»   »  ಮಲೆನಾಡ ಹೆಣ್ಣ ಮೈ ಬಣ್ಣ ಬಲು ಚೆನ್ನ!

ಮಲೆನಾಡ ಹೆಣ್ಣ ಮೈ ಬಣ್ಣ ಬಲು ಚೆನ್ನ!

Subscribe to Filmibeat Kannada
Bhootayyana Maga Ayyu
ಭೂತಯ್ಯನ ಮಗ ಅಯ್ಯು (1974) ಕನ್ನಡ ಚಿತ್ರರಂಗದಲ್ಲಿ ಒಂದು ಹೆಗ್ಗುರುತು. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕಾದಂಬರಿ ಆಧಾರಿತ ಚಿತ್ರ. ಗುಳ್ಳನ ಪಾತ್ರದಲ್ಲಿ ವಿಷ್ಣುವರ್ಧನ್, ಅಯ್ಯು ಪಾತ್ರದಲ್ಲಿ ಲೋಕೇಶ್, ಭೂತಯ್ಯನ ಪಾತ್ರದಲ್ಲಿ ಎಂ.ಪಿ.ಶಂಕರ್ ರ ನಟನೆ ಅದ್ಭುತವಾಗಿ ಮೂಡಿಬಂದಿತ್ತು. ಸಿದ್ಧಲಿಂಗಯ್ಯ ನಿರ್ದೇಶನದಲ್ಲಿ ಬಂದಂತಹ ಮತ್ತೊಂದು ಅವಿಸ್ಮರಣೀಯ ಚಿತ್ರ. ಜಿ.ಕೆ.ವೆಂಕಟೇಶ್ ಸಂಗೀತ, ಆರ್.ಎನ್.ಜಯಗೋಪಾಲ್ ಸಾಹಿತ್ಯಕ್ಕೆ ಜತೆಯಾದ ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ ಕಂಠ ಮಾಧುರ್ಯ ಮಲೆನಾಡಿಗೆ ಕರೆದೊಯ್ಯುತ್ತದೆ.

ಗಂಡು : ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ನಾ ಮನಸೋತೆನೆ ಚಿನ್ನ
ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ

ಹೆಣ್ಣು : ಬಯಲು ಸೀಮೆಯ ಗಂಡು ಬಲುಗುಂಡು
ಜಗಮೊಂಡು ದುಂಡು ಹೂ ಚೆಂಡು
ನನ್ನ ಸರದಾಗೆ ರಸಗುಂಡು
ನನ್ನ ಸರದಾಗೆ ರಸಗುಂಡು

ಗಂಡು : ಮಾತು ನಿಂದು ಹುರಿದಾ ಅರಳು ಸಿಡಿದಂಗೆ
ಕಣ್ಣುಗಳು ಮಿಂಚಂಗೆ ನಿನ್ನ ನಗೆಯಲ್ಲೆ ಸೆಳೆದ್ಯಲ್ಲೆ
ಮನದಾಗೆ ನಿಂತ್ಯಲ್ಲೆ ನನ್ನ ಮನದಾಗೆ ನಿಂತ್ಯಲ್ಲೆ

ಗಂಡು : ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ

ಹೆಣ್ಣು : ಕಾಡಬೇಡಿ ನೋಡಿಯಾರು ನನ್ನೋರು
ನನ್ನ ಹಿರಿಯೋರು ಬಿಡು ನನ್ನ ಕೈಯ್ಯ ದಮ್ಮಯ್ಯ
ತುಂಟಾಟ ಸಾಕಯ್ಯ ಈ ತುಂಟಾಟ ಸಾಕಯ್ಯ

ಗಂಡು : ದೂರದಿಂದ ಬಂದೆ ನಿನ್ನ ಹಂಬಲಿಸಿ
ಗೆಳೆತನ ನಾ ಬಯಸಿ

ಹೆಣ್ಣು : ಅದನಾ ಬಲ್ಲೇ ನಾ ಬಲ್ಲೆ ನಾಚಿ ಮೊಗ್ಗಾದೆ ನಾನಿಲ್ಲೆ
ನಾಚಿ ಮೊಗ್ಗಾದೆ ನಾನಿಲ್ಲೆ

ಗಂಡು : ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ

(ದಟ್ಸ್ ಕನ್ನಡಚಿತ್ರವಾರ್ತೆ)

ಪೂರಕ ಓದಿಗೆ
ಮಲೆನಾಡ ಮದುವೆಯೆಂದರೆ.. ಸುಮ್ನೆನಾ?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada