X
ಕನ್ನಡ » ಚಲಚಿತ್ರಗಳು » ಒಂದಲ್ಲಾ ಎರಡಲ್ಲಾ
ಒಂದಲ್ಲಾ ಎರಡಲ್ಲಾ

ಒಂದಲ್ಲಾ ಎರಡಲ್ಲಾ

Drama | 24 Aug 2018 | U |
Kannada

2.5 /5 Users

4.5 /5 Filmibeat

ಒಂದಲ್ಲಾ ಎರಡಲ್ಲಾ ಕಥೆ

ಪಿ.ವಿ.ರೋಹಿತ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು ಡಿ.ಸತ್ಯಪ್ರಕಾಶ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಸ್ಮಿತಾ ಉಮಾಪತಿ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಮತ್ತು ನೊಬಿನ್ ಪಾಲ್ ಸಂಗೀತ ನೀಡಿದ್ದಾರೆ. ಕಥೆ - ಸಮೀರ ಸಿಕ್ಕಾಪಟ್ಟೆ ತುಂಟ. ಆತ ಮಾಡುವ ತರ್ಲೆಗಳು 'ಒಂದಲ್ಲಾ ಎರಡಲ್ಲಾ'. ಬೇಡ ಬೇಡ ಅಂದರೂ ಐಸ್ ಪೈಸ್ ಆಡುವ ಸಮೀರ, ಕುಟುಂಬಕ್ಕೆ ಕೊಡುವ ಕಿರಿಕಿರಿ 'ಒಂದಲ್ಲಾ ಎರಡಲ್ಲಾ'. ಭಾನು ಜೊತೆಗೆ ಕಣ್ಣಾಮುಚ್ಚಾಲೆ ಆಡಲು ಹೋಗಿ ಸಮೀರ ಸೃಷ್ಟಿಸುವ ಅವಾಂತರಗಳು 'ಒಂದಲ್ಲಾ ಎರಡಲ್ಲಾ'. ಮುಗ್ಧ ಸಮೀರನಿಂದ ಆಗುವ ಒಳ್ಳೆಯ ಕೆಲಸಗಳೂ 'ಒಂದಲ್ಲಾ ಎರಡಲ್ಲಾ'. ಸಮೀರ (ರೋಹಿತ್ ಪಾಂಡವಪುರ) ಪುಟ್ಟ ಬಾಲಕ. ಆತನಿಗೆ ಭಾನು (ಹಸು) ಕಂಡ್ರೆ ಪ್ರಾಣ. ಸದಾ ಭಾನು ಜೊತೆಗೆ ಸಮೀರನ ಆಟ. ಒಂದಿನ ಭಾನು ಕಳೆದುಹೋಗ್ತಾಳೆ. ಭಾನು ನ ಹುಡುಕಿಕೊಂಡು ಮುಗ್ಧ ಸಮೀರ ಪೇಟೆಗೆ ಬರ್ತಾನೆ. ಅಲ್ಲಿ ಸಮೀರ ಎದುರಿಸುವ ಸನ್ನಿವೇಶಗಳೇ 'ಒಂದಲ್ಲಾ ಎರಡಲ್ಲಾ' ಚಿತ್ರದ ಹೂರಣ.ಭಾನು ಮೇಲೆ ಪ್ರಾಣವನ್ನೇ ಇಟ್ಟಿರುವ ಸಮೀರ, ತಂದೆ ಹಾಗೂ ಅಕ್ಕನಿಗೆ ಹೇಳದೆ, ಏಕಾಏಕಿ ಮನೆ ಬಿಟ್ಟು, ಭಾನು ನ ಹುಡುಕಲು ಮುಂದಾಗುತ್ತಾನೆ.
Read More

ಒಂದಲ್ಲಾ ಎರಡಲ್ಲಾ ಕಲಾವಿದರು ಮತ್ತು ಸಿಬ್ಬಂದಿ

ಒಂದಲ್ಲಾ ಎರಡಲ್ಲಾ ಕ್ರೂ ಮಾಹಿತಿ

ನಿರ್ದೇಶಕ ಡಿ.ಸತ್ಯ ಪ್ರಕಾಶ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಾಸುಕಿ ವೈಭವ್, ನೊಬಿನ್ ಪಾಲ್
ನಿರ್ಮಾಪಕ ಸ್ಮಿತಾ ಉಮಾಪತಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಒಂದಲ್ಲಾ ಎರಡಲ್ಲಾ ವಿಮರ್ಶಕರ ವಿಮರ್ಶೆ

kannada.filmibeat.com
ಸೈದ್ಧಾಂತಿಕ ನೆಲೆಗಟ್ಟಿನಲ್ಲಿ, ಜಾತಿ-ಧರ್ಮದ ಹೆಸರಿನಲ್ಲಿ ದಿನನಿತ್ಯ ಬಡಿದಾಡಿಕೊಳ್ಳುವವರು ತಪ್ಪದೇ ನೋಡಲೇಬೇಕಾದ ಸಿನಿಮಾ ಇದು. ಯಾಕಂದ್ರೆ, ಜಾತಿ-ಧರ್ಮಗಳಿಗೂ ಮೀರಿದ ಮಾನವೀಯತೆ, ಸಹಬಾಳ್ವೆಯ ಪಾಠವನ್ನ 'ಒಂದಲ್ಲಾ ಎರಡಲ್ಲಾ' ಚಿತ್ರ ಕಲಿಸುತ್ತದೆ. ಪ್ರಸ್ತುತ ಸಮಾಜಕ್ಕೆ ಇಂತಹ ಒಂದು ಸಿನಿಮಾ ಬೇಕಿತ್ತು. ಸ್ವಾರ್ಥ, ದುರಾಸೆಗಿಂತ ಪರರ ನೋವಿಗೆ ಸ್ಪಂದಿಸುವ ಗುಣ ಮನುಷ್ಯನಲ್ಲಿ ಅತ್ಯಗತ್ಯ ಎಂಬುದನ್ನ ಸಾಂಕೇತಿಕವಾಗಿ ನಿರ್ದೇಶಕ ಡಿ.ಸತ್ಯಪ್ರಕಾಶ್ ತೆರೆಮೇಲೆ ತಂದಿರುವ ರೀತಿಯೇ ಅದ್ಭುತ. 'ಒಂದಲ್ಲಾ ಎರಡಲ್ಲಾ' ಚಿತ್ರದಲ್ಲಿ ಮನರಂಜನೆ ಜೊತೆಗೆ ಭಾವುಕತೆ ಹಾಸು ಹೊಕ್ಕಾಗಿದೆ. ಪ್ರಾಣಿ ಪ್ರಿಯರ ಮನ ಗೆಲ್ಲುವ ಈ ಸಿನಿಮಾಗೆ ಕ್ಲಾಸ್ ಹಾಗೂ ಮಾಸ್ ಪ್ರೇಕ್ಷಕರನ್ನು ಸೆಳೆಯುವ ಶಕ್ತಿ ಇದೆ. ಇಡೀ ಕುಟುಂಬ ಕೂತು 'ಒಂದಲ್ಲಾ ಎರಡಲ್ಲಾ' ಎಷ್ಟು ಬಾರಿ ಬೇಕಾದರೂ ನೋಡಬಹುದಾದ ಚಿತ್ರ ಇದು.

ಒಂದಲ್ಲಾ ಎರಡಲ್ಲಾ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಒಂದಲ್ಲಾ ಎರಡಲ್ಲಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+