For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಗಾನ ಕೋಗಿಲೆ ಪಿಬಿಎಸ್‌ಗೆ ಶುಭ ಹಾರೈಸಿ

  By Mahesh
  |

  ಪ್ರತಿವಾದಿ ಭಯಂಕರ ಕಾಕಿನಾಡ ಕೋಗಿಲೆಪಿಬಿಎಸ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಅವರು ಸದಾ ನಗು ನಗುತಾ ಇರಲಿ ಎಂಬ ಹಾರೈಕೆಯೊಂದಿಗೆ ಅವರದ್ದೇ ಶಾರೀರದ ಡಾ. ರಾಜ್ ಅಭಿನಯದ ಅಚ್ಚಳಿಯದ ಅಮರ ಗೀತೆಯ ಮೂಲಕ ಅಮೋಘ ಗಾಯಕನಿಗೆ ಶುಭ ಹಾರೈಕೆಗಳು
  ಆಹಹಾ.. ಆಹ.ಹಾ.ಆಹ.ಹ..ಹಹಾ

  ನಗು ನಗುತಾ ನಲೀ ನಲೀ ಎಲ್ಲಾ ದೇವನ ಕಲೆ ಎ೦ದೇ ನೀ ತಿಳಿ

  ಅದರಿ೦ದ ನೀ ಕಲಿ ನಗು ನಗುತಾ ನಲೀ ನಲೀ ಏನೇ ಆಗಲಿ

  ಜಗವಿದು ಜಾಣ ಚೆಲುವಿನ ತಾಣ ಎಲ್ಲೆಲ್ಲು ರಸದೌತಣ

  ನಿನಗೆಲ್ಲೆಲ್ಲೂ ರಸದೌತಣ

  ಲತೆಗಳು ಕುಣಿದಾಗ ಹೂಗಳು ಬಿರಿದಾಗ

  ನಗು ನಗುತಾ ನಲೀ ನಲೀ ಏನೇ ಆಗಲಿ

  ತಾಯಿ ಒಡಲಿನ ಕುಡಿಯಾಗಿ ಜೀವನ

  ತಾಯಿ ಒಡಲಿನ ಕುಡಿಯಾಗಿ ಜೀವನ

  ಮೂಡಿ ಬ೦ದು ಚೇತನ ತಾಳಲೆ೦ದು ಅನುದಿನ

  ಮೂಡಿ ಬ೦ದು ಚೇತನ ತಾಳಲೆ೦ದು ಅನುದಿನ

  ಅವಳೆದೆ ಅನುರಾಗ ಕುಡಿಯುತ ಬೆಳೆದಾಗ

  ನಗು ನಗುತಾ ನಲೀ ನಲೀ ಏನೇ ಆಗಲಿ

  ಗೆಳೆಯರ ಜೊತೆಯಲಿ ಕುಣಿಕುಣಿದು

  ಬೆಳೆಯುವ ಸೊಗಸಿನ ಕಾಲವಿದು

  ಗೆಳೆಯರ ಜೊತೆಯಲಿ ಕುಣಿಕುಣಿದು

  ಬೆಳೆಯುವ ಸೊಗಸಿನ ಕಾಲವಿದು

  ಮು೦ದೆ ಯೌವ್ವನ ಮದುವೆ ಬ೦ಧನ

  ಎಲ್ಲೆಲ್ಲೂ ಹೊಸ ಜೀವನ ಅಹ ಎಲ್ಲೆಲ್ಲೂ ಹೊಸ ಜೀವನ

  ಜೊತೆಯದು ದೊರೆತಾಗ ಜೊತೆಯದು ದೊರೆತಾಗ ಮೈಮನ ಮರೆತಾಗ

  ನಗು ನಗುತಾ ನಲೀ ನಲೀ ಏನೇ ಆಗಲಿ

  ಏರುಪೇರಿನ ಗತಿಯಲ್ಲಿ ಜೀವನ

  ಏರುಪೇರಿನ ಗತಿಯಲ್ಲಿ ಜೀವನ

  ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ

  ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ

  ಅದರೊಳು ಹೊಸದಾದ ರುಚಿ ಇದೆ ಸವಿ ನೋಡ

  ನಗು ನಗುತಾ ನಲೀ ನಲೀ ಏನೇ ಆಗಲಿ

  ಮಹಾನ್ ಗಾಯಕ ಪಿಬಿಎಸ್: ಆಂಧ್ರಪ್ರದೇಶದ ಕಾಕಿನಾಡದ ಫಣೀಂದ್ರ ಸ್ವಾಮಿ, ಶೇಷ ಗಿರಿಯಮ್ಮ ಅವರ ಸುಪುತ್ರ. ಸುಮಾರು 8 ಭಾಷೆಯಲ್ಲಿ ಗಾಯನ. ಆಶುಕವಿತೆ, ಗಜಲ್ ರಚನೆ. ಜಾತಕ ಫಲ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕರಾದರು.

  ರಾಜ್ ಕುಮಾರ್ ಅವರ ದನಿಯಾಗಿ ಹಲವು ದಶಕಗಳ ಕಾಲ ಆಮರಗೀತೆಗಳನ್ನು ಹಾಡಿದ ಪಿಬಿಎಸ್, ಎಲ್ಲಾ ಬಗೆಯ ಸಂಗೀತವನ್ನು ಅರಗಿಸಿಕೊಂಡವರು. ಈಗಲೂ ಮೈಕ್ ಸಿಕ್ಕರೆ ಸ್ವರಚಿತ ಕವನ ಓದಿ, ಹಾಡಿ ಎಲ್ಲರನ್ನು ರಂಜಿಸುವ ಉತ್ಸಾಹದ ಚಿಲುಮೆಯಾಗಿರುವ ಶ್ರೀನಿವಾಸ್ ಮುಂದಿನ ಪೀಳಿಗೆಗೆ ಆದರ್ಶಪ್ರಾಯರು. 80ರ ಹರೆಯದ ಇವರಿಗೆ ಸಂಗೀತವೇ ಉಸಿರು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X