ
ಕವೀಶ್ ಶೆಟ್ಟಿ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶನ ಮಾಡಿರುವ ಚಿತ್ರ ಜಿಲ್ಕ. ಪ್ರಿಯಾ ಹೆಗ್ಡೆ ಮತ್ತು ಲಕ್ಷ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.ಕೃಷ್ಣಮೂರ್ತಿ ಕವತಾರ್, ಗೋಪಿಕಾ ದಿನೇಶ್, ಪ್ರತೀಕ್ ಶೆಟ್ಟಿ ಮತ್ತು ದಿನೇಶ್ ಶೆಟ್ಟಿ ಮುಂತಾದವರು ಪ್ರಮುಖ ತಾರಬಳಗದಲ್ಲಿದ್ದಾರೆ. ಕಿಶೋರ್ ಖುಬ್ಚಂದಾನಿ, ತೆಹಲ್ ಸಿಂಗ್ ಸೈನಿ ಮತ್ತು ಮನೀಶ್ ನಾಗದೇವ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಪ್ರಾಂಶು ಜಾ ಸಂಗೀತ ನೀಡಿದ್ದಾರೆ. ಮರಾಠಿಯಲ್ಲಿ ಜೀ ಸಿನಿಮಾಸ್ ಮತ್ತು ಹಿಂದಿಯಲ್ಲಿ ಎರೋಸ್ ಇಂಟರ್ ನ್ಯಾಷನಲ್ ಸಂಸ್ಥೆ ಚಿತ್ರವನ್ನ ಖರೀದಿಸಿದ್ದು, ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ಪ್ರೇಮಿಗಳ ದಿನಾಚರಣೆಯಂದು ಬಿಡುಗಡೆಯಾಗಲಿದೆ.
ಕಥೆ: ರಾಕಿ (ಕವೀಶ್ ಶೆಟ್ಟಿ) ಚಿಕ್ಕ ವಯಸ್ಸಿನಿಂದಲೂ ತರಲೆ ಮತ್ತು ತುಂಟ. ಸ್ಕೂಲ್ ನಲ್ಲಿ ಟೀಚರ್ ಗಳನ್ನು ಗೋಳಾಡಿಸಿ ಒದೆ ತಿಂದು, ಅಪ್ಪನಿಂದಲೂ ಒದೆ ತಿನ್ನುತ್ತಿದ್ದ. ನಂತರ ಕಾಲೇಜ್ ಗೆ ಎಂಟ್ರಿ ಕೊಡುವ ರಾಕಿ ಹುಡುಗಿ ವಿಚಾರದಲ್ಲಿ ತಪ್ಪು ಮಾಡಿದವನಿಗೆ ಹಿಗ್ಗಾಮುಗ್ಗಾ ಹೊಡೆದು ಕಾಲೇಜ್ ಹೀರೋ ಎನಿಸಿಕೊಳ್ಳುತ್ತಾನೆ. ಕಾಲೇಜ್ ಪ್ರೆಸಿಡೆಂಟ್ ಎದುರು ಹಾಕಿಕೊಂಡು, ತನಗೆ ಇಷ್ಟ ಆದವರನ್ನು ಪ್ರೆಸಿಡೆಂಟ್ ಮಾಡ್ತಾನೆ. ಈ ಸಮಯದಲ್ಲಿ ಹೀರೋಯಿನ್ ಎಂಟ್ರಿ, ಪರಿಚಯ, ಆಮೇಲೆ ಲವ್ ನಂತರ ರೋಮ್ಯಾನ್ಸ್.ಮುಂದೆ ಒಬ್ಬ ಯುವಕ ಮತ್ತು ಯುವತಿಗೆ ಟಿನೇಜ್ ಎಷ್ಟು ಮುಖ್ಯ, ಲವ್, ನಂಬಿಕೆ, ಸೆಕ್ಸ್, ಮದುವೆ ವಿಚಾರಗಳನ್ನು ಇಂದಿನ ಜನರೇಷನ್ ಹೇಗೆ ಸ್ವೀಕರಿಸಿದೆ ಮತ್ತು ಸಮಾಜ ಅದನ್ನು ಹೇಗೆ ಸ್ವೀಕರಿಸಬೇಕು ಎಂಬುದರ ಮೇಲೆ ಕಥೆ ಸಾಗುತ್ತದೆ.