ಸಹನಾ ಹೆಚ್.ಎಸ್ ನಿರ್ದೇಶನದಲ್ಲಿ ಮೂಡಿ ಬಂದಿರುವ 'ತ್ರಿವಿಕ್ರಮ್' ಚಿತ್ರದದ ಮೂಲಕ ರವಿಚಂದ್ರನ್ ರವರ ಎರಡನೇ ಪುತ್ರ ತ್ರಿವಿಕ್ರಮ್ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ನಾಯಕಿಯರಾಗಿ ಅಕ್ಷರಾ ಗೌಡ ಮತ್ತು ಅಕಾಂಕ್ಷಾ ಶರ್ಮಾ ನಟಿಸುತ್ತಿದ್ದಾರೆ. ಅರ್ಜುನ ಜನ್ಯ ಸಂಗೀತ ನೀಡುತ್ತಿದ್ದರೆ, ಸಂತೋಷ್ ರೈ ಪತಜೇ ಛಾಯಾಗ್ರಹಣವಿರಲಿದೆ.
ಕಥೆ
ವಿಕ್ರಮ್ ಮಧ್ಯಮ ವರ್ಗದ ಹುಡುಗ ಮತ್ತು ತ್ರಿಶಾ ಅಹಿಂಸೆಯೇ ಪರಮಧರ್ಮ ಎಂದು ನಂಬಿರುವ ಸಿರಿವಂತ ಕುಟುಂಬದ ಹುಡುಗಿ. ಇವರಿಬ್ಬರ ಮಧ್ಯೆ ಪ್ರೀತಿ ಅರಳುತ್ತದೆ. ಇವರಿಬ್ಬರ ನಡುವೆ ಅರಳಿದ ಪ್ರೀತಿ ಉಳಿಯುತ್ತಾ ಎನ್ನುವುದು ಚಿತ್ರದ ಕಥೆ.
ರಿಲೀಸ್
ಈ ಚಿತ್ರ ಜೂನ್ 24, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.