»   »  'ಕಳ್ಳರ ಸಂತೆ'ಯಲ್ಲಿ ವಿ ಮನೋಹರ್ ರ ವಿಡಂಬನೆ

'ಕಳ್ಳರ ಸಂತೆ'ಯಲ್ಲಿ ವಿ ಮನೋಹರ್ ರ ವಿಡಂಬನೆ

Subscribe to Filmibeat Kannada
V Manohar
ಸುಮನಾ ಕಿತ್ತೂರು ನಿರ್ದೇಶನದಲ್ಲಿ ಬರುತ್ತಿರುವ 'ಕಳ್ಳರ ಸಂತೆ'ಚಿತ್ರಕ್ಕೆ ವಿ ಮನೋಹರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇದೊಂದು ರಾಜಕೀಯ ವಿಡಂಬನಾತ್ಮಕ ಚಿತ್ರವಾಗಿದೆ. ಸಂಗೀತ ಸಂಯೋಜನೆಯ ಜತೆಗೆ ಮನೋಹರ್ ಈ ಚಿತ್ರಕ್ಕೆ ಎರಡು ಹಾಡುಗಳನ್ನು ರಚಿಸಿದ್ದಾರೆ.

ನೋಡಿ ಬನ್ನಿ ನಮ್ಮ ಕಳ್ಳರ ಸಂತೆ...ಶೀರ್ಷಿಕೆ ಗೀತೆ ಸೇರಿದಂತೆ ಕಾಪಾಡಿ...ಕಾಪಾಡಿ... ಎಂಬ ಮತ್ತೊಂದು ಹಾಡು ಮನೋಹರ್ ಅವರ ಲೇಖನಿಯಿಂದ ಹೊರಹೊಮ್ಮಿದೆ. ಈ ಕುರಿತು ಮಾತನಾಡಿದ ಮನೋಹರ್, ನನ್ನ ಜೀವನದಲ್ಲಿ ಬಹಳಷ್ಟು ಭ್ರಷ್ಟರನ್ನು ನೋಡಿದ್ದೇನೆ. ಹಾಗಾಗಿ ಈ ಎರಡು ಹಾಡುಗಳ ಸಾಹಿತ್ಯ ರಚಿಸಲು ನನಗೆ ಅಷ್ಟು ಕಷ್ಟವಾಗಲಿಲ್ಲ ಎನ್ನ್ನುತ್ತಾರೆ.

ಕಳ್ಳರ ಸಂತೆ ಚಿತ್ರದಲ್ಲಿ ಯಶ್, ಹರಿಪ್ರಿಯಾ ಮತ್ತು ಕಿಶೋರ್ ಸೇರಿದಂತೆ ಹಲವರು ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕತೆ ಮತ್ತು ಸಂಭಾಷಣೆ ಅಗ್ನಿ ಶ್ರೀಧರ್ ಅವರದು. ಮಾಸ್ಟರ್ ಹಿರಣ್ಣಯ್ಯ ಮತ್ತು ಚೋ ರಾಮಸ್ವಾಮಿ ಅವರ ರಾಜಕೀಯ ವಿಡಂಬನೆಯನ್ನು ಇಂದಿನ ಸನ್ನಿವೇಶಕ್ಕೆ ತಕ್ಕಂತೆ ಬದಲಾಯಿಸಿಕೊಂಡಿದ್ದೇವೆ. ಸಮಾಜದ ಎಲ್ಲ ಪಾತ್ರಗಳನ್ನು ಚಿತ್ರದಲ್ಲಿ ಕಾಣಬಹುದು. ವಾರಪತ್ರಿಕೆಯೊಂದರ ಸಂಪಾದಕರು ಸಹ ಚಿತ್ರದ ಭಾಗವಾಗಿರುತ್ತಾರೆ ಎನ್ನುತ್ತಾರೆ ಅಗಿ ಶ್ರೀಧರ್.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...