»   » ವಿಶಿಷ್ಟ ಕಂಠಸಿರಿಯ ಕರ್ನಾಟಕದ ಎಸ್ಪಿಬಿ ವಿಕಾಸ

ವಿಶಿಷ್ಟ ಕಂಠಸಿರಿಯ ಕರ್ನಾಟಕದ ಎಸ್ಪಿಬಿ ವಿಕಾಸ

Posted By: *ಎಸ್. ಎಸ್. ನಾಗನೂರಮಠ
Subscribe to Filmibeat Kannada
<ul id="pagination-digg"><li class="next"><a href="/music/09-vikas-m-hublikara-youthful-spb-voice-aid0052.html">Next »</a></li></ul>
Vikas with SPB
ಓದಿದ್ದು ಎಸ್ಸೆಸ್ಸೆಲ್ಸಿ, ಸಾಧನೆ ಕರ್ನಾಟಕವೇ ಹೆಮ್ಮೆ ಪಡುವಂಥಹದು. ಹೌದು, ಇದು ಬೆಂಗಳೂರಿನ ವಿಕಾಸ ಎಂ.ಹುಬ್ಳೀಕರ ತನ್ನ 38ನೇ ವಯಸ್ಸಿನ ಹೊತ್ತಿಗೆ ಮಾಡಿರುವ ಸಾಧನೆಯ ಕಿರು ಪರಿಚಯವೆನ್ನಬಹುದು. ಏಕೆಂದರೆ ವಿಕಾಸ, ಕರ್ನಾಟಕದಲ್ಲಿ ಜ್ಯೂನಿಯರ್ ಎಸ್.ಪಿ.ಬಾಲಸುಬ್ರಹ್ಮಣ್ಯಂ ಎಂದೇ ಹಲವರಿಗೆ ಪರಿಚಿತ.

ಮೂಲತಃ ಹುಬ್ಬಳ್ಳಿಯವರಾದ ವಿಕಾಸ, ವಿದ್ಯೆಯಲ್ಲಿ ಹಿಂದೆ ಬಿದ್ದರೂ ಯಾವಾಗಲೂ ಎಸ್ಪಿ ಅವರ ಹಾಡುಗಳನ್ನೇ ಗುನುಗುನಿಸುತ್ತಿದ್ದ, ಮನೆಯಲ್ಲಿ ಸ್ವಕುಳಸಾಳಿ ಭಾಷೆ ಮಾತನಾಡುತ್ತಿದ್ದರೂ, ಕನ್ನಡದ ಹಾಡುಗಳಿಗೆ ಮಾರು ಹೋಗಿದ್ದು ಎಸ್ಪಿಯವರ ಕಂಠ ಸಿರಿಯ ಮಾಧುರ್ಯದಿಂದ.

ಕ್ರಮೇಣ ತಂದೆ ತಾಯಿಯ ಪ್ರೋತ್ಸಾಹದಿಂದ ಚಲನಚಿತ್ರ ಗೀತೆ ಹಾಡುವ ತರಬೇತಿ ಪಡೆದ ವಿಕಾಸ, ಅಕ್ಷರಶಃ ಎಸ್ಪಿಯವರ ಕಂಠಸಿರಿಯನ್ನೇ ಹೋಲುವಂತೆ ಹಾಡುವುದನ್ನು ಕರಗತ ಮಾಡಿಕೊಂಡಿದ್ದು ಇವರಲ್ಲಿರುವ ಅಪಾರ ಪ್ರತಿಭೆಗೆ ಸಾಕ್ಷಿ. ನಂತರ ನಿರಂತರವಾಗಿ ಎಸ್ಪಿಯವರ ಸಂಪರ್ಕವಿಟ್ಟುಕೊಂಡಿರುವ ವಿಕಾಸ, ಇಂದಿಗೂ ಅವರೊಂದಿಗೆ ನೇರವಾಗಿ ದೂರವಾಣಿಯಲ್ಲಿ ಮಾತನಾಡುವಷ್ಟು ಸಲುಗೆ ಬೆಳೆಸಿಕೊಂಡಿದ್ದು ಎಸ್ಪಿಯ ವಿಶಿಷ್ಟ ಅಭಿಮಾನಿ ಆಗಿರುವುದರಿಂದ.

ಕರ್ನಾಟಕದಲ್ಲಿ ಎಸ್ಪಿ ಅಭಿಮಾನಿ ಬಳಗದ ಉತ್ಸಾಹಿ ಕಾರ್ಯಕರ್ತರಾಗಿದ್ದಾರೆ. ಎಸ್ಪಿ ಕಂಠಸಿರಿಯಲ್ಲಿ ಮೂಡಿಬಂದ ಕನ್ನಡ, ತೆಲಗು ಮತ್ತು ಹಿಂದಿ ಹಾಡುಗಳನ್ನು ಸುಶ್ರಾವ್ಯವಾಗಿ ವಿಕಾಸ ಹಾಡುತ್ತಿದ್ದರೆ ಎಸ್ಪಿಯವರಿಗೇ ಅಚ್ಚರಿಯಾಗಿತ್ತಂತೆ. ನಮ್ಮಲ್ಲಿ ಅನುಕರಣೆ ಮಾಡುವವರು ಅಪಾರ. ಆದರೆ ಅನುಕರಣೆ ಕೂಡ ಅಕ್ಷರಶಃ ಹೋಲುವಂತೆ ಮಾಡುವುದು ಕಷ್ಟ. ಆದರೆ ಸವಾಲೆಂಬಂತೆ ವಿಕಾಸ ಎಸ್ಪಿ ಯವರ ಕಂಠಸಿರಿಯನ್ನು ಅನುಕರಣೆ ಮಾಡುತ್ತಾರೆ.

ಇನ್ನು ತನ್ನ ಕೈಮೇಲೆ ಎಸ್.ಪಿ.ಬಾಲು ಎಂದು ಹಚ್ಚೆ ಹಾಕಿಸಿಕೊಂಡಿರುವ ವಿಕಾಸ, ತನ್ನ ಜೀವನವನ್ನೇ ಎಸ್ಪಿಯವರಿಗಾಗಿ ಮೀಸಲಿಟ್ಟಿದ್ದೇನೆ ಎನ್ನುತ್ತಾರೆ. ಇವರ ಮನೆಯಲ್ಲಿ ಎಲ್ಲೆಡೆ ಎಸ್ಪಿಯವರ ದೊಡ್ಡ ದೊಡ್ಡ ಫೋಟೋಗಳನ್ನು ನೋಡಿದರೆ ಇವರ ಸಾಧನೆಗೆ ಪ್ರೇರಣೆಗಾಗಿಯೇ ಎನಿಸುವುದರಲ್ಲಿ ಸಂಶಯವಿಲ್ಲ.

<ul id="pagination-digg"><li class="next"><a href="/music/09-vikas-m-hublikara-youthful-spb-voice-aid0052.html">Next »</a></li></ul>
English summary
Meet Vikas M Hublikara is a Kannadiga, he is known as junior SP Balasubramaniam in kannada. He tries to imitate SPB. Vikas has a youthful SPB voice. But this artist needs helping hand.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada