X
ಹೋಮ್ » ಸೆಲಬ್ರಿಟಿಗಳು » ರಂಜನಿ ರಾಘವನ್
ರಂಜನಿ ರಾಘವನ್

ರಂಜನಿ ರಾಘವನ್

Actress
ಜೀವನ ಚರಿತ್ರೆ :  ರಂಜನಿ ರಾಘವನ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಇವರು 1994ರ ಮಾರ್ಚ್  29ರಂದು ಬೆಂಗಳೂರಿನಲ್ಲಿ ಜನಿಸಿದರು. ಬೆಂಗಳೂರಿನ ಶೇ‍ಷಾದ್ರಿಪುರಂ ಕಾಲೇಜಿನಲ್ಲಿ ಎಂಬಿಎ ಮಾಡಿರುವ ರಂಜನಿ, ಒಬ್ಬ ಸೃಜನಶೀಲ ಬರಹಗಾರ್ತಿ ಕೂಡ ಹೌದು. ಕಿರುತೆರೆ ರಂಜನಿ ರಾಘವನ್ 2014ರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟರು. ಇದಾದ ಬಳಿಕ ಪೌರ್ಣಮಿ ಎಂಬ ಮಲಯಾಳಂ ಸೀರಿಯಲ್‌ನಲ್ಲಿ ಅಭಿನಯಿಸಿದರು. 2019ರಲ್ಲಿ 'ಇಷ್ಟದೇವತೆ' ಎಂಬ ಧಾರಾವಾಹಿಯಲ್ಲಿ ನಟಿಸಿದರು. ಈ ಸೀರಿಯಲ್‌ಗೆ ತಾವೇ ಕಥೆ ಬರೆದು ಕ್ರಿಯೇಟಿವ್ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದರು. 2020ರಲ್ಲಿ ಕನ್ನಡತಿ ಎಂಬ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸಿದರು. ಈ ಧಾರಾವಾಹಿ ಹಿಟ್ ಆಗುವುದರ ಜೊತೆಗೆ ರಂಜನಿ ಜನಪ್ರಿಯತೆ ಕೂಡ ಹೆಚ್ಚಿದೆ. ಶೀರ್ಷಿಕೆಗೆ ತಕ್ಕಂತೆ ಕನ್ನಡತಿ ಧಾರಾವಾಹಿಯಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಲಾಗಿತ್ತು. ಹೀಗಾಗಿ ಮಹಿಳೆಯರು, ಪುರುಷರ ಜೊತೆ ಕನ್ನಡಾಭಿಮಾನಿಗಳು ಕೂಡ ಈ ಧಾರಾವಾಹಿಯನ್ನು ಹೆಚ್ಚಾಗಿ ಇಷ್ಟಪಟ್ಟು ನೋಡುತ್ತಿದ್ದರು.    ಸಿನಿಮಾ ರಂಜನಿ 2017ರಲ್ಲಿ 'ರಾಜಹಂಸ' ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ನಂತರ ಪುಣ್ಯ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ನೈಟ್ ಕರ್ಫ್ಯೂ ಸೇರಿದಂತೆ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬರಹಗಾರ್ತಿ ನಟಿ ಮಾತ್ರವಲ್ಲದೇ ಉತ್ತಮ ಬರಹಗಾರ್ತಿಯಾಗಿರುವ ರಂಜನಿ, ಕಥೆ ಡಬ್ಬಿ ಎಂಬ ಪುಸ್ತಕ ಬರೆದಿದ್ದರು. ಇದು ಕ್ನಡ ಸಾಹಿತ್ಯ ಪ್ರೇಮಿಗಳ ಹಾಗೂ ಸಾಹಿತ್ಯಾಸಕ್ತರ ಗಮನ ಸೆಳೆದಿತ್ತು. 2022ರ ಡಿಸೆಂಬರ್ 7ರಂದು ಸ್ವೈಪ್ ಅಪ್ ಎಂಬ ಇನ್ನೊಂದು ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.   
ಮುಂದೆ ಓದಿ

ರಂಜನಿ ರಾಘವನ್ ಚಲಚಿತ್ರಗಳು

ರಂಜನಿ ರಾಘವನ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರಂಜನಿ ರಾಘವನ್

ಹೆಸರು ರಂಜನಿ ರಾಘವನ್
ಹುಟ್ಟಿದ ದಿನ 29 Mar 1994
ವಯಸ್ಸು 32
ಹುಟ್ಟಿದ ಸ್ಥಳ Banglore
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರಂಜನಿ ರಾಘವನ್ ಆಸ್ತಿ

ಆಸ್ತಿ

ರಂಜನಿ ರಾಘವನ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+