»   »  ಫೀವರ್ 104 ಎಫ್ ಎಂನಲ್ಲಿ ಗಾಂಜಾವಾಲಾ ಜ್ವರ

ಫೀವರ್ 104 ಎಫ್ ಎಂನಲ್ಲಿ ಗಾಂಜಾವಾಲಾ ಜ್ವರ

Subscribe to Filmibeat Kannada
Kunal Ganjawala
ಪುನೀತ್ ರಾಜ್ ಕುಮಾರ್ ಅವರ 'ಆಕಾಶ್' ಚಿತ್ರದ 'ನೀನೆ ನೀನೆ ನನಗೆಲ್ಲಾ ನೀನೆ' ಹಾಡು ಯಾರಿಗೆ ತಾನೆ ಇಷ್ಟವಾಗಲ್ಲ! ಕೆ.ಕಲ್ಯಾಣ್ ಸಾಹಿತ್ಯ ಆರ್.ಪಿ.ಪಟ್ನಾಕಯ್ ಸಂಗೀತ ನಿರ್ದೇಶನದ ಈ ಗೀತೆಯನ್ನು ಬಾಲಿವುಡ್ ನ ಹೆಸರಾಂತ ಗಾಯಕ ಕುನಾಲ್ ಗಾಂಜಾವಾಲಾ ತಮ್ಮ ಸುಮಧು ರ ಕಂಠದಿಂದ ಹಾಡಿದ್ದರು. ಹಾಡಿನಲ್ಲಿನ ಲವಲವಿಕೆ ಕುನಾಲ್ ಅವರ ಉತ್ಸಾಹಪೂರ್ಣ ಧ್ವನಿ ಆಪ್ಯಾಯಮಾನವಾಗಿತ್ತು.

ಕುನಾಲ್ ಅವರನ್ನು ಕನ್ನಡಕ್ಕೆ ಪ್ರಾಧಾನ್ಯ ನೀಡುವ 'ಫೀವರ್ 104 ಎಫ್ ಎಂ' ರೇಡಿಯೋ ವಾಹಿನಿ ಕನ್ನಡ ಟಿವಿಸಿ ನಿಮಿತ್ತ ಬೆಂಗಳೂರಿಗೆ ಆಹ್ವಾನಿಸಿತ್ತು. ಆಯ್ದ ಶ್ರೋತೃಗಳ ಮುಂದೆ ಅವರು ಅನೇಕ ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು.ಒಂದೇ ಒಂದು ಸಾರಿ, ಖುಷಿಯಾಗಿದೆ, ಓ ಹಮ್ ದಮ್ ಸುನಿಯೋ ರೇ, ಭೀಗೇ ಹೋ ತೇರೇ...ಮುಂತಾದ ಹಾಡುಗಳು ಅವರ ಕಂಠಸಿರಿಯಿಂದ ಹೊರಹೊಮ್ಮಿದವು. ಗಾಂಜಾವಾಲಾ ಮೋಡಿಗೆ ಪ್ರೇಕ್ಷಕರ ಕರತಾಡನ ಮುಗಿಲು ಮುಟ್ಟಿತ್ತು.

'ಕನ್ನಡವನ್ನು ನಾನು ಪ್ರೀತಿಸುತ್ತೇನೆ. ಫಿವರ್ 104 ಎಫ್ ಎಂ ರೇಡಿಯೋ ಕನ್ನಡಕ್ಕೆ ನೀಡುತ್ತಿರುವ ಪ್ರಾಶಸ್ತ್ಯ ನಿಜಕ್ಕೂ ಅನುಕರಣೀಯ' ಎಂದು ಕನ್ನಡದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಹೆಚ್ಚಾಗಿ ಹಿಂದಿ ಮತ್ತು ಇಂಗ್ಲಿಷ್ ಗೀತೆಗಳನ್ನು ಪ್ರಸಾರ ಮಾಡುತ್ತಿದ್ದ ಫಿವರ್ 104 ಎಫ್ ಎಂ ರೇಡಿಯೋ ಈಗ ಕನ್ನಡ ವಾಹಿನಿಯಾಗಿ ಬದಲಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada