ಮತ್ತೆ ಮತ್ತೆ ಸಿನಿಮಾವನ್ನು ಅರುಣ್ ಹೊಸಕೊಪ್ಪ ನಿರ್ದೇಶನ ಮಾಡಿದ್ದಾರೆ. ಸಂಪೂರ್ಣ ಹಾಸ್ಯಭರಿತ ಈ ಸಿನಿಮಾದಲ್ಲಿ ಹಿರಿಯ ನಟ ಉಮೇಶ್, ಸಂಜನಾ ಗಲ್ರಾನಿ, ಡಿಂಗ್ರಿ ನಾಗರಾಜ್, ಹೊನ್ನವಳ್ಳಿ ಕೃಷ್ಣ, ಶ್ರೀನಿವಾಸ್ ಗೌಡ, ವೈಷ್ಣವಿ ಮೆನನ್, ಶಂಖನಾದ ಆಂಜನಪ್ಪ, ಪ್ರಕಾಶ್ ತುಮಿನಾಡ್, ಮುಖ್ಯಮಂತ್ರಿ ಚಂದ್ರು, ಕೋಟೆ ಪ್ರಭಾಕರ್, ತುಮಕೂರು ಮೋಹನ್ ಮುಂತಾದವರು ಅಭಿನಯಿಸಿದ್ದಾರೆ. ಇಮ್ತಿಯಾಜ್ ಸಂಗೀತ, ಅನ್ನು ಮಾಸ್ಟರ್ ಛಾಯಾಗ್ರಹಣ ಸಿನಿಮಾದಲ್ಲಿದೆ.
ಕಥೆ: ಪತ್ರಿಕೋದ್ಯಮ ವಿದ್ಯಾಭ್ಯಾಸ ಪೂರ್ಣಗೊಳಿಸಿ, ಸಿನಿಮಾ ಮಾಡಲು ಹೊರಟ ಐವರು ವಿದ್ಯಾರ್ಥಿಗಳ ಕಥೆಯನ್ನು ಈ ಚಿತ್ರದಲ್ಲಿ ಹೆಣೆಯಲಾಗಿದೆ. ಚಿತ್ರದ ಡ್ಯುಯೆಟ್ ಹಾಡೊಂದರಲ್ಲಿ ಸಂಜನಾ ಹಾಗೂ ಉಮೇಶ್ ಅವರು ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.