ಕನ್ನಡಕ್ಕೆ ಬಂದ ಹೊಸ ಕೋಗಿಲೆ ಶ್ರೇಯಾ

ಹುಟ್ಟಿದ್ದು ಬೆಂಗಾಲಿ ಬ್ರಾಹ್ಮಣ ಮನೆತನದಲ್ಲಿ. ಬೆಳೆದದ್ದು ರಾಜಸ್ತಾನದ ಮರುಳುಗಾಡಿನಲ್ಲಿ. ಈ ಮರುಳುಗಾಡಿನ ಕೋಗಿಲೆ ಹಾಡಿದ್ದು ಕನ್ನಡ ಸೇರಿದಂತೆ ಬೆಂಗಾಳಿ,ಮಲೆಯಾಳಂ, ಮರಾಠಿ, ಪಂಜಾಬಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ. ಸೋನು ನಿಗಂ ಮತ್ತು ಕಲ್ಯಾಣ್ ಜಿ ತೀರ್ಪುಗಾರರಾಗಿದ್ದ ಜೀ ವಾಹಿನಿಯ 'ಸರೆಗಮ' ಸ್ಪರ್ಧೆಯಲ್ಲಿ ಶ್ರೇಯಾ ಹಾಡುತ್ತಿದ್ದರೆ ಅಕೆಯ ಕಂಠಕ್ಕೆ ಮಾರು ಹೋಗಿದ್ದರು. ಆಕೆಯ ತಂದೆತಾಯಿಯನ್ನು ಒಪ್ಪಿಸಿ ಮುಂಬೈನಲ್ಲಿ ಶಾಸ್ತ್ರೀಯ ಸಂಗೀತದಲ್ಲಿ 18 ತಿಂಗಳ ಶಿಕ್ಷಣ ಕೊಡಿಸಿದರು. ನಂತರ ಆಕೆ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದು ಇತಿಹಾಸ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೇವದಾಸ್ ಚಿತ್ರದ ಮೂಲಕ ಹಿನ್ನೆಲೆ ಗಾಯಕಿಯಾಗಿ ಪರಿಚಯವಾಗಿ ನಂತರ ಹಿಂತಿರುಗಿ ನೋಡಲೇ ಇಲ್ಲ. ಕನ್ನಡದಲ್ಲಿ ಸವಿಸವಿ ನೆನಪು, ಮಿಲನ, ಹೊಂಗನಸು, ಬೊಂಬಾಟ್, ಅರ್ಜುನ್, ಮಾದೇಶ, ಮೊಗ್ಗಿನ ಮನಸು, ವಂಶಿ ಸೇರಿದಂತೆ ಇಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿದ್ದಾರೆ. ಕನ್ನಡಕ್ಕೆ ಬಂದ ಈ ಕೋಗಿಲೆಯ ಕಂಠ ಕನ್ನಡ ಚಿತ್ರರಂಗಕ್ಕೆ ಒಗ್ಗಿ ಹೋಗಿರುವುದು ಸುಳ್ಳಲ್ಲ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಜಯಂತ್, ಮನೋಮೂರ್ತಿ ಹಾಗೆ ಸುಮ್ಮನೆ
ಮಾದೇಶ ಚಿತ್ರದ ಕಾಯ್ಕಿಣಿ ಸಾಹಿತ್ಯಕ್ಕೆ ಶ್ರೇಯಾ ಗಾನ


Click it and Unblock the Notifications











