For Quick Alerts
  ALLOW NOTIFICATIONS  
  For Daily Alerts

  ಆತೀಫ್ ಅಸ್ಲಾಂ ಗಾನ ಗೋಷ್ಠಿ ಗಲಭೆ 3 ಯುವತಿ ಸಾವು

  By Mahesh
  |

  ಪಾಕಿಸ್ತಾನದ ಪಾಪ್ ಗಾಯಕ ಆತೀಫ್ ಅಸ್ಲಾಂ ರಸಸಂಜೆಗೆ ಬಂದಿದ್ದ ಅಮಾಯಕ ಹುಡುಗಿಯರು ದುರಂತ ಸಾವನ್ನಪ್ಪಿರುವ ಘಟನೆ ಲಾಹೋರ್ ನ ಕಾಲೇಜೊಂದರಲ್ಲಿ ಜ.9ರಂದು ಸಂಭವಿಸಿದೆ.

  ಪಂಜಾಬ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ಜನಪ್ರಿಯ ಗಾಯಕ ಆತೀಫ್ ಗಾನಗೋಷ್ಠಿ ಏರ್ಪಡಿಸಲಾಗಿತ್ತು. 'ತೇರೆ ಬಿನ್.. ಜೀನಾ ನಹೀ,,' ಮಾಹಿ..ವೇ ಎಂದು ಹಾಡುತ್ತಾ ಹದಿಹರೆಯದವರಿಗೆ ಕಿಚ್ಚು ಹಬ್ಬಿಸಿದ ಆತೀಫ್ ಕಾರ್ಯಕ್ರಮ ಮುಗಿಸಿಕೊಂಡು ಹೊರಡುವ ವೇಳೆಗೆ ಅನಾಹುತ ಸಂಭವಿಸಿದೆ.

  ಕಾಲೇಜಿನ ವಿದ್ಯಾರ್ಥಿನಿಯರು ಆತೀಫ್ ಆಟೋಗ್ರಾಫ್ ಗಾಗಿ ಮುಗಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ವಿದ್ಯಾರ್ಥಿನಿಯರ ಗುಂಪಿನ ಮೇಲೆ ನಿಪ್ರಖರ ಬೆಳಕನ್ನು ಬಿಟ್ಟು ಚೆದುರಿಸಲು ಯತ್ನಿಸಿದ್ದಾರೆ.

  ಇದರಿಂದ ನೆರೆದಿದ್ದ ಗುಂಪಲ್ಲಿ ಗೊಂದಲವುಂಟಾಗಿ ಚೆಲ್ಲಾಪಿಲ್ಲಿಯಾಗಿ ಹೊರಗಡೆ ಹೋಗಲು ಓಡಿದ್ದಾರೆ. ಕಾಲೇಜು ಗೇಟು ಚಿಕ್ಕದಿದ್ದ ಪರಿಣಾಮ ಅನೇಕ ಜನರು ಹೊರಹೋಗಲು ಆಗದೆ ತೊಂದರೆ ಅನುಭವಿಸಿದ್ದಾರೆ. ಈ ಗಲಭೆಯಲ್ಲಿ ಅನೇಕ ವಿದ್ಯಾರ್ಥಿನಿಯರು ಕಾಲ್ತುಳಿತಕ್ಕೆ ಒಳಗಾಗಿದ್ದಾರೆ.

  ಪ್ರಜ್ಞೆ ತಪ್ಪಿ ಬಿದ್ದಿದ್ದ ಅನೇಕರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಯಿತಾದರೂ ಮೂವರು ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ ಎಂದು ಡಿಜಿಪಿ ಗುಲಾಂ ಮಹಮ್ಮದ್ ಡೋಗಾ ಹೇಳಿದ್ದಾರೆ.

  ಮೃತರ ಪೋಷಕರು ಕಾಲೇಜು ಆಡಳಿತ ಮಂಡಳಿಯನ್ನು ದೂಷಿಸಿದ್ದಾರೆ. ಆದರೆ, ಈ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚಿಗೆ ಸುದ್ದಿ ಪ್ರಸಾರವಾಗಿಲ್ಲ. ಪ್ರಬಲ ಮಾಧ್ಯಮ ಸಂಸ್ಥೆ ಕಾಲೇಜು ನಡೆಸುತ್ತಿರುವುದು ಇದಕ್ಕೆ ಕಾರಣ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

  English summary
  Atleast 3 girls were killed and dozens injured at a concert of Pakistani singer Atif Aslam at arts complex on Monday, Jun 9, said officials.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X