ಕಾಂಗರೂ ಸಿನಿಮಾವನ್ನು
ಕಿಶೋರ್ ಮೇಗಳಮನೆ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ
ಆದಿತ್ಯ ನಾಯಕನಾಗಿ ಹಾಗೂ ಕನ್ನಡ ಸೀರಿಯಲ್ ಖ್ಯಾತಿಯ
ರಂಜನಿ ರಾಘವನ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ನಾಗೇಂದ್ರ ಅರಸ್, ಅಶ್ವಿನಿ ಹಾಸನ್, ಶುಭಲಕ್ಷ್ಮೀ ಹಾಸನ್ ಮುಂತಾದವರು ನಟಿಸಿದ್ದಾರೆ.
ಸಾಧುಕೋಕಿಲ ಸಂಗೀತ ನಿರ್ದೇಶನ ಹಾಗೂ ಉದಯಲೀಲಾ ಛಾಯಾಗ್ರಹಣ ಸಿನಿಮಾಗಿದೆ. ಕಾಂಗರೂ ಸಿನಿಮಾವನ್ನು ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚನ್ನಕೇಶವ ಬಿ.ಸಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲರ ಮಂಡ್ಯ ಹಾಗೂ ಕೆ.ಜಿ.ಆರ್ ಗೌಡ ನಿರ್ಮಾಣ ಮಾಡಿದ್ದಾರೆ.
ಬಿಡುಗಡೆ: ಕಾಂಗರೂ ಸಿನಿಮಾ ಮೇ ೩ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.