X
ಒಂದಲ್ಲಾ ಎರಡಲ್ಲಾ
Drama | 24 Aug 2018 | U |
Kannada

ಒಂದಲ್ಲಾ ಎರಡಲ್ಲಾ ಕಥೆ

ಪಿ.ವಿ.ರೋಹಿತ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು ಡಿ.ಸತ್ಯಪ್ರಕಾಶ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಸ್ಮಿತಾ ಉಮಾಪತಿ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಮತ್ತು ನೊಬಿನ್ ಪಾಲ್ ಸಂಗೀತ ನೀಡಿದ್ದಾರೆ.

ಕಥೆ- ಸಮೀರ ಸಿಕ್ಕಾಪಟ್ಟೆ ತುಂಟ. ಆತ ಮಾಡುವ ತರ್ಲೆಗಳು 'ಒಂದಲ್ಲಾ ಎರಡಲ್ಲಾ'. ಬೇಡ ಬೇಡ ಅಂದರೂ ಐಸ್ ಪೈಸ್ ಆಡುವ ಸಮೀರ, ಕುಟುಂಬಕ್ಕೆ ಕೊಡುವ ಕಿರಿಕಿರಿ 'ಒಂದಲ್ಲಾ ಎರಡಲ್ಲಾ'. ಭಾನು ಜೊತೆಗೆ ಕಣ್ಣಾಮುಚ್ಚಾಲೆ ಆಡಲು ಹೋಗಿ ಸಮೀರ ಸೃಷ್ಟಿಸುವ ಅವಾಂತರಗಳು 'ಒಂದಲ್ಲಾ ಎರಡಲ್ಲಾ'. ಮುಗ್ಧ ಸಮೀರನಿಂದ ಆಗುವ ಒಳ್ಳೆಯ ಕೆಲಸಗಳೂ 'ಒಂದಲ್ಲಾ ಎರಡಲ್ಲಾ'.

ಸಮೀರ (ರೋಹಿತ್ ಪಾಂಡವಪುರ) ಪುಟ್ಟ ಬಾಲಕ. ಆತನಿಗೆ ಭಾನು (ಹಸು) ಕಂಡ್ರೆ ಪ್ರಾಣ. ಸದಾ ಭಾನು ಜೊತೆಗೆ ಸಮೀರನ ಆಟ. ಒಂದಿನ ಭಾನು ಕಳೆದುಹೋಗ್ತಾಳೆ. ಭಾನು ನ ಹುಡುಕಿಕೊಂಡು ಮುಗ್ಧ ಸಮೀರ ಪೇಟೆಗೆ ಬರ್ತಾನೆ. ಅಲ್ಲಿ ಸಮೀರ ಎದುರಿಸುವ ಸನ್ನಿವೇಶಗಳೇ 'ಒಂದಲ್ಲಾ ಎರಡಲ್ಲಾ' ಚಿತ್ರದ ಹೂರಣ.ಭಾನು ಮೇಲೆ ಪ್ರಾಣವನ್ನೇ ಇಟ್ಟಿರುವ ಸಮೀರ, ತಂದೆ ಹಾಗೂ ಅಕ್ಕನಿಗೆ ಹೇಳದೆ, ಏಕಾಏಕಿ ಮನೆ ಬಿಟ್ಟು, ಭಾನು ನ ಹುಡುಕಲು ಮುಂದಾಗುತ್ತಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+