ಮೇಡ್ ಇನ್ ಬೆಂಗಳೂರು ಸಿನಿಮಾವನ್ನು ಪ್ರದೀಪ್ ಶಾಸ್ತ್ರೀ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಮಾಡಿದ್ದಾರೆ. ರಜನಿ ಥರ್ಸ್ಡೆ ಸ್ಟೋರೀಸ್ ಬ್ಯಾನರ್ ನಲ್ಲಿ ಬಾಲಕೃಷ್ಣ ಬಿ.ಎಸ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಮೂಲಕ ಮಧುಸೂಧನ್ ಗೋವಿಂದ್, ಪುನೀತ್ ಮಾಂಜ, ವಂಶಿಧರ್ ಹಾಗೂ ಹಿಮಾಂಶಿ ವರ್ಮಾ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಶ್ವಿನ್ ಪಿ ಕುಮಾರ್ ಸಂಗೀತ ನೀಡಿದ್ದು, ಭಜರಂಗ್ ಕೊನತಮ್ ಛಾಯಾಗ್ರಹಣ ಮಾಡಿದ್ದಾರೆ.
ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ಆರು ಹೂಡಿಕೆದಾರ ಪಾತ್ರದಲ್ಲಿ ನಟಿಸುತ್ತಿದ್ದು, ಹಿರಿಯ ನಟರಾದ ಸಾಯಿಕುಮಾರ್ ಮತ್ತು ಪ್ರಕಾಶ್ ಬೆಳವಾಡಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅನುರಾಗ್ ಪುತ್ತಿಗೆ, ಅರ್ಚನಾ ಕೊಟ್ಟಿಗೆ, ಸುಧಾ ಬೆಳವಾಡಿ ಮತ್ತು ಮಂಜುನಾಥ್ ಹೆಗಡೆ ಜೊತೆ ಹಲವರು ನಟಿಸುತ್ತಿದ್ದಾರೆ.
ಕಥೆ: ಕನಸುಗಳನ್ನು ಕಟ್ಟಿಕೊಂಡು ಬೆಂಗಳೂರಿಗೆ ಬರುವ ಯುವಕರ ಕಥೆಗಳನ್ನ ಈ ಸಿನಿಮಾ ಹೇಳಲು ಹೊರಟಿದೆ.